ಹುಳಿಯಾರು ಸಮೀಪದ ನಂದಿಹಳ್ಳಿಯಲ್ಲಿ ಏ.೧೫ರ ಶುಕ್ರವಾರದಿಂದ ೧೮ ರ ಸೋಮವಾರದವರೆಗೆ ನಾಲ್ಕು ದಿನಗಳ ಕಾಲ ಜಾತ್ರ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ಶುಕ್ರವಾರ ಬೆಳಿಗ್ಗೆ ರಾಮನವಮಿ ಪ್ರಯುಕ್ತ ಆಂಜನೇಯ ಸ್ವಾಮಿಯವರ ವಿಶೇಷಪೂಜೆ, ಕುಂಕುಮಾರ್ಚನೆ, ರುದ್ರಾಭಿಷೇಕ,ಮಹಾಮಂಗಳಾರತಿ,ಧ್ವಜಾರೋಹಣ,ಊರಿನ ಪ್ರಮುಖ ಬೀದಿಗಳಲ್ಲಿ ಭಜನೆ ನಡೆಯಲಿದೆ.ಸಂಜೆ ಆಂಜನೇಯಸ್ವಾಮಿಯವರ ಉತ್ಸವ,ಬಿಲ್ಲುಗೂಡೂ ಸೇವೆ,ಪಾನಕ ಪ್ರಸಾದ ವಿನಿಯೋಗವಾಗಲಿದೆ.ರಾತ್ರಿ ನಂದಿಬಸವೇಶ್ವರ ಕಲಾ ಸಂಘದವರಿಂದ ರಾಜಾ ಸತ್ಯವ್ರತ ನಾಟಕ ಪ್ರದರ್ಶನ ನಡೆಯಲಿದೆ.
ಶನಿವಾರದಂದು ನಂದಿಹಳ್ಳಿ ನಂದಿಬಸವೇಶ್ವರ ಸ್ವಾಮಿ,ಆಂಜನೇಯಸ್ವಾಮಿ,ಶನೇಶ್ವರಸ್ವಾಮಿ, ನಂದಿಹಳ್ಳಿ ರಾಯರಹಟ್ಟಿಯ ಕ್ಯಾತಲಿಂಗೇಶ್ವರ ಸ್ವಾಮಿ,ನಿರುವಗಲ್ ಹುಲ್ಕಲ್ ಬೆಟ್ಟದ ದುರ್ಗಮ್ಮ,ತೊರೆಮನೆ ಅಂತರಘಟ್ಟೆ ಕರಿಯಮ್ಮ ದೇವರುಗಳ ಆಗಮನ ಮತ್ತು ಕೂಡುಭೇಟಿ ಹಾಗೂ ನೂರೊಂದೆಡೆ ಸೇವೆ ,ಗುರುಪರುವಿನೊಂದೆಗೆ ಅನ್ನಸಂತರ್ಪಣೆ ನಡೆಯಲಿದೆ.
ಭಾನುವಾರದದಂದು ಸ್ವಾಮಿಯವರ ಬೆಳ್ಳಿಪಾಲಿಕೆಯ ಅಡ್ಡಪಲ್ಲಕ್ಕಿ ಉತ್ಸವ ಮತ್ತು ಸಾಯಂಕಾಲ ದೋಣಿಸೇವೆ ಮುತ್ತಿನ ಮಂಟಪೋತ್ಸವ ನಡೆಯಲಿದೆ.
೧೮ರ ಸೋಮವಾರದಂದು ಬೆಳಿಗ್ಗೆ ೯ಕ್ಕೆ ರಥೋತ್ಸವ ನಡೆಯಲಿದೆ.ಸಂಜೆ ದೇವರುಗಳ ಬೀಳ್ಕೊಡುಗೆಯೊಂದಿಗೆ ಜಾತ್ರಾಮಹೋತ್ಸವ ಕೊನೆಗೊಳ್ಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ