ಹುಳಿಯಾರು ಸಮೀಪದ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಗ್ರಾಮದೇವತೆ ಶ್ರೀ ಕರಿಯಮ್ಮದೇವಿಯವರ ವೈಭವಯುತ ಜಾತ್ರಾಮಹೋತ್ಸವ ಏ.28ರ ಗುರುವಾರದಿಂದ ಪ್ರಾರಂಭಗೊಂಡು ಮೇ.3ರ ಮಂಗಳವಾರದವರೆಗೆ ಒಟ್ಟು ಆರು ದಿನಗಳ ಕಾಲ ಜರುಗಲಿದೆ.
ಏ..28ರ ಗುರುವಾರ ಸಂಜೆ ಧ್ವಜಾರೋಹಣ ಕಂಕಣಧಾರಣೆ,ಅಂಕುರಾರ್ಪಣೆ ,ಅಮ್ಮನವರ ಮಧುವಣಗಿತ್ತಿ ಕಾರ್ಯ ಮತ್ತು ಚಿಕ್ಕಬಿದರೆ ಗ್ರಾಮಸ್ಥರಿಂದ ಮಡಿಲಕ್ಕಿ ಸೇವೆ ನಡೆಯಲಿದೆ.
ಏ.29ರ ಶುಕ್ರವಾರ ದೊಡ್ಡಬಿದರೆ ಕರಿಯಮ್ಮ ದೇವಿ, ಪೋಚಕಟ್ಟೆ ಕರಿಯಮ್ಮದೇವಿ ಹಾಗೂ ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರುಗಳ ಆಗಮನ.ಸಂಜೆ ಬಾನ ಹಾಗೂ ಮಡಿಲಕ್ಕಿ ಸೇವೆ.
ಏ.30ರ ಶನಿವಾರ ಬೆಳಿಗ್ಗೆ ಚಿಕ್ಕಬಿದರೆ ಕೆರೆಯ ಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು.ನಂತರ ಅಗ್ನಿಕುಂಡ ಪ್ರವೇಶ,ಘಟಪೂಜೆ ಹಾಗೂ ಮಹಾಮಂಗಳಾರತಿ, ನಂತರ ಭಕ್ತಾದಿಗಳಿಂದ ಅನ್ನಸಂತರ್ಪಣೆ ನಡೆಯಲಿದೆ.
ಮೇ1ರ ಭಾನುವಾರ " ಸಿಡಿ ಮಹೋತ್ಸವ " ಆರತಿ,ಪಾನಕ ಗಾಡಿ ಉತ್ಸವ. ನಂತರ ಕಲ್ಲಹಳ್ಳಿ ಗ್ರಾಮಸ್ಥರಿಂದ ಅನ್ನಸಂತರ್ಪಣೆ ನಡೆಯಲಿದೆ.
ಮೇ..2ರ ಸೋಮವಾರ ಬೆಳಿಗ್ಗೆ ಅಮ್ಮನವರ ವೈಭವಯುತ " ಬ್ರಹ್ಮರಥೋತ್ಸವ "ನಡೆದು ನಂತರ ಚಿಕ್ಕಬಿದರೆ ಗ್ರಾಮಸ್ಥರಿಂದ ಹಾಗೂ ವಾಯುಪುತ್ರ ಗೆಳೆಯರ ಬಳಗದಿಂದ
ಅನ್ನಸಂತರ್ಪಣೆ ನಡೆಯಲಿದೆ.
ತಾ.3ರ ಮಂಗಳವಾರ ಉದ್ಭವ ಶ್ರೀ ದುರ್ಗಮ್ಮನವರ ಆರತಿಬಾನ ಸೇವೆ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ಚಿಕ್ಕಬಿದರೆ ಹಾಗೂ ಸುತ್ತಮುತ್ತಲ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಚಿಕ್ಕಬಿದರೆ ಕರಿಯಮ್ಮ ದೇವಿ ಸಮಿತಿಯವರು ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ