ಹುಳಿಯಾರು: ಹುಳಿಯಾರಿನ ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಶಿಕ್ಷಕ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷರಾಗಿ ಗುಜರಿ ನಾಗಣ್ಣ ಅವಿರೋಧವಾಗಿ ಆಯ್ಕೆಯಾದರು.
ಅಧಿಕಾರ ಹಂಚಿಕೆ ಒಪ್ಪಂದದ ಮೇರೆಗೆ ಅಧ್ಯಕ್ಷ ಎಚ್.ಅಶೋಕ್ ಹಾಗೂ ಉಪಾಧ್ಯಕ್ಷೆ ಎಸ್.ಆರ್.ಸುಮಿತ್ರ ಅವರು ರಾಜೀನಾಮೆ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸೋಮವಾರ ಚುನಾವಣೆ ಏರ್ಪಡಿಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಕೆ.ಕೃಷ್ಣಮೂರ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ನಾಗರಾಜು ಮಾತ್ರ ಅರ್ಜಿ ಸಲ್ಲಿಸಿದ್ದರು.
ಹುಳಿಯಾರಿನ ಕನಕ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾದ ಕೃಷ್ಣಮೂರ್ತಿ ಹಾಗೂ ಉಪಾಧ್ಯಕ್ಷ ಗುಜರಿನಾಗಣ್ಣ ಅವರೊಂದಿಗೆ ನಿರ್ದೇಶಕರುಗಳು. |
ಹಾಗಾಗಿ ಅಧ್ಯಕ್ಷರನ್ನಾಗಿ ಕೆ.ಕೃಷ್ಣಮೂರ್ತಿ ಉಪಾಧ್ಯಕ್ಷ ಸ್ಥಾನಕ್ಕೆ ಎಸ್.ನಾಗರಾಜು ಅವರು ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ ಕೆ.ಸುಮಿತ್ರ ಅವರು ಘೋಷಿಸಿದರು.
ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಎಚ್.ಅಶೋಕ್, ಸುಮಿತ್ರಾ, ಎನ್.ಬಿ.ಗವೀರಂಗಯ್ಯ, ಶಿವಣ್ಣ, ರಂಗನಾಥ್, ಕಾರ್ಯದರ್ಶಿ ದೇವಿಪ್ರಸಾದ್, ಗ್ರಾಪಂ ಮಾಜಿ ಸದಸ್ಯ ಜಯಣ್ಣ ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ