ವಿಷಯಕ್ಕೆ ಹೋಗಿ

ಹುಳಿಯಾರು ಪಂಚಾಯ್ತಿಯಲ್ಲಿ "ಬಿಲ್ "ವೀರರು.

ಪಂಚಾಯ್ತಿ ಸಭೆಯಲ್ಲಿ ಆಕ್ಷೇಪಣೆ,ಆರೋಪಗಳ ಸುರಿಮಳೆ
---------------------------------------
ಹುಳಿಯಾರು:ಗ್ರಾಮ ಪಂಚಾಯ್ತಿಯಲ್ಲಿ ಆಯವ್ಯಯಗಳ ಮಂಡನೆಯಾಗಿಲ್ಲ,ಸ್ಥಾಯಿ ಸಮಿತಿಗಳ ರಚನೆಯಾಗಿಲ್ಲ,ಇಂಡೆಂಟ್ ನೀಡುವ ನೆಪದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದ್ದು ಯಾವುದಕ್ಕೂ ಲೆಕ್ಕಬುಕ್ಕಿಲ್ಲ,ಸಿಸಿಟಿವಿ ಅಳವಡಿಸಲು ಪಡೆದ ಹಣ ಏನಾಯ್ತೆಂದು ಗೊತಿಲ್ಲ,ಎನ್.ಆರ್.ಇ.ಜೆಯಲ್ಲಿಯೂ ಸಾಕಷ್ಟು ಅವ್ಯವಹಾರ ನಡೆದಿದ್ದು ಕಾಮಗಾರಿ ನಡೆಯದೆ ಬಿಲ್ ಮಾಡಿದೆ ಎಂದು ಹೇಳಿದರೂ ಗಮನ ಮಾಡುತ್ತಿಲ್ಲ,ಹಿಂದಿನ ಪಿಡಿಓ ಅವಧಿಯ ಅವ್ಯವಹಾರಗಳ ಬಗ್ಗೆ ಸೊಲ್ಲೆತ್ತುತ್ತಿಲ್ಲ ಹೀಗೆ ಹತ್ತು ಹಲವು ಆರೋಪ ಹಾಗೂ ಆಕ್ಷೇಪಣೆಗಳ ನಡುವಯೆ ಹುಳಿಯಾರು ಗ್ರಾಮ ಪಂಚಾಯ್ತಿಯ ವಿಶೇಷ ಸಭೆ ನಡೆಯಿತು.
ಹುಳಿಯಾರು ಗ್ರಾಮಪಂಚಾಯ್ತಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಅಧ್ಯಕ್ಷೆ ಗೀತಾ ಪ್ರದೀಪ್,ಉಪಾಧ್ಯಕ್ಷ ಗಣೇಶ್,ಪಿಡಿಓ ಸಿದ್ಧರಾಮಣ್ಣ ಇದ್ದಾರೆ.
           ಗೀತಾ ಪ್ರದೀಪ್ ಅಧ್ಯಕ್ಷತೆಯಲ್ಲಿ ನಡೆದ ಹುಳಿಯಾರು ಗ್ರಾಮಪಂಚಾಯ್ತಿಯ ವಿಶೇಷ ಸಭೆಯಲ್ಲಿ ಬಹುಪಾಲು ಸಮಯ ಚರ್ಚೆಯ ವಿಷಯಕ್ಕಿಂತ ಆರೋಪಗಳಿಗೆ ಮೀಸಲಾಗಿ ಸದಸ್ಯರುಗಳು ಸಮಸ್ಯೆಗಳ ಪಟ್ಟಿಯನ್ನೆ ಬಿಚ್ಚಿಟ್ಟರು. 

                 ಮೊದಲಿಗೆ ಆಯಾವ್ಯಯದ ಬಗ್ಗೆ ಚರ್ಚೆ ಸಾಗಿ ಇದುವರೆಗೂ ಈ ಬಗ್ಗೆ ಸದಸ್ಯರುಗಳೊಂದಿಗೆ ಚರ್ಚೆ ಯಾಕೆ ನಡೆಸಿಲ್ಲ.ಪಂಚಾಯ್ತಿಯಲ್ಲಿ ಕಳೆದ ಸಾಲಿನ ಹಾಗೂ ಈ ಸಾಲಿನ ಲೆಕ್ಕ ಕೊಡಬೇಕೆಂದು.ಹಾಗೂ ಕಾಮಗಾರಿಗಳಿಗೆಂದು ನೀಡಿರುವ ಬಿಲ್ ಲೆಕ್ಕಾಚಾರ ಸಭೆಗೆ ನೀಡಬೇಕೆಂದು ಸದಸ್ಯ ಚಂದ್ರಶೇಖರ್ ಪಟ್ಟುಹಿಡಿದರು.ಎಷ್ಟೊ ಕಾಮಗಾರಿಗಳ ನಡೆಯದಿದ್ದು ಬಿಲ್ ಮಾತ್ರ ಪಾಸಾಗಿದ್ದು ಕೇವಲ ಇಂಡೇಂಟ್ ಮೇಲೆ ಸಹಿ ಮಾಡಿ ಲಕ್ಸಾಂತರ ರೂಪಾಯಿ ಪಾಸ್ ಮಾಡಿರುವುದಾದರೂ ಹೇಗೆಂದು ಶಂಕರ್ ಆಕ್ಷೇಪ ಎತ್ತಿದರು.


                  ಎನ್.ಆರ್.ಇ.ಜೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಕಾಮಗಾರಿ ನಡೆಯದೆ ಬಿಲ್ ಮಾಡಲಾಗಿದ್ದು,ಈ ಬಗ್ಗೆ ತನಿಖೆ ನಡೆದಲ್ಲಿ ಅವ್ಯವಹಾರ ಪತ್ತೆ ಮಾಡಬಹುದಾಗಿದೆ, ಈ ಬರಗಾಲದಲ್ಲಿ ಸಾಕಷ್ಟು ಕಾಮಗಾರಿಗಳನ್ನು ಮಾಡಬೇಕಾಗಿದ್ದು, ಇದಕ್ಕಾಗಿ ನಿಯೋಜನೆಗೊಂಡಿರುವ ಇಂಜಿನಿಯರ್ ಸ್ಥಳಕ್ಕೆ ಆಗಮಿಸದೆ ಮಾಹಿತಿ ನೀಡದೆ ನಿರ್ಲಕ್ಷಿಸಿದ್ದಾರೆ ಎಂದು ರಾಘವೇಂದ್ರ ಆರೋಪಿಸಿದರು.

                ಪಂಚಾಯ್ತಿಯಲ್ಲಿ ವಾರ್ಡ್ ಸಭೆ ಹಾಗೂ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಫಲಾನುಭವಿಗಳನ್ನು ಬೇಕೆಂದು ಕೈಬಿಟ್ಟು ಮತ್ತೆ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ಲಂಚಕ್ಕಾಗಿ ಒತ್ತಾಯಿಸುವ ತಾಪಂ ಕಂಪ್ಯೂಟರ್ ಆಪರೇಟರ್ ನಿರ್ಮಲಾರನ್ನು ಇಂದಿನ ಸಭೆಗೆ ಕರೆಸುವಂತೆ ನಿರ್ಣಯ ಮಾಡಿದ್ದರೂ ಸಹಿತ ಆಕೆಯನ್ನು ಕರೆಸಿಲ್ಲದ್ದರ ಬಗ್ಗೆ ಹಾಗೂ ಆಕೆಯ ವಿರುದ್ಧ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ಸಲ್ಲಿಸುವಂತೆ ಎಲ್ಲಾ ಸದಸ್ಯರು ಒತ್ತಾಯಿಸಿದರು.ಮುಂದಿನ ಸಭೆಗೆ ಖಡ್ಡಾಯವಾಗಿ ಕರೆಸಲೇ ಬೇಕೆಂದು ಪಟ್ಟು ಹಿಡಿದರು.


                    ಸಂತೆ ಹಾಗೂ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರು ಹಾಗೂ ಅಗತ್ಯ ಸೌಕರ್ಯ ಒದಗಿಸುವ ಬಗ್ಗೆ ಚರ್ಚೆ ನಡೆದು ಬಸ್ ನಿಲ್ದಾಣದಲ್ಲಿ ಹಾಗೂ ಪಶುವೈದ್ಯಕೀಯ ಆಸ್ಪತ್ರೆ ಬಳಿ ಸಿಸ್ಟನ್ ಇಟ್ಟು ನೀರು ಸರಬರಾಜು ಮಾಡಲು ಒಪ್ಪಿಗೆ ಪಡೆಯಲಾಯಿತು.ಬಸ್ ನಿಲ್ದಾಣದಲ್ಲಿ ಎಲ್ಲರ ಅನುಕೂಲಕ್ಕಾಗಿ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಸಂಸದರು ಹಾಗು ಶಾಸಕರನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.

                ಹುಳಿಯಾರಿಗೆ ಬೋರನಕಣಿವೆಯಿಂದ ಸರಬರಾಜಗುತ್ತಿರುವ ಕುಡಿಯುವ ನೀರು ಕಲ್ಮಶವಾಗಿದ್ದು ದುರ್ವಾಸನೆಯಿಂದ ಕೂಡಿರುವ ನೀರನ್ನು ನಿತ್ಯ ಬಳಕೆಗೂ ಸಹ ಬಳಸಲು ಅಸಾದ್ಯವಾಗಿದೆ ಕಳೆದ ೧೦ ವರ್ಷಗಳಿಂದಲೂ ಣಿರಿನ ಫಿಲ್ಟರ್ ಗೆ ಬಳಸುವ ಮರಳನ್ನು ಬದಲಾಯಿಸಿಲ್ಲ.ಕೇಳಿದರೆ ಹಣದ ಕೊರತೆ ಎನ್ನುತ್ತಾರೆ ಎಂದು ಅಹ್ಮದ್ ಖಾನ್ ಪ್ರಶ್ನಿಸುತ್ತಿದ್ದಂತೆ ಎಲ್ಲಾ ಸದಸ್ಯರು ಪಿಡಿಓ ಅವರನ್ನು ತರಾಟೆಗೆ ತೆಗೆದುಕೊಂಡರು.ಈ ಬಗ್ಗೆ ನಡೆದ ಚರ್ಚೆಯಲ್ಲಿ ಪಿಲ್ಟರ್ ಕ್ಲೀನ್ ಮಾಡಲು ಸುಮಾರು ೧೪ ಲಕ್ಷ ತಗಲಲಿದ್ದು ಪಂಚಾಯಿತಿಯಲ್ಲಿ ಹಣವಿಲ್ಲದ ಕಾರಣ ಸಚಿವರ, ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಸರ್ಕಾರದ ಅನುದಾನ ಪಡೆಯಲು ತೀರ್ಮಾನಿಸಲಾಯಿತು.

                     ಪಿಡಿಓ ಹಾಗೂ ಅಧ್ಯಕ್ಷರ ವೈಫಲ್ಯದಿಂದ ಕಳೆದ ತಿಂಗಳು ನಡೆಯಬೇಕಿದ್ದ ಪುಟ್‌ಪಾತ್ ಅಂಗಡಿಗಳ ಹರಾಜು ಕೈಬಿಟ್ಟಿದ್ದರಿಂದ ಹಾಗೂ ಮಳಿಗೆ ಹರಾಜು ಮುಂದೂಡಿದ್ದರಿಂದ ಸುಂಕ ವಸೂಲಿಯಾಗದೆ ಪಂಚಾಯಿತಿಗೆ ಬರುವ ಆದಾಯ ಕಳೆದೊಂದು ತಿಂಗಳಿನಿಂದ ಕುಂಠಿತವಾಗಿದ್ದು ಇದಕ್ಕೆ ಇವರಿಬ್ಬರೆ ಹೊಣೆ ಎಂದು ರಾಘವೇಂದ್ರ ಹಾಗೂ ಜಬೀಉಲ್ಲಾ ಧ್ವನಿ ಎತ್ತಿದರು.ಸುದೀರ್ಘ ಚರ್ಚೆ ನಡೆದು ಪುಟ್ ಪಾತ್ ತೆರವು ಪ್ರಸ್ತಾಪ ಸದ್ಯಕ್ಕೆ ಕೈಬಿಟ್ಟು ಹಿಂದಿನಂತೆ ಸುಂಕ ವಸೂಲಾತಿ ಮಾಡುವಂತೆ ಹಾಗೂ ಬಸ್ ನಿಲ್ದಾಣ ಮತ್ತು ರಾಜ್ ಕುಮಾರ್ ರಸ್ತೆಯ ಅಂಗಡಿಗಳ ಸುಂಕ ವಸೂಲಾತಿಗಾಗಿ ಕೂಡಲೆ ಹರಾಜಿನ ದಿನ ನಿಗದಿ ಮಾಡಿ ಹರಾಜು ನಡೆಸುವಂತೆ ಒಪ್ಪಿಗೆ ಪಡೆಯಲಾಯಿತು.


                 ಕೆಲವೊಂದು ಸದಸ್ಯರುಗಳು ತಮ್ಮ ಸ್ವಂತ ಖರ್ಚಿನಲ್ಲೆ ಅವರವರ ಬ್ಲಾಕ್ ಗಳಲ್ಲಿ ಕಾಮಗಾರಿ ಮಾಡಿಸಿದ್ದರ ಬಗ್ಗೆ ಪತ್ರಿಕೆಗಳಲ್ಲೂ ಅಬ್ಬರದ ಪ್ರಚಾರ ಪಡೆದಿದ್ದರಲ್ಲದೆ ಈ ಬಗ್ಗೆ ನಡೆದ ಚರ್ಚೆಯಲ್ಲಿ ನಮಗೆ ಕಾಮಗಾರಿಯ ಹಣ ಬೇಡವೆಂದಿದ್ದರು ಸಹ ಅವರ ಹೆಸರಿನಲ್ಲಿ ಕೇವಲ ಇಂಡೆಂಟ್ ಗಳ ಮೇಲೆಯೇ ಪರಿಶೀಲನೆ ಕೂಡ ಮಾಡದೆ ಹಣ ಕೊಟ್ಟಿದ್ದೇಕೆಂದು ಗೀತಾ ಬಾಬು ಆಕ್ಷೇಪಣೆ ಮಾಡಿದ್ದಲ್ಲದೆ ಈ ರೀತಿ ಮಾಡಿರುವ ಬಿಲ್ ಗಳಲ್ಲಿ ಸಾಕಷ್ಟು ಅವ್ಯವಹಾರವಾಗಿರುವ ಬಗ್ಗೆ ದಾಖಲೆ ಸಮೇತ ಪ್ರದರ್ಶಿಸಿದರು.

                ಇದಕ್ಕೆ ಉತ್ತರಿಸಿದ ಪಿಡಿಓ ಸಿದ್ದರಾಮಯ್ಯ ನಾನ್ಯಾವುದೇ ಬಿಲ್ ಪಾಸ್ ಮಾಡಿಲ್ಲ,ಇದ್ಯಾವುದು ನನ್ನ ಅವಧಿಯಲ್ಲಿ ನಡೆದಿಲ್ಲ,ಅಲ್ಲದೆ ಇದಕ್ಕೆ ಬೇಕಾದ ದಾಖಲೆ ಪರಿಶೀಲಿಸೋಣವೆಂದರೆ ಯಾವುದಕ್ಕೂ ಲೆಖ್ಕವಿಟ್ಟಿಲ್ಲ,ನಾನೇನೂ ಮಾಡೋಣವೆಮ್ದ ಅಸಹಾಯಕತೆ ವ್ಯಕ್ತಪಡಿಸಿದರು.

                 ಬಸ್ ನಿಲ್ದಾಣದ ಮಳಿಗೆ ಹರಾಜು ಮೂಲಭೂತ ಸೌಲಭ್ಯ ಕಲ್ಪಿಸಿಲ್ಲವೆಂದು ಅರ್ಧಕ್ಕೆ ನಿಂತಿದ್ದು ಇದರ ಹರಾಜು ಸಧ್ಯಕ್ಕೆ ಕೈಬಿಟ್ಟೂ ಸುಣ್ಣಬಣ್ಣ,ವಿದ್ಯುತ್ ಸೌಲತ್ತು ಕೊಟ್ಟನಂತರ ತೀರ್ಮಾನಿಸೋಣ. ಸಧ್ಯಕ್ಕೆ ತುರ್ತಾಗಿ ಬಸ್ ನಿಲ್ದಾಣದ ಶೌಚಾಲಯ ದುರಸ್ತಿ ಪಡಿಸಿ ಬೇರೊಬ್ಬರಿಗೆ ನಿರ್ವಹಣೆ ಮಾಡಲು ನೇಮಿಸಲು ತಿಳಿಸಲಾಯಿತು.


ಸಭೆಯಲ್ಲಿ ಸದಸ್ಯರುಗಳಾದ ದಸೂಡಿ ಚಂದ್ರಣ್ಣ,ಜಬೀಉಲ್ಲಾ,ಡಾಬಾ ಸೂರಪ್ಪ,ಹೇಮಂತ್,ಪುಟ್ಟರಾಜು, ಡಿಶ್ ಬಾಬು,ವೆಂಕಟೇಶ್,ಕಾಯಿ ಕುಮಾರ್,ಕೆಂಪಮ್ಮ,ಕರಿಯಮ್ಮ,ಬಿಂದು ರಮೇಶ್,ಗೀತಾಬಾಬು, ಸಿದ್ದಗಂಗಮ್ಮ,ಪುಟ್ಟಿಬಾಯಿ,ಕಾರ್ಯದರ್ಶಿ ಉಮಾಮಹೇಶ್,ಇನ್ನಿತರರಿದ್ದರು.
----------------------------------------------
ಪಂಚಾಯಿತಿಯಲ್ಲಿ ಸಿಬ್ಬಂದಿ ವರ್ಗದ ಸಂಬಳಕ್ಕಾಗಿ ಪ್ರತಿ ತಿಂಗಳು ೨.೨೫ ಲಕ್ಷ ಬೇಕಿದ್ದು ವಾರ್ಷಿಕ ಇದೊಂದು ಬಾಬಿಗಾಗಿಯೇ ೩೦.೦೦ ಲಕ್ಷ ಖರ್ಚಾಗುತ್ತಿದ್ದು ಸರ್ಕಾರದಿಂದ ಕೇವಲ ವಾರ್ಷಿಕ ೪.೦ ಲಕ್ಷ ಅನುದಾನ ಬರುತ್ತಿದ್ದು ಅಗತ್ಯ ಮೂಲಬೂತ ಸೌಕರ್ಯ ಕಲ್ಪಿಸಲು ದುಸ್ತರವಾಗಿದೆ.:ಪಿಡಿಓ ,ಸಿದ್ಧರಾಮಯ್ಯ
------------------------------------------
ನಮ್ಮ ಪಂಚಾಯಿತಿಯಲ್ಲಿ ನಡೆಯುವ ವ್ಯವಹಾರಗಳ ಬಗ್ಗೆ ಸದಸ್ಯರಿಗಿರಲಿನನಗೇ ಸರಿಯಾದ ಮಾಹಿತಿ ಲಭ್ಯವಿಲ್ಲ.ಅಧ್ಯಕ್ಷರು ಹಾಗೂ ಪಿ.ಡಿ.ಓ ನನ್ನ ಗಮನಕ್ಕೂ ತಾರದೆ ಏಕ ಪಕ್ಷಿಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ:ಗಣೇಶ್ ,ಪಂಚಾಯ್ತಿ ಉಪಾಧ್ಯಕ್ಷ

--------------------------------------------------

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.