ಹುಳಿಯಾರು:ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಶತಾಯುಷಿ , ಕರ್ನಾಟಕ ರತ್ನ,ಪದ್ಮಭೂಷಣ ಡಾ. ಶಿವಕುಮಾರ ಸ್ವಾಮೀಜಿಯವರ ೧೦೯ನೇ ಜನ್ಮದಿನವನ್ನು ಪಟ್ಟಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಪಟ್ಟಣದ ರಾಂಗೋಪಾಲ್ ಸರ್ಕಲ್ ಬಳಿಯ ಚನ್ನಬಸವೇಶ್ವರ ಮೆಡಿಕಲ್ಸ್ ಮುಂಭಾಗದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದಾಸೋಹ ಹಾಗೂ ಅನ್ನದಾಸೋಹ ಮಾಡುವ ಮೂಲಕ ಸಮಾಜದ ಆದರ್ಶ ವ್ಯಕ್ತಿಯಾಗಿರುವ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಗಳು ಇನ್ನೂ ನೂರ್ಕಾಲ ಬಾಳಲಿ ಎಂದರು.
ಶ್ರೀಗಳ ಜನ್ಮದಿನದ ಅಂಗವಾಗಿ ಪಾನಕ,ಮಜ್ಜಿಗೆ,ಕೊಸುಂಬರಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕವಿತಾ ಕಿರಣ್,ಆಂಜನೇಯ ಸ್ವಾಮಿ ದೇವಾಲಯದ ಧನಂಜಯ್,
ಹಿಂದೂ ಜಾಗರಣ ವೇದಿಕೆಯ ಬಡಗಿ ರಾಮಣ್ಣ ,ಗ್ರಾಪಂ ಸದಸ್ಯೆ ಗೀತಾಬಾಬು,ಮೆಡಿಕಲ್ ಚನ್ನ ಬಸವಯ್ಯ, ರವೀಶ್,ರಘು,ಶಶಿ, ಗಂಗಾಧರಯ್ಯ, ಅಶೋಕ ಬಾಬು, ಜಿ.ಎಸ್.ವೆಂಕಟಾಚಲಪತಿಶೆಟ್ಟಿ, ತಮ್ಮಯ್ಯ, ಲೋಕೇಶ್ ಮತ್ತಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ