ಹುಳಿಯಾರು ಸಮೀಪದ ತೋಟಕ್ಕೆ ಬಿದ್ದ ಬೆಂಕಿಯನ್ನು ನಂದಿಸುತ್ತಿರುವ ಅಗ್ನಿ ಶಾಮಕ ದಳದವರು. |
ಹುಳಿಯಾರು:ಆಕಸ್ಮಿಕ ಬೆಂಕಿ ಪ್ರಕರಣದಲ್ಲಿ ಪಟ್ಟಣದ ಕೇಶವಾಪುರದ ತೋಟವೊಂದಕ್ಕೆ ಬೆಂಕಿ ತಗುಲಿ ೬೫ ತೆಂಗಿನ ಮರಗಳು ಆಹುತಿಯಾದ ಘಟನೆ ಬುಧವಾರ ಮಧ್ಯಾಹ್ನ ಮೂರು ಗಂಟೆಯ ಸಮಯದಲ್ಲಿ ಜರುಗಿದೆ.
ತೋಟದ ಮಾಲಿಕ ಎಮ್ಮೆಸೀನಪ್ಪನವರ ಮಗ ಪ್ರಶಾಂತ್ ಹಾಗೂ ಅಕ್ಕಪಕ್ಕದ ತೋಟದವರು ಕೂಡಲೆ ನೀರು ಹಾಯಿಸಿ ಬೆಂಕಿ ನಂದಿಸಲು ಮುಂದಾದರು.ಅಲ್ಲದೆ ಅಗ್ನಿ ಶಾಮಕದಳದವರೂ ಕೂಡ ವಿಳಂಬವಿಲ್ಲದೆ ಆಗಮಿಸಿದ್ದರಿಂದ ಬೆಂಕಿ ಹತೋಟಿಗೆ ಬಂದು ಹೆಚ್ಚಿನ ಅನಾಹುತ ತಪ್ಪಿದಂತಾಯಿತು.ಸುಮಾರು ಅರವತೈದು ಫಲಭರಿತ ತೆಂಗಿನಮರ ಹಾಗೂ ನೀರಿನ ಪೈಪ್,ಕೇಬಲ್ ಗಳು ಸುಟ್ಟು ಹೋಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ