ಹುಳಿಯಾರು: ಪಟ್ಟಣದ ೮ ನೇ ವಾರ್ಡಿನ ಇಂದಿರಾನಗರದ ನಿವಾಸಿ ಪ್ಯಾರಿಜಾನ್ ಹಾಗೂ ಜಿಗ್ನಿ ಭಾನು ಅವರ ಮನೆಯಲ್ಲಿ ಗುರುವಾರ ರಾತ್ರಿ ಸಂಭವಿಸಿದ ಬೆಂಕಿ ಆಕಸ್ಮಿಕ ಪ್ರಕರಣದಲ್ಲಿ ಇಪ್ಪತ್ತು ಸಾವಿರ ನಗದು ಸೇರಿದಂತೆ ಬಟ್ಟೆಬರೆ ,ಪಾತ್ರೆಗಳೆಲ್ಲ ಬೆಂಕಿಗೆ ಆಹುತಿಯಾಗಿದೆ.
ರಾತ್ರಿ ಎಂದಿನಂತೆ ಅಡುಗೆ ಮಾಡಲು ಸೌದೆಒಲೆ ಹಚ್ಚಿ ಪಕ್ಕದಲ್ಲೆ ಇದ್ದ ಅಂಗಡಿಯಿಂದ ತರಕಾರಿ ತರುವಷ್ಟರಲ್ಲಿ ಒಲೆಯ ಪಕ್ಕದಲ್ಲಿದ್ದ ನೀರಿನ ಕ್ಯಾನ್ ಬೆಂಕಿಯ ಶಾಖಕ್ಕೆ ಜಿನುಗಿ ಹತ್ತಿಕೊಂಡ ಪರಿಣಾಮ ಅಡುಗೆ ಮನೆಯಲ್ಲಿದ್ದ ಪಾತ್ರೆ ಪಡಗ ಹಾಗೂ ಬಟ್ಟಬರೆಯಲ್ಲದೆ ಮದುವೆಗೆಂದು ಮೊನ್ನೆಯಷ್ಟೆ ಸಂಘದಲ್ಲಿ ಸಾಲದ ರೂಪವಾಗಿ ತಂದಿದ್ದ ಇಪ್ಪತ್ತು ಸಾವಿರ ರೂಪಾಯಿ ಕೂಡ ಅಗ್ನಿಗಾಹುತಿಯಾಗಿದೆ.
ಸಂಜೆಯಷ್ಟೆ ಬೀದಿ ನಲ್ಲಿಯಲ್ಲಿ ನೀರು ಬಂದಿದ್ದರಿಂದ ಮನೆಯ ತೊಟ್ಟಿ ತುಂಬಾ ನೀರಿದ್ದು ಅಕ್ಕಪಕ್ಕದವವರೆ ಲ್ಲಾ ಸೇರಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ತೀರ ಬಡತನದಲ್ಲಿದ್ದ ಕುಟಂಬ ಮದುವೆಗೆಂದು ತಂದಿದ್ದ ಹಣವನ್ನು ಹಾಗೂ ಬಟ್ಟೆಬರೆ ಒಡವೆ ಕಳೆದು ಕೊಂಡು ರೋದಿಸುತ್ತಿದ್ದ ದೃಶ್ಯ ಮನಕಲುಕುತ್ತಿತ್ತು.
ವಿಷಯ ತಿಳಿದ ಆ ವಾರ್ಡಿನ ಸದಸ್ಯರುಗಳಾದ ಪುಟ್ಟರಾಜು,ಕೆಂಪಮ್ಮ,ಮಾಮಾಜಿಗ್ಮಿ ,ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಗಣೇಶ್ ಸದ್ಯಕ್ಕೆ ಪಾತ್ರೆ ಪಡಗ ಖರೀದಿಸಲೆಂದು ಪಂಚಾಯ್ತಿವತಿಯಿಂದ ಐದು ಸಾವಿರ ರೂಫಾಯಿಗಳ ನೆರವು ನೀಡುವುದರ ಮುಖಾಂತರ ತತ್ ಕ್ಷಣಕ್ಕೆ ಸ್ಪಂದಿಸಿದ್ದು ಇನ್ನು ಹೆಚ್ಚಿನ ನೆರವು ನೀಡುವ ಇಂಗಿತ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯವರು ಮಹಜರ್ ಮಾಡಿದ್ದು ಪ್ರಕರಣ ಹುಳಿಯಾರು ಠಾಣೆಯಲ್ಲಿ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ