(ಸುದ್ದಿ:ಚಿದಾನಂದ್,ವರದಿಗಾರರು,ಚಿನಾಹಳ್ಳಿ)
ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಮಂಚೆಕಟ್ಟೆ ಗ್ರಾಮದಲ್ಲಿ ದೇವಸ್ಥಾನವಾಗಲಿ, ದೇವರಾಗಲಿ ಇಲ್ಲ. ಆದರೂ ದೇವರ ಹೆಸರಿನಲ್ಲಿ ವ್ಯಕ್ತಿಯೊಬ್ಬರು ಪ್ರತಿ ತಿಂಗಳು ಅರ್ಚಕರ ಭತ್ಯೆಯನ್ನು ಸರ್ಕಾರದಿಂದ ಪಡೆಯುತ್ತಿದ್ದಾರೆ, ಈ ಬಗ್ಗೆ ತಹಶೀಲ್ದಾರ್ ಅವರಿಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ ಎಂದು ಬುಳ್ಳೇನಹಳ್ಳಿ ನಂಜುಂಡಪ್ಪ ಆರೋಪಿಸಿದ್ದಾರೆ.
ಚಿಕ್ಕನಾಯಕನಹಳ್ಳಿ ಶೆಟ್ಟಿಕೆರೆ ಹೋಬಳಿ ಮಂಚೆಕಟ್ಟೆ ಗ್ರಾಮದಲ್ಲಿ ಶ್ರೀ ಬಸವೇಶ್ವರ ದೇವಸ್ಥಾನವಿದೆ, ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದೆ ಎಂದು ಭತ್ಯೆಯನ್ನು ಪಡೆಯುತ್ತಿದ್ದಾರೆ ಆದರೆ ಮಂಚೆಕಟ್ಟೆ ಜನ ವಸತಿ ಇಲ್ಲದ, ಕಂದಾಯ ಗ್ರಾಮ, ಬೇಚರ ಗ್ರಾಮವಾದ ಮಂಚೆಕಟ್ಟೆಯಲ್ಲಿ ದೇವಸ್ಥಾನವಾಗಲಿ, ಬಸವೇಶ್ವರ ದೇವರಾಗಲಿ ಇಲ್ಲ ಆದರೂ ಅರ್ಚಕರೋರ್ವರು ಪ್ರತಿ ತಿಂಗಳು ಭತ್ಯೆಯನ್ನು ಪಡೆಯುತ್ತಿದ್ದಾನೆ ಎಂದು ಆರೋಪಿಸಿರುವ ಅವರು, ಈ ರೀತಿ ಸರ್ಕಾರಕ್ಕೆ ಮೋಸ ಮಾಡಿ ಹಣ ಪಡೆಯುತ್ತಿರುವವರ ಮೇಲೆ ಸೂಕ್ತ ದಂಡ ವಿಧಿಸಿ ಅವರ ಮೇಲೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಬುಳ್ಳೇನಹಳ್ಳಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ