ಹುಳಿಯಾರು: ಪಟ್ಟಣದ ಗ್ರಾಮದೇವತೆ ಶ್ರೀದುರ್ಗಾಪರಮೇಶ್ವರಿ ದೇವಿಯ ೪೬ನೇ ವರ್ಷದ ವೈಭವಯುತ ಜಾತ್ರಾಮಹೋತ್ಸವ ಏ.೨೩ ರ ಶನಿವಾರದಿಂದ ಪ್ರಾರಂಭಗೊಂಡು ಮೇ.೧ ರ ಭಾನುವಾರದವರೆಗೆ ಒಂಭತ್ತು ದಿನಗಳ ಕಾಲ ಜರುಗಲಿದೆ.
೨೩ ರ ಶನಿವಾರ ಕೋಡಿಪಾಳ್ಯ, ಲಿಂಗಪ್ಪನಪಾಳ್ಯದವರಿಂದ ಹಾಗೂ ೨೪ರ ಭಾನುವಾರ ಕಾಮಶೆಟ್ಟಿಪಾಳ್ಯ,ಸೋಮಜ್ಜನಪಾಳ್ಯದ ಭಕ್ತಾಧಿಗಳಿಂದ ಅಮ್ಮನವರ ಮಡಿಲಕ್ಕಿ ಸೇವೆ ,೨೫ರ ಸೋಮವಾರ ಬೆಳಿಗ್ಗೆ ಎಡೆಸೇವೆ,ಧ್ವಜಾರೋಹಣ ಮತ್ತು ಅಂಕುರಾರ್ಪಣೆ ಕಾರ್ಯ ಹಾಗೂ ಸಂಜೆ ಅಮ್ಮನವರ ಮಧುವಣಗಿತ್ತಿ ಕಾರ್ಯ ನಡೆಯಲಿದೆ.
೨೬ ರ ಮಂಗಳವಾರ ಗ್ರಾಮಸ್ಥರಿಂದ ಆರತಿಬಾನ, ಎಡೆಸೇವೆ, ತಾ.೨೭ರ ಬುಧವಾರ ರಾತ್ರಿ ಹುಳಿಯಾರಿನ ಹುಳಿಯಾರಮ್ಮ, ಕೆಂಚಮ್ಮ,ಹೊಸಹಳ್ಳಿ ಪಾಳ್ಯದ ಅಂತರಘಟ್ಟೆಅಮ್ಮ, ಗೌಡಗೆರೆ ದುರ್ಗಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮ,ಹೊಸಹಳ್ಳಿಯ ಕೊಲ್ಲಾಪುರದಮ್ಮ, ದಮ್ಮಡಿಹಟ್ಟಿಯ ಈರಬೊಮ್ಮಕ್ಕ ದೇವರುಗಳ ಆಗಮನದೊಂದಿಗೆ ಕೂಡುಭೇಟಿ ನಡೆದು ನಂತರ ಗಂಗಾಸ್ನಾನಕ್ಕೆ ಕೆರೆಗೆ ದಯಮಾಡಿಸುವುದು.
ತಾ.೨೮ರ ಗುರುವಾರ ಮುಂಜಾನೆ ೫ಕ್ಕೆ ಕೆರೆಯ ಬಾವಿಹತ್ತಿರ ಕಳಸ ಸ್ಥಾಪನೆ ನಡೆದು ನಂತರ ಕಳಸ ಸಮೇತ ನಡೆಮುಡಿಯಲ್ಲಿ ಅಮ್ಮನವರ ಮೂಲಸ್ಥಾನಕ್ಕೆ ದಯಮಾಡಿಸುವುದು. ಅದೇ ದಿನ ರಾತ್ರಿ ಉಯ್ಯಾಲೋತ್ಸವ ಹಾಗೂ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.
ತಾ.೨೯ರ ಶುಕ್ರವಾರ ಮಧ್ಯಾಹ್ನ ಅಮ್ಮನವರ ವೈಭವಯುತ ಬ್ರಹ್ಮರಥೋತ್ಸವ ನಡೆದು ನಂತರ ವಸಂತಸೇವೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ರಾತ್ರಿ ವಿನಾಯಕನಗರದ ದುರ್ಗಮ್ಮನ ಮದಾಲ್ ಸಿ ಉತ್ಸವ ಹಾಗೂ ರಾತ್ರಿ ದೇವಿಮಹಾತ್ಮೆ ನಾಟಕ ಪ್ರದರ್ಶಿತವಾಗಲಿದೆ.
೩೦ ರ ಶನಿವಾರ ಬೆಳಿಗ್ಗೆ ಸಿಡಿ ಕಾರ್ಯ ,ಓಕಳಿಸೇವೆ, ಕಂಕಣ ವಿಸರ್ಜನೆ ನಡೆದು ಮೇ ೧ ರ ಭಾನುವಾರದಂದು ಮಡಿಲಕ್ಕಿ ಸೇವೆ ನಡೆಯುವ ಮೂಲಕ ಜಾತ್ರೆಗೆ ತೆರೆಬೀಳಲಿದೆ.
ಹುಳಿಯಾರು ಹಾಗೂ ಸುತ್ತಮುತ್ತಲ ಗ್ರಾಮಗಳ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಮ್ಮನವರ ಕೃಪೆಗೆ ಪಾತ್ರರಾಗುವಂತೆ ಕನ್ವೀನರ್ ಹು.ಕೃ.ವಿಶ್ವನಾಥ್ ಕೋರಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ