ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಹೋಬಳಿಯ ಬೆಳಗುಲಿಯಲ್ಲಿ ಹದಿನೈದು ವರ್ಷಗಳ ಬಳಿಕ ಹೊನ್ನಮರಡಿ ರಂಗನಾಥಸ್ವಾಮಿಯ ದೊಡ್ಡ ಜಾತ್ರೆ ಏ.15,ಶುಕ್ರವಾರ ಧ್ವಜಾರೋಹಣ ದೊಂದಿಗೆ ಆರಂಭಗೊಂದು ಏ.25ರ ಸೋಮವಾರದವರೆಗೆ ಸತತ 11 ದಿನಗಳ ಕಾಲ ನಡೆಯಿತು. ಏ.22ರಶುಕ್ರವಾರ ಬ್ರಹ್ಮ ರಥೋತ್ಸವ ನಡೆಯಿತು.
ಏ.25ರಂದು ನಡೆದ ಕೆಂಡೋತ್ಸವ ನಡೆಯಿತು.15 ವರ್ಷಗಳ ಬಳಿಕ ನಡೆದ ದೊಡ್ಡ ಜಾತ್ರೆಗೆ ಬೆಳಗುಲಿ, ಪಾಪನಕೋಣ, ಬರಗೂರು, ಹೊಸಕೆರೆ, ತಾರೀಕಟ್ಟೆ, ತಾರೀಕಟ್ಟೆ ತಾಂಡ್ಯ, ಅವಳಗೆರೆ, ಅವಳಗೆರೆ ಗೊಲ್ಲರಹಟ್ಟಿ, ಎರೆಕಟ್ಟೆ, ಅಂಕಸಂದ್ರ, ಬಂಗಾರಗೆರೆ, ರಂಗೇನಹಳ್ಳಿ, ಓಟೀಕೆರೆ ಸೇರಿದಂತೆ 50ಕ್ಕೂ ಹೆಚ್ಚು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು ಅಲ್ಲದೆ ಬೆಂಗಳೂರು, ಮೈಸೂರು, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ ಭಾಗಗಳಿಂದಲೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ