ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿಯ ಬ್ರಹ್ಮರಥೋತ್ಸವವು ಭಾರಿ ಜನಸ್ತೋಮದ ನಡುವೆ ಅತ್ಯಂತ ವಿಜೃಂಭಣೆಯಿಂದ ನೆರವೇರಿತು.
![]() |
ಹುಳಿಯಾರು ಹೋಬಳಿ ದಸೂಡಿ ಗ್ರಾಮದ ಶ್ರೀ ಆಂಜನೇಯಸ್ವಾಮಿ ಬ್ರಹ್ಮರಥೋತ್ಸವವು ಅಪಾರ ಸಂಖ್ಯೆಯ ಭಕ್ತರ ಹರ್ಷೋದ್ಗಾರದಲ್ಲಿ ವೈಭವಯುತವಾಗಿ ಜರುಗಿತು. |
ರಥೋತ್ಸವದ ಅಂಗವಾಗಿ ಮುಂಜಾನೆಯಿಂದಲೇ ಸ್ವಾಮಿಯವರ ಧಾರ್ಮಿಕ ಕೈಂಕರ್ಯಗಳು ನಡೆಯಿತು.ಸ್ವಾಮಿಯ ಪೂಜೆಯಿಂದ ಹಿಡಿದು, ಪತ್ತು, ನಗಾರಿ, ಧ್ವಜ, ಸೂರ್ಯಪಾನ, ಚಂದ್ರಪಾನ, ಚಾಮರ, ಮಕರ ತೋರಣ ಹೀಗೆ ಎಲ್ಲಾ ವಿಧದ ಬಿರುದಾವಳಿಗಳನ್ನು ಬ್ರಾಹ್ಮಣ ವರ್ಗದವರೇ ಹಿಡಿಯುವುದು ಇಂದಿನ ವಿಶೇಷವಾಗಿದ್ದು ಆಂಜನೇಯಸ್ವಾಮಿಯವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಭಕ್ತರು ಅನತಿ ದೂರದಿಂದಲೇ ಬಾಳೆ ಹಣ್ಣನ್ನು ರಥದ ಕಲಶಕ್ಕೆ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.ಮಹಿಳೆಯರು ರಥದ ಮೇಲಿದ್ದ ಸ್ವಾಮಿಗೆ ಹಣ್ಣುಕಾಯಿ ಮಾಡಿಸುವಲ್ಲಿ ಮುಂದಾಗಿದ್ದರು.ಮೂವತ್ತು ಅಡಿಗೂ ಎತ್ತರದ ಈ ಮಹಾರಥೋತ್ಸವವನ್ನು ವೀಕ್ಷಿಸಲು ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ರಥೋತ್ಸವದ ನಂತರ ಬ್ರಾಹ್ಮಣರಿಗೆ ಸಂತರ್ಪಣೆ ನಡೆಯಿತಲ್ಲದೆ, ದೇವಾಲಯ ಸಮಿತಿ,ಆರ್ಯವೈಶ್ಯ ಜನಾಂಗದವರಿಂದ,ಯುವಕ ಸಂಘದವರಿಂದ ಭಕ್ತಾಧಿಗಳಿಗೆ ಪಾನಕಪನಿವಾರ,ಫಲಾಹಾರ ಸೇವೆ ನಡೆಯಿತು. ರಥಕ್ಕೆ ಹಾಗೂ ಶ್ರೀ ಸ್ವಾಮಿಯವರಿಗೆ ಹಾಕಿದ ಹಾರಗಳನ್ನು ಹರಾಜಿನಲ್ಲಿ ಸಹಸ್ರಾರು ರೂಪಾಯಿಗಳಿಗೆ ಕೊಳ್ಳುವುದರ ಮೂಲಕ ಭಕ್ತಿಭಾವ ಸಮರ್ಪಿಸಿದರು.
ಆರ್ಯವೈಶ್ಯ ಮಹಿಳಾ ಮಂಡಳಿ , ಶ್ರೀ ಮಾರುತಿ ಭಜನಾಮಂಡಳಿ ಹಾಗೂ ಎಮ್ಮೇಕರಕೆಹಟ್ಟಿ “ಶ್ರೀರಾಮ ಭಜನಾ ಮಂಡಳಿ”ಯವರಿಂದ ಅಖಂಡ ಭಜನೆ ಹಾಗೂ ಕೆಳಗಲ ಗೊಲ್ಲರಹಟ್ಟಿ ಯಾದವ ತಂಡಗಳ ವಿಶೇಷ ಕೋಲಾಟವಂತು ಭಕ್ತರ ಮನದಲ್ಲಿ ಪುಳಕ ಉಂಟು ಮಾಡಿತು.ಊರಿನ ತುಂಬೆಲ್ಲಾ ಕೇಸರಿಬಣ್ನದ ಮಾರುತಿ ಧ್ವಜ ರಾರಾಜಿಸುತ್ತಿತ್ತು. ಶ್ರೀಸೇನೆಯ ಸ್ವಯಂಸೇವಕರು ಶಿಸ್ತಿನಿಂದ ಸಕಲ ಕಾರ್ಯಗಳಲ್ಲೂ ತೊಡಗಿಕೊಂಡು ನಿರ್ವಹಿಸಿದರು.
ಬೇಸಿಗೆಯ ಬಿಸಿಲಝಳವನ್ನು ಲೆಕ್ಕಿಸದೆ ದಬ್ಬಗುಂಟೆ,ರಂಗನಕೆರೆ,ಹೊಯ್ಸಳಕಟ್ಟೆ,ಕಲ್ಲೇನಹಳ್ಳಿ, ಮರೆನಡು,ಹುಳಿಯಾರು,ಬೆಳ್ಳಾರ ಸೇರಿದಂತೆ ದಸೂಡಿ ಸುತ್ತಮುತ್ತಲ ಹತ್ತಾರೂ ಹಳ್ಳಿಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದರ್ಶನ ಪಡೆದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ