ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೋಪಾಲನಹಳ್ಳಿಯ ಹಾರಕ ಬೆಳೆಗಾರರ ಸಂಘದ ಸಿರಿಧಾನ್ಯ ಸಂಸ್ಕರಣಾ ಘಟಕಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ, ಸಂಸದ ಎಸ್.ಪಿ.ಮುದ್ದಹನುಮೇ ಗೌಡ, ಶಾಸಕ ಸಿ.ಬಿ.ಸುರೇಶ್ ಬಾಬು ಭೇಟಿ ನೀಡಿ ಸಿರಿಧಾನ್ಯಗಳಾದ ಹಾರಕ, ನವಣೆ, ಸಾವೆ, ಕೊರಲೆ ಬೀಜದಿಂದ ಅಕ್ಕಿ ಬೇರ್ಪಡಿಸುವ ಯಂತ್ರ ಮತ್ತು ಇನ್ಸಿಂಪ್ ಯೋಜನೆಯಿಂದ ಕೃಷಿ ಇಲಾಖೆ ಶೇ.100ರ ರಿಯಾಯಿತಿಯಲ್ಲಿ ವಿತರಿಸುವ ಹಿಟ್ಟುಮಾಡುವ ರಾಗಿಶುದ್ದೀಖರಿಸುವ ತೂಕದ ಸೀಲಿಂಗ್ ಮಿಷನ್ ಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಜಿ.ಪಂ.ಸದಸ್ಯ ಕಲ್ಲೇಶ್, ನಾರಾಯಣ್, ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲನಹಳ್ಳಿ ಹಾರಕ ಬೆಳೆಗಾರರ ಸಂಘದ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್, ಸದಸ್ಯರಾದ ಜಿ.ಪಿ.ಮಂಜುನಾಥ್, ಜಿ.ಎಸ್.ನಿರಂಜನ್, ಸುರೇಶ್, ರಂಗಯ್ಯ, ಬಸವರಾಜು, ಪ್ರದೀಪ್, ಜಿ.ಎಸ್.ರಘು ಮತ್ತಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ