ದಿನಾಂಕ 6/4/2016ರ ಬುಧವಾರ ಸಂಜೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ ಹೇಮಾವತಿ ನೀರು ಒದಗಿಸುವ ನಾಲೆ ಯೋಜನೆಯಲ್ಲಿ ಭೂಮಿಯನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡುವ ಕಾರ್ಯಕ್ರಮ ತಾಲ್ಲೂಕಿನ ಗೋಪಾಲನಹಳ್ಳಿಯಲ್ಲಿ ನಡೆಯಿತು.
ಹೇಮಾವತಿ ನಾಲೆಗೆ ಜಮೀನು ನೀಡಿರುವ 28 ರೈತರಿಗೆ ಮೊದಲ ಹಂತದ ಭಾಗವಾಗಿ ರೂ.1.75ಕೋಟಿ ಮೊತ್ತದ ಪರಿಹಾರ ಚೆಕ್ ವಿತರಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ ಸರ್ಕಾರ 73 ಕಿಮೀ ಹೇಮಾವತಿ ನಾಲೆಯ ಅಗಲೀಕರಣಕ್ಕಾಗಿ ರೂ.563 ಕೋಟಿ ಹಣವನ್ನು ಒಂದೇ ಹಂತದಲ್ಲಿ ಬಿಡುಗಡೆ ಮಾಡಿದ್ದು ಜೂನ್ ಕೊನೆಯ ವೇಳೆಗೆ ಕಾಮಗಾರಿ ಪೂರ್ಣವಾಗಲಿದೆ ಎಂದರು.
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ ಯೋಜನೆಗೆ 700 ರೈತರ ಜಮೀನು ಕಳೆದುಕೊಳ್ಳುತ್ತಿದ್ದಾರೆ, ಕಾನೂನಿನ ತೊಡಕು ದೂರವಾಗಿದ್ದು ಎಲ್ಲರಿಗೂ ಪರಿಹಾರ ದೊರೆಯುತ್ತದೆ ಎಂದರು.
ಶಾಸಕ ಸಿ.ಬಿ.ಸುರೇಶ್ ಬಾಬು ಮಾತನಾಡಿ ಜಮೀನು ಬಿಟ್ಟು ಕೊಟ್ಟ ಗೋಪಾಲನಹಳ್ಳಿ ಹಾಗೂ ಸಾಸಲು ಗ್ರಾಮಗಳ 48 ರೈತರಿಗೆ ಹಣ ಬಿಡುಗಡೆಯಾಗಿದೆ, 28 ರೈತರಿಗೆ ಪರಿಹಾರದ ಚೆಕ್ ವಿತರಿಸಲಾಗಿದೆ, ಇನ್ನು ಕೆಲವು ರೈತರ ಸರಿಯಾದ ದಾಖಲೆಗಳನ್ನು ನೀಡದ ಕಾರಣ ಚಕ್ ವಿತರಿಸಲು ಸಾಧ್ಯವಾಗುತ್ತಿಲ್ಲ ಎಂದರು.
ತಮ್ಮಡಿಹಳ್ಳಿ ಮಠದ ಶ್ರೀ ಅಭಿನವಮಲ್ಲಿಕಾರ್ಜುನ ದೇಶೀಕೇಂದ್ರ ಸ್ವಾಮೀಜಿ, ಗೋಡೆಕೆರೆ ಮಠದ ಶ್ರೀ ಮೃತ್ಯುಂಜಯದೇಶಿಕೇಂದ್ರ ಸ್ವಾಮೀಜಿ, ಮಾದಿಹಳ್ಳಿ ಮಠದ ಚನ್ನಮಲ್ಲಿಕಾರ್ಜು ಸ್ವಾಮೀಜಿ,ವಿಶೇಷ ಭೂಸ್ವಾಧಿನಾಧಿಕಾರಿ ಆರತಿ ಆನಂದ್ ,ಅಪರ ಜಿಲ್ಲಾಧಿಕಾರಿ ಅನಿತಾ,ಜಿ.ಪಂ,ಸದಸ್ಯ ಕಲ್ಲೇಶ್, ಹೊನ್ನವಳ್ಳಿ ಜಿ.ಪಂ.ಸದಸ್ಯ ನಾರಾಯಣ್, ಮಾಜಿ ಶಾಸಕ ಬಿ.ಲಕ್ಕಪ್ಪ,ತಹಸೀಲ್ದಾರ್ ಗಂಗೇಶ್, ಕಾಂಗ್ರೆಸ್ ಮುಖಂಡ ಸಿಮೇಎಣ್ಣೆ ಕೃಷ್ಣಯ್ಯ, ಶೆಟ್ಟಿಕೆರೆ ಗ್ರಾ,ಪಂ,ಅಧ್ಯಕ್ಷೆ ನಾಗಮಣಿ, ತಾ.ಪಂ.ಸದಸ್ಯೆ ಜಯಮ್ಮ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ