ಹುಳಿಯಾರು:ದೇವಸ್ಥಾನಕ್ಕೆ ಹೋಗಿ ಹಿಂದಿರುತ್ತಿದ್ದ ವೇಳೆ ಚಾಲಕನ ಅಜಾಗರೂಕತೆಯಿಂದ ಮಾರುತಿ ಓಮ್ನಿ ವಾಹನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವಾಹನದಲ್ಲಿದ್ದ ಕುಟುಂಬ ಸದಸ್ಯರ ಪೈಕಿ ಐದು ವರ್ಷದ ಬಾಲಕಿ ಗುಣಶೀಲ ಸ್ಥಳದಲ್ಲೆ ಮೃತಪಟ್ಟು ಮತ್ತಿಬ್ಬರನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಿದ ಘಟನೆ ಸಮೀಪದ ಕೆರೆಸೂರಗೊಂಡನಹಳ್ಳಿ ಗೇಟ್ ಬಳಿ ಮಂಗಳವಾರ ರಾತ್ರಿ ಸುಮಾರು ೧೦ ಗಂಟೆಯ ವೇಳೆ ಜರುಗಿದೆ.
ಕಂದಿಕೆರೆಯ ರೇವಣಸಿದ್ದೇಶ್ವರ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದ ಹೊಸಹಳ್ಳಿ ಪಾಳ್ಯದ ಜಗದೀಶ್ ಕುಟುಂಬ, ವಾಪಸ್ಸು ಸಂಬಂಧಿಕರನ್ನು ಮರಾಠಿ ಪಾಳ್ಯಕ್ಕೆ ಬಿಟ್ಟು ಸ್ವಗ್ರಾಮ ಹೊಸಹಳ್ಳಿ ಪಾಳ್ಯಕ್ಕೆ ತೆರಳುತ್ತಿದ್ದ ವೇಳೆ ಕೆರೆಸೂರಗೊಂಡನಹಳ್ಳಿ ಗೇಟ್ ಬಳಿ ಅಪಘಾತ ಸಂಭವಿಸಿದೆ.ಕಾರಿನಲ್ಲಿದ್ದ ಐವರಲ್ಲಿ ಬಾಲಕಿ ಮೃತಪಟ್ಟು ಬಾಲಕಿಯ ಅಜ್ಜಿ ಸಿದ್ರಮಕ್ಕನಿಗೆ ಕಾಲು ಮುರಿದು ತಲೆ ಭಾಗಕ್ಕೆ ಪೆಟ್ಟು ಬಿದ್ದಿದೆ.ರಾಮಯ್ಯ ಹಾಗೂ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ.
೧೦೮ ಸಮಸ್ಯೆ: ಘಟನೆ ಜರುಗಿದಾಗ ಗ್ರಾಮಸ್ಥರು ೧೦೮ ವಾಹನಕ್ಕೆ ಕರೆ ಮಾಡಿದರೆ ಹುಳಿಯಾರಿನ ೧೦೮ ವಾಹನ ಕೆಟ್ಟುಹೋಗಿದೆ, ಹಂದನಕೆರೆ ವಾಹನ ಕಳುಹಿಸುವುದಾಗಿ ತಿಳಿಸಿ ನಂತರ ಅಲ್ಲೂ ಸಿಗದೆ ಚಿಕ್ಕನಾಯಕನಹಳ್ಳಿಯಿಂದ ೧೦೮ ವಾಹನ ಬರುವುದರಲ್ಲಿ ತಡವಾಗಿ ತೀವ್ರ ರಕ್ತಸ್ರಾವದಿಂದ ಬಾಲಕಿ ಮೃತಪಟ್ಟಿದ್ದು ಗಾಯಾಳು ಅಜ್ಜಿಯನ್ನು ಬೇರೆ ವಾಹನದಲ್ಲಿ ಕಳುಹಿಸಿಕೊಡಲಾಯಿತು.
ಹುಳಿಯಾರಿನ ೧೦೮ ಯಾವಾಗ ಕರೆ ಮಾಡಿದರೂ ಕೆಟ್ಟುಹೋಗಿದೆ ಎಂಬ ಸಿದ್ದ ಉತ್ತರ ನೀಡುತ್ತಿದ್ದು ಮೊನ್ನೆ ನಡೆದ ಅತ್ಯಾಚಾರ ಪ್ರಕರಣದಲ್ಲೂ ಸಂತ್ರಸ್ಥೆಯನ್ನು ಕಳುಹಿಸಲು ಪರದಾಟಬಾಗಿದ್ದು ಇನ್ನೂ ಹಸಿಯಾಗಿರುವಾಗಲೆ ಮತ್ತೆ ಇದು ಪುನರಾವರ್ತನೆಯಾಗಿದ್ದು ಗ್ರಾಮಸ್ಥರು ಪ್ರತಿಭಟನೆಯ ಹಾದಿ ಹಿಡಿಯುವಂತಾಗಿದೆ.ಹೆಚ್ಚಿನ ಅನಾಹುತ ಸಂಭವಿಸುವ ಮುನ್ನ ಈ ಬಗ್ಗೆ ಸಿಬ್ಬಂದಿಯವರು ಎಚ್ಚೆತ್ತುಕೊಳ್ಳಬೇಕಿದೆ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ