ಹುಳಿಯಾರು: ಪಟ್ಟಣದ ಶಂಕರಪುರದಲ್ಲಿ ನಡೆದ ಅತ್ಯಾಚಾರ ಪ್ರಕರಣದ ಸಂತ್ರಸ್ತೆಯನ್ನು ಭೇಟಿಮಾಡಿ ಸಾಂತ್ವಾನ ಹೇಳಿದ ಗ್ರಾಮಪಂಚಾಯ್ತಿ ಅಧ್ಯಕ್ಷರು,ಸದಸ್ಯರುಗಳು ಆಕೆಗೆ ಗ್ರಾಪಂ ವತಿಯಿಂದ ಹತ್ತು ಸಾವಿರ ರೂಪಾಯಿಗಳ ನೆರವು ನೀಡಿದರು.
ಪಿಡಿಓ ಕಾರ್ಯದರ್ಶಿ ಸಹಿತ ಸದಸ್ಯರುಗಳು ಆಕೆಯ ಮನೆಗೆ ತೆರಳಿ ಪೋಷಕರೊಂದಿಗೆ ಆಕೆಯ ಆರೋಗ್ಯ ವಿಚಾರಿಸಿದರು.
ನಂತರ ಮಾತನಾಡಿದ ಅಧ್ಯಕ್ಷೆ ಗೀತಾ ಅಪ್ರಾಪ್ತ ಬಾಲಕಿ ಮೇಲೆ ನಡೆದ ಅತ್ಯಾಚಾರ ಅಮಾನವೀಯ ಪ್ರಕರಣವಾಗಿದ್ದು ಪೈಶಾಚಿಕ ಕೃತ್ಯದಿಂದ ಗ್ರಾಮವೇ ತಲೆತಗ್ಗಿಸುವಂತಾಗಿದೆ.ಆರೋಪಿಯ ವಿಚಾರಣೆ ತೀವ್ರ ನಡೆಸಿ ಶಿಕ್ಷೆ ದೊರಕುವಂತಾಗಬೇಕು.ಪ್ರಕರಣದ ತನಿಖೆ ಕೈಗೊಂಡಿರುವ ಪೋಲಿಸರು ಯಾವುದೆ ಒತ್ತಡಕ್ಕೆ ಪ್ರಭಾವಕೊಳಗಾಗದೆ ತನಿಖೆನಡೆಸಬೇಕು ಎಂದರು.
ತಾಪಂ ಸದಸ್ಯ ಹೆಚ್ .ಎನ್.ಕುಮಾರ್ ಮಾತನಾಡಿ ಮಾನವೀಯ ನೆಲೆಯಲ್ಲಿ ಗ್ರಾಮಪಂಚಾಯ್ತಿ ವತಿಯಿಂದ ಹತ್ತು ಸಾವಿರ ರೂಪಾಯಿಗಳ ನೆರವು ನೀಡಿದ್ದು ಇದನ್ನು ನಿಶ್ಚಿತ ಠೇವಣಿಯಲ್ಲಿರಿಸಿ ಪ್ರಾಪ್ತ ವಯಸ್ಕಳಾದಾಗ ತೆಗೆದುಕೊಳ್ಳುವಂತೆ ಬಾಂಡ್ ನೀಡಲಾಗುವುದು ಎಂದರು.ಬಾಲಕಿಗೆ ಆಪ್ತ ಸಮಾಲೋಚನೆ ನಡೆಸಿ ಆತ್ಮವಿಶ್ವಾಸದಿಂದ ಮುನ್ನಡೆಯುವಂತೆ ಮಾಡಬೇಕೆಂದರು.
ವಾರ್ಡ್ ಸದಸ್ಯ ರಾಘವೇಂದ್ರ ಮಾತನಾಡಿ ಇಂತಹ ಪ್ರಕರಣಗಳು ಮತ್ತೆ ನಡೆಯದಂತೆ ತಡೆಯುವಲ್ಲಿ ಅಗತ್ಯ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಪೊಲೀಸರು ಗಸ್ತು ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಸಿದ್ಧರಾಮಯ್ಯ,ಉಪಾಧ್ಯಕ್ಷ ಗಣೇಶ್,ಕಾರ್ಯದರ್ಶಿ ಉಮಾಮಹೇಶ್,ಮಾಜಿ ಅಧ್ಯಕ್ಷೆ ಪುಟ್ಟಮ್ಮ,ಸದಸ್ಯರುಗಳಾದ ಅಹ್ಮದ್ ಖಾನ್,ಕೋಳಿ ಶ್ರೀನಿವಾಸ್, ದುರ್ಗಮ್ಮ, ಜಾನಕಮ್ಮ ಮಂಜುನಾಥ್,ವೆಂಕಟೇಶ್ ಮತ್ತಿತರರಿದ್ದರು.
Can't get worst than this.. People showing up for the photo for publicity!...
ಪ್ರತ್ಯುತ್ತರಅಳಿಸಿ