ಹುಳಿಯಾರು:ಪಟ್ಟಣದ ಮಾರುತಿ ಸಂಗೀತ ಶಾಲೆಯಿಂದ ಏ.೧೫ರಿಂದ ಹತ್ತುದಿನಗಳ ಕಾಲದವರೆಗೆ ಗಾಂಧಿಭವನದಲ್ಲಿ ಬೆಳಿಗ್ಗೆ ೯ ರಿಂದ ೧೧ ರವರೆಗೆ ಸಂಗೀತ ಶಿಬಿರ ಹಮ್ಮಿಕೊಳ್ಳಲಾಗಿದೆ.
ಶಿಬಿರದಲ್ಲಿ ಭಕ್ತಿಗೀತೆ,ಭಾವಗೀತೆ,ವಚನಗಳು ಹಾಗೂ ದಾಸರ ಪದಗಳನ್ನು ಹೇಳಿಕೊಡಲಾಗುವುದು. ಹುಳಿಯಾರು ಮತ್ತು ಸುತ್ತಮುತ್ತಲ ಗ್ರಾಮಗಳ ಸಂಗೀತಾಸಕ್ತರು ಶಿಬಿರದ ಸದುಪಯೋಗ ಪಡಿಸಿಕೊಳ್ಳುವಂತೆ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಬಡಗಿ ರಾಮಣ್ಣ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ