ಕೃಷಿ ಮಾರುಕಟ್ಟೆ ನಿರ್ದೆಶಕರಿಗೆ ಮನವಿ
--------------------------------
--------------------------------
ಹುಳಿಯಾರು: ಇಲ್ಲಿನ ಕೃಷಿ ಮಾರುಕಟ್ಟೆ ಕಾರ್ಯದರ್ಶಿಯ ನಿರ್ಲಕ್ಷ್ಯತೆಯಿಂದ ಎಪಿಎಂಸಿ ಬರಬೇಕಿದ್ದ ಲಕ್ಷಾತರ ರೂ. ಸೆಸ್ ವಂಚನೆ ಆಗಿದ್ದು ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವಂತೆ ಎಪಿಎಂಸಿ ನಿರ್ದೆಶಕ ರಹಮತ್ ಉಲ್ಲಾ ಸಾಬ್ ಆಗ್ರಹಿಸಿದ್ದಾರೆ.
ಹುಳಿಯಾರಿಗೆ ಸಂಕ್ರಾಂತಿ ಹಬ್ಬದಿಂದ ಇದುವರೆಗೂ ೨೦ ಲೋಡ್ ಬೆಲ್ಲ ಬಂದಿದೆ. ಮಾರುಕಟ್ಟೆಗೆ ಲೋಡ್‌ಗಟ್ಟಲೆ ಕೊಬ್ಬರಿ, ಕೌಟು ಬಂದೋಗುತ್ತಿದೆ. ಆದರೆ ಕಾರ್ಯದರ್ಶಿ ಕಛೇರಿಯಲ್ಲಿ ಇಲ್ಲದೆ ಲೋಡ್ ಚೆಕ್ ಮಾಡದೆ ವರ್ತಕರು ಕಟ್ಟಿದಷ್ಟು ಸೆಸ್ ಕಟ್ಟಿಸಿಕೊಂಡು ಕೈಕಟ್ಟಿ ಕುಳಿತಿದ್ದಾರೆ. ಇದರ ಬಗ್ಗೆ ಗುಮಸ್ತರನ್ನು ಕೇಳಿದರೆ ನನಗೂ ಇದಕ್ಕೂ ಸಂಬಂಧವಿಲ್ಲ ಕಾರ್ಯದರ್ಶಿ ಬಂದಾಗ ಮಾತನಾಡಿಕೂಳ್ಳಿ ಎಂದು ಹೇಳುತ್ತಾರೆ. ಅಲ್ಲದೆ ಹುಳಿಯಾರು ಎ.ಪಿ.ಎಂ.ಸಿ.ಯಲ್ಲಿ ತೆಂಗಿನಕಾಯಿ ಹರಾಜಿನ ಬಗ್ಗೆ ಅದ್ಯಕ್ಷರು ಡೈರಕ್ಟರುಗಳು ಸಭೆ ಕರೆದು ಹರಾಜಿನ ಬಗ್ಗೆ ತಿರ್ಮಾನ ತಗೆದುಕೂಂಡು ಒಪ್ಪಿದರೂ ಸಹ ಕಾರ್ಯದರ್ಶಿ ಆರು ತಿಂಗಳಿನಿಂದಲೂ ತಿರ್ಮಾನ ತೆಗೆದುಕೂಳ್ಳುತ್ತಿಲ್ಲ ಕಾರ್ಯದರ್ಶಿ ಕೇಳಿದರೆ ನಾನು ಆಪೀಸ್‌ನಲ್ಲಿ ಇರುವುದಕ್ಕೆ ಆಗಲ್ಲಾ ಹೂರಗಡೆ ಮಿಟಿಂಗ್ ಆಟೆಂಡ್ ಮಾಡುತ್ತಿನಿ ಅಂತ ಉದಾಸಿನ ಉತ್ತರ ನೀಡುತ್ತಾರೆ. ಹಾಗಾಗಿ ಸಂಬಂಧ ಪಟ್ಟ ಮೇಲಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಆಗಿರುವ ಅವ್ಯವಹಾರ ವನ್ನು ಕೂಡಲೇ ಪತ್ತೆಹಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ