ಹುಳಿಯಾರು:ಇಪ್ಪತ್ತು ಸಾವಿರ ಪ್ರಥಮ ಬಹುಮಾನದ ಹೆಚ್.ಸಿ.ಎಲ್-೪ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಎಂಪಿಎಸ್ ಶಾಲಾ ಮೈದಾನದಲ್ಲಿ ಭಾನುವಾರ ಬೆಳಿಗ್ಗೆ ೯ಕ್ಕೆ ನಡೆಯಲಿದೆ.ಸ್ಮಾರ್ಟ್ ಅಚೀವರ್ಸ್,ಚಕ್ರವರ್ತಿ ಇಲೆವನ್,ಹೊಯ್ಸಳ ಸ್ಮಾಷರ್ಸ್,ರೆಡ್ ಫೋರ್ಸ್,ಮಯೂರ ಎಲೆವನ್,ಬ್ಲೂ ಕ್ಯಾಪ್ಸ್,ಹುಳಿಯಾರು ವಾರಿಯರ್ಸ್,ರಾಯಲ್ ಕಿಂಗ್ ಸೇರಿದಂತೆ ಒಟ್ಟು ಎಂಟು ತಂಡಗಳು ಭಾಗವಹಿಸುತ್ತಿದ್ದು ಐ.ಪಿ.ಅಲ್.ಮಾದರಿಯಲ್ಲಿ ಒಟ್ಟು ಎಂಟು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ.ಶಾಸಕ ಸಿ.ಬಿ.ಸುರೇಶ್ ಬಾಬು ಪಂದ್ಯವನ್ನು ಉದ್ಘಾಟಿಸಲಿದ್ದು ಗ್ರಾಪಂ ಅಧ್ಯಕ್ಷೆ ಗೀತಾ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿಪಂ ಸದಸ್ಯ ವೈ.ಸಿ.ಸಿದ್ಧರಾಮಯ್ಯ,ತಾಪಂ ಸದಸ್ಯ ಹೆಚ್.ಎನ್.ಕುಮಾರ್,ಗ್ರಾಪಂ ಉಪಾಧ್ಯಕ್ಷ ಗಣೇಶ್,ಕಕೆಂಕೆರೆ ನವೀನ್,ಪಿಎಸೈ ಪ್ರವೀಣ್ ಕುಮಾರ್,ಭೈರೇಶ್,ವೆಂಕಟೇಶ್,ರಂಗನಾಥ್ ಪರೋರೆ, ಪ್ರೇಮಲೀಲಾ,ಮುಖ್ಯ ಶಿಕ್ಷಕರಾದ ಶಂಕರಯ್ಯ ಹಾಗೂ ನಂದಾವಾಡಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ