ತೊರೆಸೂರಗೊಂಡನಹಳ್ಳಿಯ ಆದಿಶಕ್ತಿ ಚೌಡಮ್ಮನವರು ಹಾಗೂ ಬಸವೇಶ್ವರ ಸ್ವಾಮಿ |
ಹುಳಿಯಾರು:ಸಮೀಪದ ತೊರೆಸೂರಗೊಂಡನಹಳ್ಳಿಯಲ್ಲಿ ಬಸವೇಶ್ವರ ಸ್ವಾಮಿ ಹಾಗೂ ಆದಿಶಕ್ತಿ ಚೌಡಮ್ಮನ ಜಾತ್ರಾ ಮಹೋತ್ಸವ
ಏ.೨೪ ರ ಭಾನುವಾರದಿಂದ ೨೭ರ ಬುಧವಾರದವರೆಗೆ ನಡೆಯಲಿದೆ.
೨೪ ರ ಭಾನುವಾರ ಸಂಜೆ ಧ್ವಜಾರೋಹಣ ಹಾಗೂ ಬಸವೇಶ್ವರ ಸ್ವಾಮಿ ಮೂಲಸ್ಥಾನಕ್ಕೆ ರುದ್ರಾಭಿಷೇಕದ ಮೂಲಕ ಜಾತ್ರೆಗೆ ಚಾಲನೆ ಸಿಗಲಿದೆ.
೨೫ ರ ಸೋಮವಾರದಂದು ಬೆ.೯ಕ್ಕೆ ಬಸವೇಶ್ವರ ಸ್ವಾಮಿಯ ಹೊಳೆಸೇವೆ ನಡೆದು ಅಗ್ನಿಕೊಂಡ ಹಾಗೂ ಬ್ರಹ್ಮರಥೋತ್ಸವ ನಡೆಯಲಿದೆ.ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ,ಸಂಜೆ ಬಸವೇಶ್ವರ ಸ್ವಾಮಿಯವರ ರಥೋತ್ಸವ ನಂತರ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ.ಅದೇ ದಿನ ರಾತ್ರಿ ಅಮ್ಮನವರ ಮದುವಣಗಿತ್ತಿ ಶಾಸ್ತ್ರ ಮತ್ತು ಮದ್ದಿನ ಸೇವೆ ಹಮ್ಮಿಕೊಳ್ಳಲಾಗಿದೆ.
೨೬ ರ ಮಂಗಳವಾರ ಶ್ರೀ ಆದಿಶಕ್ತಿ ಚೌಡೇಶ್ವರಿ ದೇವಿಯವರ ಹೊಳೆಸೇವೆ,ನಡೆಮುಡಿಯೊಂದಿಗೆ ಕಳಸೋತ್ಸವ ನಡೆಯಲಿದೆ.ಸಂಜೆ ಆರತಿಬಾನ ,ರಾತ್ರಿ ಅಮ್ಮನವರ ಪುಷ್ಪಾಲಂಕಾರದ ವಾನದ ಉತ್ಸವ ಹಾಗೂ ಸೋಮನ ಕುಣಿತ ಜರುಗಲಿದೆ.
೨೭ರ ಬುಧವಾರ ಸಂಜೆ ಓಕಳಿ ಸೇವೆ ನಡೆದು ಕಂಕಣ ವಿಸರ್ಜನೆಯೊಂದಿಗೆ ಜಾತ್ರೆ ಕೊನೆಗೊಳ್ಳಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ