ಹುಳಿಯಾರು:ದಸೂಡಿಯಲ್ಲಿ ಶ್ರೀ ಆಂಜನೇಯ ಸ್ವಾಮಿಯವರ ಜಾತ್ರಾಮಹೋತ್ಸವ ಪ್ರಾರಂಭವಾಗಿದ್ದು ಶುಕ್ರವಾರದಂದು ರಾಮನವಮಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.
ಹನುಮಪ್ಪನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.ಮುಂಜಾನೆಯಿದ ಅಭಿಷೇಕ ಅರ್ಚನೆ ನಡೆದು "ಮರ್ಯಾದಾ ಪುರುಷೋತ್ತಮ" ಶ್ರೀರಾಮಚಂದ್ರನ ಅಖಂಡ ಭಜನೆ ಮಾಡುವ ಮೂಲಕ ಶ್ರೀರಾಮ ದೇವರನ್ನು ದಸೂಡಿ ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು.ಶ್ರೀ ಮಾರುತಿ ಭಜನಾ ಮಂಡಲಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಆಗಮಿಸಿದ್ದ ಭಕ್ತರಿಗೆ ರಾಮನವಮಿಯ ವಿಶೇಷ ಪಾನಕ ಪನಿವಾರ ವಿತರಿಸಲಾಯಿತು.
ರಾಕ್ಷಸ ಕುಲ ಸಂಹಾರಕ ಹನುಮನಿಗೆ ರಾತ್ರಿ ಇಂದ್ರಜಿತು ವಾಹನೋತ್ಸವವನ್ನು ಮಾಡುವ ಮೂಲಕ ದಸೂಡಿ ಹನುಮನನ್ನು ರಂಜಿಸಲಾಯಿತು.
ದೇವಾಲಯ ಸಮಿತಿಯವರು ,ಶ್ರೀ ಸೇನೆ ದಸೂಡಿಯ ಸದಸ್ಯರುಗಳು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂದು ಸ್ವಾಮಿ ಕೃಪೆಗೆ ಪಾತ್ರರಾದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ