ಹುಳಿಯಾರು: ಹುಳಿಯಾರು ಹೋಬಳಿ ಗೌಡಗೆರೆ ಗ್ರಾಮಕ್ಕೆ ಸೇರಿದ ಸರ್ವೆ ನಂ. ೨೦ರ ೧೨ ಎಕರೆ ೨೦ಗುಂಟೆ ಜಮೀನು ಗೋಮಾಳವಾಗಿದ್ದು ಇದನ್ನು ಅತಿಕ್ರಮಿಸಿಕೊಡಿರುವ ಕೆಲ ಪ್ರಭಾವಿಗಳು ಇಲ್ಲಿ ಇಟ್ಟಿಗೆ ಕಾರ್ಖಾನೆ ನಿರ್ಮಿಸಿಕೊಂಡಿದ್ದಾರೆ.ಅಲ್ಲದೆ ಮಣ್ಣು ಮಾರುವುದರಿಂದ ಹಿಡಿದು ಇನ್ನಿತರೆ ವಾಣಿಜ್ಯ ಉದ್ದೇಶಕ್ಕೆ ಬಳಸುತಿದ್ದು ಈ ಬಗ್ಗೆ ಕಂದಾಯ ಇಲಾಖೆಯ ಅಧಿಕಾರಿಗಳು ಅವರನ್ನು ಗೋಮಾಳದಿಂದ ತೆರವುಗೊಳಿಸಿ ಗೋಮಾಳವನ್ನು ಕಾಪಾಡಿಕೊಳ್ಳುವಂತೆ ಕರಡಿಸಾಬರ ಪಾಳ್ಯದ ಗ್ರಾಮಸ್ಥರು ಉಪವಿಭಾಗಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಹುಳಿಯಾರು ಹೋಬಳಿ ಗೌಡಗೆರೆ ಗ್ರಾಮಕ್ಕೆ ಸೇರಿದ ಸರ್ವೆ ನಂ. ೨೦ ಗೋಮಾಳಕ್ಕೆ ಸೇರಿದ್ದು ಎನ್ನಲಾಗುವ ಪಹಣಿ |
ಸದರಿ ಗೋಮಾಳ ಜಾಗ ೭-೮ ವರ್ಷಗಳಿಂದ ಆಕ್ರಮವಾಗಿ ಇಟ್ಟಿಗೆ ಕಾರ್ಖಾನೆಗಳನ್ನು ನಡೆಸುತ್ತಿರುವ ಕೆಲವರುಗ್ರಾಪಂ ಪರವಾನಗಿಯಾಗಲಿ, ಮಾಲಿನ್ಯ ಇಲಾಖೆಯ ಅನುಮತಿಯನ್ನಾಗಲಿ ಪಡೆದಿಲ್ಲ.ಈ ಬಗ್ಗೆ ವಿಚಾರಿಸಿದರೆ ಇದು ಸ್ವಯಾರ್ಜಿತ ಸ್ವತ್ತಾಗಿದೆ ಎನ್ನುತ್ತಾರೆ.ಈ ಬಗ್ಗೆ ಯಾವುದೇ ಪುರಾವೆ ಹಾಗೂ ದಾಖಲೆಯಿಲ್ಲದಿದ್ದರೂ ಈ ಗೋಮಾಳದ ಮಣ್ಣುನ್ನು ದುಡ್ಡಿಗೆ ಮಾರಿಕೊಳ್ಳುತ್ತಿದ್ದಾರೆ.
ಅಲ್ಲದೆ ಕಾರ್ಖಾನೆ ನಡೆಸುವವರು ಕೃಷಿ ಭೂಮಿಯನ್ನು ಕೃಷಿಯೇತರ ಚಟುವಟಿಕೆಗಳಿಗೆ ಪರಿವರ್ತಿಸದೆ ಬಳಸಿಕೊಳ್ಳುತ್ತಿರುವುದು ಅಕ್ರಮ.ಸೂಕ್ತ ದಾಖಲೆಗಳನ್ನು ಹೊಂದಿಲ್ಲದೆ ಕೇವಲ ಅಧಿಕಾರಿಗಳ ಮರ್ಜಿಯಲ್ಲಿ ಲಕ್ಷಾಂತರ ರೂಪಾಯಿ ಇಟ್ಟಿಗೆ ವ್ಯವಹಾರದಲ್ಲಿ ವಹಿವಾಟು ನಡೆಸುತ್ತಿದ್ದಾರೆ.
ಕೆಲ ವರ್ಷಗಳ ಹಿಂದೆ ಈ ಗೋಮಾಳವನ್ನು ಗೌಡಗೆರೆ ಹಾಗೂ ಕರಡಿಸಾಬರಪಾಳ್ಯದ ದನಕರುಗಳು ಮೇಯಲು ಬಳಸಲಾಗುತ್ತಿತ್ತು .ಇದರ ಚೆಕ್‌ಬಂದಿಯಲ್ಲಿ ಕರಡಿಸಾಬರಪಾಳ್ಯದ ಬಡವರ ಗುಡಿಸಲು ಮನೆಗಳಿದ್ದು . ಈ ಜಾಗವನ್ನು ಗ್ರಾಮದ ಶಾಲೆಗೆ ಕ್ರೀಡಾಂಗಣಕ್ಕಾಗಲಿ ವಸತಿರಹಿತರಿಗೆ ನಿವೇಶನ ಹಂಚಲಾಗಲಿ ಬಳಸಬಹುದಾಗಿದೆ.
ಈ ಬಗ್ಗೆ ಉಪವಿಭಾಗಾಧಿಕಾರಿಗಳು ವಿಶೇಷ ಕಾಳಜಿ ವಹಿಸಿ ಅತಿಕ್ರಮಣ ಮಾಡಿರುವ ಗೋಮಾಳವನ್ನು ಸರ್ಕಾರದ ವಶಕ್ಕೆ ಪಡೆದು ಅಳತೆ ಮಾಡಿಸಿ. ತಂತಿ ಬೇಲಿ ಹಾಕಿ ದನಕರುಗಳಿಗೆ ಮೇವಿಗಾಗಿ ಬಿಡುವುದರೂಂದಿಗೆ ಬಡ ರೈತರಿಗೆ ಸಹಾಯ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ