ಹುಳಿಯಾರು: ಪಟ್ಟಣದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ೭ ನೇ ವರ್ಷದ ರಾಮನವಮಿಯನ್ನು ಶುಕ್ರವಾರದಂದು ಅದ್ದೂರಿಯಾಗಿ ಆಚರಿಸಲಾಗುತ್ತಿದ್ದು ವಿಶೇಷಪೂಜೆ ಹಾಗೂ ಕಿರುತೆರೆ ನಟನಟಿಯರಿಂದ ನೃತ್ಯ-ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಶ್ರೀಆಂಜನೇಯಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಸೇವಾ ಚಾರಿಟಬಲ್ ಟ್ರಸ್ಟ್ ಮತ್ತು ಜೈ ಮಾರುತಿ ಯುವಕ ಸೇವಾ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು ಬೆಲಗೂರು ಶ್ರೀಕ್ಷೇತ್ರದ ಶ್ರೀಬಿಂದು ಮಾಧವ ಶರ್ಮಾ ಸ್ವಾಮೀಜಿ ಮತ್ತು ಮಾಡಾಳು ನಿರಂಜನ ಪೀಠದ ಶ್ರೀಚಂದ್ರಶೇಖರ ಸ್ವಾಮೀಜಿ ದಿವ್ಯ ಸಾನ್ನಿಧ್ಯದಲ್ಲಿ ಮುಂಜಾನೆ ಪೂಜಾ ಕಾರ್ಯಕ್ರಮ ನೆರವೇರಲಿದೆ.
ಸ್ವಾಮಿಯ ಅಭಿಷೇಕದ ನಂತರ ದುರ್ಗಾಪರಮೇಶ್ವರಿ, ಹುಳಿಯಾರಮ್ಮ ಹಾಗೂ ಲಿಂಗಪ್ಪನಪಾಳ್ಯದ ಶ್ರೀರಾಮದೇವರ ಆಗಮನದೊಂದಿಗೆ ಮಾಧ್ಯಾಹ್ನ ೧೨ಕ್ಕೆ ಮಹಾಮಂಗಳಾರತಿ ನಡೆದು ಪಾನಕ ಮಜ್ಜಿಗೆ ಪನಿವಾರ ಸೇವೆ ನಡೆಯಲ್ಲಿದೆ.
ಎಸ್.೨ ಇವೆಂಟ್ಸ್ ಬೆಂಗಳೂರು ಇವರ ವತಿಯಿಂದ ಸಂಜೆ ೭.೩೦ಕ್ಕೆ ಸಂಗೀತ ರಸಸಂಜೆ ಹಾಗೂ ಕಿರುತೆರೆ ನಟ-ನಟಿಯರಾದ ಪುಟ್ಟಗೌರಿ ಧಾರವಾಹಿಯ ಮಹೇಶ್,ಗೌರಿ,ಹಿಮ,ಅಮೃತವರ್ಷಿಣಿಯ ಅಮೃತ,ಗಾಯಕಿಯರಾದ ಇಂಧು ನಾಗರಾಜ್ ಹಾಗೂ ಪ್ರಾರ್ಥನಾ ,ಗಾಯಕಯರಾದ ಸಂತೋಷ್ ವೆಂಕಿ ಹಾಗೂ ಸಂತೋಷ್ ದೇವ್ ಅವರುಗಳ ನೃತ್ಯ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಜೈ ಮಾರುತಿ ಯುವಕ ಯುವಕ ಸಂಘದ ಅಧ್ಯಕ್ಷ ಚನ್ನಬಸವಯ್ಯ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ