ಗುರುವಾರ ಮುಂಜಾನೆ 1.55 ರಿಂದ 3.38ರವರೆಗೆ ಕಂಚೀಪುರದಲ್ಲಿ ಕಂಚೀವರದರಾಜ ಸ್ವಾಮಿಯವರ ರಥೋತ್ಸವ
ಏ.30ರ ಶನಿವಾರದಂದು ಶ್ರೀವರದಯ್ಯನ ಗುರು ಶ್ರೀದಶರಥರಾಮೇಶ್ವರ ಸ್ವಾಮಿಯವರ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಶ್ರೀಸ್ವಾಮಿಯವರ ಹಾಗೂ ಕರಿಯಮ್ಮದೇವಿಯವರ ಪುರ ಪ್ರವೇಶ,ಮಂಡೆ ಉತ್ಸವ,ಅಶ್ವವಾಹನೋತ್ಸವ ಕೂಡುಭೇಟಿ, ಮದಲಾಸಿ ಪೂಜೆಗಳಿರುತ್ತವೆ.
ಹರಕೆ ಕಾಸನು ತೂರಲು ಬನ್ನಿ...ಸ್ವಾಮಿಯ ಕೃಪೆಗೆ ಪಾತ್ರರಾಗಲು ಬನ್ನಿ. . .ಹೊನ್ನಿನ ತೇರಲಿ ಸಾಗುವ ಉತ್ಸವವ ನೋಡಲು ಬನ್ನಿ...ಬನ್ನಿ ನಮ್ಮ ಶ್ರೀವರದನ ಗುಡಿಗೆ..ಕೆ.ಎಸ್.ವಿನಯ್.ಕಂಚೀಪುರ...
-------------------------------------------
ದುಡ್ಡಿನ ತೇರು ಎಂದೆ ಪ್ರಸಿದ್ಧಿ :ಹೊನ್ನಿನ ತೇರಿಗೆ ಕ್ಷಣಗಣನೆ
----------------------
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕಂಚೀಪುರದಲ್ಲಿ ಪುರಾಣಪ್ರಸಿದ್ಧ ಶ್ರೀ ಕಂಚಿ ವರದರಾಜ ಸ್ವಾಮಿಯವರ ರಥೋತ್ಸವಕ್ಕೆ ಕ್ಷಣಗಣನೆ ನಡೆದಿದ್ದು ಗುರುವಾರ ಮುಂಜಾನೆ 1.55 ರಿಂದ 3.36ರವರೆಗೆ ಸ್ವಾಮಿಯವರ ರಥೋತ್ಸವ ಅಸಂಖ್ಯಾತ ಭಕ್ತಾಧಿಗಳ ಸಮ್ಮುಖದಲ್ಲಿ ಜರುಗಲಿದೆ.ಜಾತ್ರಾ ಮಹೋತ್ಸವ ಏ19 ರಿಂದಲೇ ಪ್ರಾರಂಭವಾಗಿದ್ದು ಏ.30 ರವರೆಗೆ ನಡೆಯಲಿದ್ದು ಪ್ರಯುಕ್ತ ನಿತ್ಯ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಸ್ವಾಮಿಯವರ ರಥೋತ್ಸವ ರಾಜ್ಯದಲ್ಲಿಯೇ ವಿಶಿಷ್ಟವಾಗಿದ್ದು ಹೊನ್ನುಮಳೆ ರಥೋತ್ಸವ ಎಂದು ಕರೆಯಲಾಗುತ್ತದೆ.ಇತರೆ ರಥೋತ್ಸವಕ್ಕಿಂತ ಇದು ವಿಭಿನ್ನವಾಗಿದ್ದು ಎಲ್ಲಡೆ ನಡೆಯುವ ರಥೋತ್ಸವದಲ್ಲಿ ಸಾಮಾನ್ಯವಾಗಿ ಭಕ್ತರು ರಥಕ್ಕೆ ಬಾಳೆ ಹಣ್ಣು ತೂರುವ ಮೂಲಕ ಭಕ್ತಿ ಅರ್ಪಿಸುವುದು ವಾಡಿಕೆಯಾಗಿದ್ದರೆ, ಇಲ್ಲಿ ನಡೆಯುವ ರಥೋತ್ಸವದಲ್ಲಿ ಭಕ್ತರು ದೇವರಿಗೆ ದುಡ್ಡನ್ನು ತೂರುವುದರ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸುವುದು ಸಂಪ್ರದಾಯವಾಗಿದೆ.
ಶ್ರೀಕಂಚೀವರದರಾಜ ಸ್ವಾಮಿಯವರಿಗೆ ಭಕ್ತರು ತಮ್ಮ ಇಷ್ಟಾನುಸಾರ ಹರಕೆ ಕಟ್ಟಿ ಕಾಸನ್ನು ತೂರಿದರೆ ಸರ್ವಕಷ್ಟಗಳು ಪರಿಹಾರವಾಗಿ ಸುಖಶಾಂತಿ ನೆಮ್ಮದಿ ದೂರಕಿ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆಯಿದೆ.
ವರದರಾಜ ಸ್ವಾಮಿಯು ಬೇಡಿದ ಭಕ್ತರಿಗೆ ವರವನ್ನು ದಯಪಾಲಿಸುವ ನಿಜದೈವವೆಂಬ ನಂಬಿಕೆ ಮನೆ ಮಾಡಿದ್ದು ಹಾಗಾಗಿ ತಮ್ಮ ಇಷ್ಟಾರ್ಥಸಿದ್ಧಿಯಾದ ಭಕ್ತರು ,ಹರಕೆ ಮಾಡಿಕೊಂಡ ಭಕ್ತರು ರಥೋತ್ಸವದಂದು ಶ್ರಿ ಸ್ವಾಮಿಯವರಿಗೆ 100 ರೂಪಾಯಿಯಿಂದ ಹಿಡಿದು ಲಕ್ಷದವರೆಗೆ ಚಿಲ್ಲರೆ ಹಾಗೂ ನೋಟನ್ನು ತೂರುವುದು ಈ ಜಾತ್ರೆಯ ವಿಶೇಷಣವಾಗಿದೆ.
ಕಾರ್ಯಕ್ರಮ: ಏ.27ರಂದು ಕಂಚೀಪುರ ಗ್ರಾಮದಲ್ಲಿ ಸೇವೆ ಸ್ವೀಕರಿಸಿ ರಾತ್ರಿ ಚಿಕ್ಕಬ್ಯಾಲದಕೆರೆ ಕರಿಯಮ್ಮ ದೇವಿಯ ಆಗಮನದ ನಂತರ ಕೂಡುಭೇಟಿ ನಡೆಯುವುದು.
ಏ 28ರ ಗುರುವಾರ ಮುಂಜಾನೆ 1.55 ರಿಂದ 3.36ರವರೆಗೆ ಶ್ರೀಸ್ವಾಮಿಯವರ ಹೊನ್ನಮಳೆ ಸುರಿಯುವ ರಥೋತ್ಸವ ನಡೆಯಲಿದೆ.ನಂತರ ಕಿಟ್ಟದಾಳ್ ಗ್ರಾಮಸ್ಥರಿಂದ ಹಾಲುಪಲ್ಲಕ್ಕಿ ಉತ್ಸವ ನಡೆಯಲಿದೆ.
ಏ.29ರ ಶುಕ್ರವಾರದಂದು ಕಂಕಣ ವಿಸರ್ಜನೆ,ಅವಭೃತ ಸ್ನಾನ,ಸಂಜೆ ಅಹಲ್ಯನಾಥ ದೇವಾಲಯದ ಬಳಿ ಸರ್ಪೋತ್ಸವ,ಪುಷ್ಪೋತ್ಸವ ಹಾಗೂ ಸಿಂಹವಾಹನೋತ್ಸವ ನಡೆಯಲಿದೆ.

ಮರುದಿನ ಬೆಳಗ್ಗೆ ಶ್ರೀಕರಿಯಮ್ಮ ದೇವಿಯವರು ಪುರದ ಪ್ರತಿ ಮನೆ ಮನೆಗೂ ತೆರಳಿ ಪೂಜೆ ಮಡಲಕ್ಕಿ ಸ್ವೀಕರಿಸುವುದರೊಂದಿಗೆ ಶ್ರೀಸ್ವಾಮಿಯವರ ಜಾತ್ರಾ ಕೈಕರ್ಯಗಳು ಮುಕ್ತಾಯವಾಗುತ್ತವೆ.
---------------------------------------------ಹರಕೆ ಕಾಸನು ತೂರಲು ಬನ್ನಿ...ಸ್ವಾಮಿಯ ಕೃಪೆಗೆ ಪಾತ್ರರಾಗಲು ಬನ್ನಿ. . .ಹೊನ್ನಿನ ತೇರಲಿ ಸಾಗುವ ಉತ್ಸವವ ನೋಡಲು ಬನ್ನಿ...ಬನ್ನಿ ನಮ್ಮ ಶ್ರೀವರದನ ಗುಡಿಗೆ..ಕೆ.ಎಸ್.ವಿನಯ್.ಕಂಚೀಪುರ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ