ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕಂದಿಕೆರೆ ಹೋಬಳಿ ತೀರ್ಥಪುರ-ಯರೇಕಟ್ಟೆ ವ್ಯಾಪ್ತಿಯ ಶ್ರೀ ತೀರ್ಥರಾಮಲಿಂಗೇಶ್ವರ ದೇವಾಲಯದ ಜಾತ್ರಾ ಮಹೋತ್ಸವದ ಅಂಗವಾಗಿ ಏ,25ರಂದು ನಡೆದ ಬ್ರಹ್ಮರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ತಾಲ್ಲೂಕಿನ ತೀರ್ಥಪುರ, ಕಾತ್ರಿಕೆಹಾಳ್, ದೊಡ್ಡರಾಂಪುರ, ಚಿಕ್ಕರಾಂಪುರ, ಸಿಂಗದಹಳ್ಳಿ, ಜಾಣೇಹಾರ್, ಮದನಮಡು, ಕೆಂಪರಾಯನಹಟ್ಟಿ, ಕಂದಿಕೆರೆ, ಸಾದರಹಳ್ಳಿ, ತಿಮ್ಮನಹಳ್ಳಿ, ಸಿದ್ಧನಕಟ್ಟೆ ಸೇರಿದಂತೆ ನಾನಾ ಹಳ್ಳಿಗಳು, ಸುತ್ತಮುತ್ತಲ ತಾಲ್ಲೂಕುಗಳಾದ ಗುಬ್ಬಿ, ತುರುವೇಕೆರೆ, ಶಿರಾ ಹಾಗೂ ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ ಹೀಗೆ ರಾಜ್ಯದ ನಾನಾ ಭಾಗಗಳಿಂದ ಭಾಗದಿಂದ ಸಾವಿರಾರು ಭಕ್ತರು ಬಂದಿದ್ದ ಭಕ್ತರು ರಥೋತ್ಸವವನ್ನು ಕಣ್ಣು ತುಂಬಿಕೊಂಡರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ