ಹುಳಿಯಾರು ಸಮೀಪದ ಚಿಕ್ಕಬಿದರೆಯಲ್ಲಿ ಕರಿಯಮ್ಮನ ಜಾತ್ರಾ ಮಹೋತ್ಸವದಲ್ಲಿ ಕಳಸದೊಂದಿಗೆ ದೇವರುಗಳನ್ನು ನಡೆಮುಡಿಯಲ್ಲಿ ಕರೆತರಲಾಯಿತು. |
ಹುಳಿಯಾರು:ಸಮೀಪದ ಚಿಕ್ಕಬಿದರೆ ಗ್ರಾಮದ ಏಳುಹಳ್ಳಿ ಕರಿಯಮ್ಮ ದೇವಿ ಜಾತ್ರಾ ಮಹೋತ್ಸವವು ಏ.೨೮ರ ಗುರುವಾರದಂದು ಧ್ವಜಾರೋಹಣ.ಕಂಕಣಧಾರಣೆ,ಮಧುವಣಗಿತ್ತಿ ಸೇವಾ ಕಾರ್ಯದೊಂದಿಗೆ ಚಾಲನೆಗೊಂಡಿದೆ.
ಶುಕ್ರವಾರದಂದು ದೊಡ್ಡಬಿದರೆ ಕರಿಯಮ್ಮ ದೇವಿ, ಪೋಚಕಟ್ಟೆ ಕರಿಯಮ್ಮದೇವಿ ಹಾಗೂ ಕೋಡಿಹಳ್ಳಿ ಕೊಲ್ಲಾಪುರದಮ್ಮ ದೇವರುಗಳ ಆಗಮನದೊಂದಿಗೆ ಭೇಟಿ ಕಾರ್ಯ ನಡೆಯಿತು .ಸಂಜೆ ಗ್ರಾಮಸ್ಥರಿಂದ ಆರತಿ ಬಾನ ನಡೆದು ಮಡಿಲಕ್ಕಿ ಸೇವೆ ಸಲ್ಲಿಸಲಾಯಿತು..
ಶನಿವಾರ ಬೆಳಿಗ್ಗೆ ಕೆರೆ ಕಳಸ ಸ್ಥಾಪನೆ ನಡೆದು ಗಂಗಾಪೂಜೆ ಮಾಡಲಾಯಿತು. ಕಳಸದೊಂದಿಗೆ ಎಲ್ಲಾ ದೇವರುಗಳನ್ನು ನಡೆಮುಡಿಯಲ್ಲಿ ಕರೆತರಲಾಯಿತು.ನಂತರ ಕೆಂಡಹಾಯುವ ಅಗ್ನಿಕುಂಡ ಕಾರ್ಯಕ್ರಮ ನಡೆಯಿತು.ಸೂಕ್ತ ಮುಂಜಾಗ್ರತಾ ಏರ್ಪಾಡಿನೊಂದಿಗೆ ನಡೆದ ಕೆಂಡ ಹಾಯುವ ಕಾರ್ಯಕ್ರಮದಲ್ಲಿ ಮೊದಲು ಕಳಸ ಹೊತ್ತ ಬಾಲಕಿಯೊಂದಿಗೆ ಏಳುಹಳ್ಳಿಕರಿಯಮ್ಮನವರು ,ಆ ನಂತರ ಉಳಿದ ದೇವರುಗಳು ಹಾಗೂ ಸೀಮಿತ ಸಂಖ್ಯೆಯ ಭಕ್ತಾಧಿಗಳು ಅಮ್ಮನವರ ಜೈಕಾರದೊಂದಿಗೆ ಕೆಂಡ ಹಾದು ಭಕ್ತಿ ಪ್ರದರ್ಶಿಸಿದರು. ತದನಂತರ ಘಟಪೂಜೆ ಮಾಡಿ ಮಹಾಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು. ಕನ್ವೀನರ್ ಚಿಕ್ಕಬಿದರೆ ಚಂದ್ರಣ್ಣ ಸೇರಿದಂತೆ ಚಿಕ್ಕಬಿದರೆ,ಕೋಡಿಪಾಳ್ಯ,ಕಲ್ಲಹಳ್ಳಿ,ಭೈರಾಪುರ,
ತಾಂಡ್ಯ,ಅವಳಗೆರೆ ಮುಂತಾದ ಗ್ರಾಮಗಳಿಂದ ಅಪಾರ ಸಂಖ್ಯೆಯ ಭಕ್ತಾಧಿಗಳಿ ಹಾಜರಿದ್ದು ಕೆಂಡಹಾಯುವ ಕಾರ್ಯಕ್ರಮವನ್ನು ಸಾಕ್ಷೀಕರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ