ಹುಳಿಯಾರು: ಪಟ್ಟಣದ ಅಂಬಿಕಾ ಸ್ಟುಡಿಯೋ ಮಾಲೀಕರಾದ ಎ.ಡಿ.ಸುದರ್ಶನಾಚಾರ್(೪೫) ಮಂಗಳವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಛಾಯಗ್ರಾಹಕರಾಗಿ,ಸರಳ ಸಜ್ಜನಿಕೆಗೆ ಹೆಸರಾಗಿ ಜನಾನುರಾಗಿಯಾಗಿದ್ದ ಸುದರ್ಶನ್ ಪಟ್ಟಣದ ಎಲ್ಲಾ ಸಮಾಜಮುಖಿ ಕೆಲಸಗಳಲ್ಲಿ ಹಾಗೂ ಎಲ್ಲಾ ದೇವಾಲಯಗಳ ಧಾರ್ಮಿಕ ಕಾರ್ಯಗಳಲ್ಲಿ ಸ್ವಯಂ ಸೇವಕರಾಗಿ ತೊಡಗಿಕೊಳ್ಳುತ್ತಿದ್ದರು.
ಹುಳಿಯಾರಿನ ಛಾಯಗ್ರಾಯಕ ಸಂಘದ ಕಾರ್ಯದರ್ಶಿಯಾಗಿದ್ದ ಅವರು ಪತ್ರಿಕಾವಲಯದಲ್ಲೂ ಫೋಟೊ ಹಾಗೂ ಸುದ್ದಿ ಮಾಹಿತಿ ಒದಗಿಸುತ್ತಾ ಎಲ್ಲಾ ಪತ್ರಕರ್ತರಿಗೂ ನಿಕಟರಾಗಿದ್ದರು.
ಅವರ ನಿಧನದ ಸುದ್ದಿ ಹರಡುತ್ತಿದ್ದಂತೆ ಸ್ನೇಹಿತರುಗಳು,ಒಡನಾಡಿಗಳು,ದೇವಾಲಯ ಸಂಘದವರು. ಸಂಘಸಂಸ್ಥೆಯವರು ತಂಡೋಪತಂಡವಾಗಿ ತೆರಳಿ ಮೃತರ ಅಂತಿಮ ದರ್ಶನ ಪಡೆದರು.
ಎಲ್ಲರಲ್ಲೂ ಉತ್ತಮ ಒಡನಾಟ ಹೊಂದಿದ್ದ ಸುದರ್ಶನ ಅಜಾತಶತ್ರುವಾಗಿದ್ದ ಎ.ಡಿ.ಸುದರ್ಶನಾಚಾರ್ ರವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಅವರ ಗೌರವಾರ್ಥ ಹುಳಿಯಾರು ಛಾಯಚಿತ್ರಗಾರರು ತಮ್ಮ ಅಂಗಡಿಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಿ ಅಂತಿಮ ಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್,ಜಿಪಂ ಸದಸ್ಯ ಸಿದ್ದರಾಮಯ್ಯ,ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಗ್ರಾಪಂ ಅಧ್ಯಕ್ಷೆ ಗೀತಾ ಪ್ರದೀಪ್,ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಗೀತಕ್ಕ,ವೈದ್ಯರ ಸಂಘದ ಡಾ.ಸಿದ್ದರಾಮಯ್ಯ ಸೇರಿದಂತೆ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ಫೋಟೊಗ್ರಾಫರ್ ಸಂಘ ,ಪ್ರಸನ್ನ ಗಣಪತಿ ಸೇವಾ ಸಂಘ,ಪತ್ರಕರ್ತರ ಸಂಘ,ರೋಟರಿ ಕ್ಲಬ್,ಆಂಜನೇಯ ದೇವಸ್ಥಾನ ಸಮಿತಿ,ಹುಳಿಯಾರಮ್ಮ ದೇವಸ್ಥಾನ ಸಮಿತಿ,ದುರ್ಗಮ್ಮ ದೇವಸ್ಥಾನ ಸಮಿತಿ,ಬನಶಂಕರಿ ದೇವಾಲಯ ಸಮಿತಿಯ ಸದಸ್ಯರುಗಳು,ಇನ್ನಿತರೆ ಸಂಘಸಂಸ್ಥಗಳ ಪ್ರತಿನಿಧಿಗಳು,ಗ್ರಾಪಂ ಸದಸ್ಯರುಗಳು ಮೃತರ ಅಂತಿಮ ದರ್ಶನ ಪಡೆದು ಕುಟಂಬ ವರ್ಗಕ್ಕೆ ಸಾಂತ್ವನ ಹೇಳಿದರು.
ಮೃತರ ಅಂತ್ಯಕ್ರಿಯೆ ಅವರ ತೋಟದಲ್ಲಿ ಅಪಾರ ಸ್ನೇಹಿತರು ಹಾಗೂ ಬಂಧುವರ್ಗದವರ ಸಮ್ಮುಖದಲ್ಲಿ ಬುಧವಾರ ಮಧ್ಯಾಹ್ನ ನೆರವೇರಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ