ಹುಳಿಯಾರು:ಯುಗಾದಿ ಹಬ್ಬದಲ್ಲಿ ಹೊಸ ಉಡುದಾರವನ್ನುಕಟ್ಟಿಕೊಳ್ಳುವುದು ರೂಢಿಯಲ್ಲಿದ್ದು ಹಬ್ಬದ ದಿನ ಸಂಪೂರ್ಣ ಹೊಸದನ್ನು ಹಾಕಿಕೊಳ್ಳಬೇಕೆಂಬ ದೃಷ್ಠಿಯಿಂದ ಹುಳಿಯಾರಿನಲ್ಲಿ ನಡೆದ ಹಬ್ಬದ ಸಂತೆಯಲ್ಲಿ ಉಡುದಾರವನ್ನು ಸಹ ಕೊಂಡುಕೊಳ್ಳುತ್ತಿದ್ದು ಕಂಡುಬಂತು.
ಹಬ್ಬದ ಅಂಗವಾಗಿ ಉಡುದಾರದ ವ್ಯಾಪಾರ ತಕ್ಕಮಟ್ಟಿಗಿದ್ದು, ಕೆಲ ವ್ಯಾಪಾರಸ್ಥರು ಉಡುದಾರದ ಕೆಂಪು ಹಾಗೂ ಕಪ್ಪು ಬಣ್ಣದ ಉಡುದಾರವನ್ನು ತಂದು ೧೦ ರೂಗೆ ೨-೩ ಮಾರು ಎಂದು ಕೂಗುತ್ತಾ ಮಾರಾಟ ಮಾಡುತ್ತಿದ್ದರು. ಸಂತೆಯಲ್ಲಿ ಅಷ್ಟೆಅಲ್ಲದೆ ಪಟ್ಟಣದ ಬಸ್ ನಿಲ್ದಾಣ ಹಾಗೂ ಪ್ರಮುಖ ಬೀದಿಗಳಲ್ಲಿ ಯುಗಾದಿ ಉಡುದಾರ ಎಂದು ಕೂಗುತ್ತಾ ವ್ಯಾಪಾರ ಮಾಡುತ್ತಿದ್ದವರ ಗುಂಪೆ ಕಂಡುಬಂತು.
ಶುಕ್ರವಾರ ಹಬ್ಬವಿದ್ದು ಕಳೆದೆರಡು ದಿನಗಳಿಂದ ಉಡುದಾರದ ವ್ಯಾಪಾರ ಮಾಡುತ್ತಿದ್ದು ಲಾಭವೋ, ಲುಕ್ಸಾನವೋ ಹಿಂದಿನಿಂದ ಮಾಡಿಕೊಂಡು ಬಂದಿರುವುದು ಬಿಡಬಾರದೆಂದು ಉಡುದಾರದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದೆವೆ.ದಿನೆದಿನೇ ಉಡುದಾರದ ವ್ಯಾಪಾರ ಇಳಿಮುಖವಾಗುತ್ತಿದ್ದು ಹಬ್ಬದ ದಿನದಲ್ಲಿ ದಿನಕ್ಕೆ ಮೂರ್ನಾಲ್ಕು ಸಾವಿರ ವ್ಯಾಪಾರ ಮಾಡುತ್ತಿದ್ದವರು ಇಂದು ಸಾವಿರ ರೂಪಾಯಿ ಮಾಡುವುದು ಕಷ್ಟಕರವಾಗಿದೆ. ಇನ್ನುಳಿದ ದಿನಗಳಲ್ಲಿ ಜಾತ್ರೆಯಲ್ಲಿ ಹಾಗೂ ಅಂಗಡಿಯಲ್ಲಿ ಮಾರಾಟ ಮಾಡುತ್ತೇವೆ. ಜಾತ್ರೆಯಿಲ್ಲದ ವೇಳೆ ಕೃಷಿ ಕಾರ್ಯಗಳನ್ನು ಮಾಡುತ್ತೇವೆ ಎನ್ನುತ್ತಾರೆ ದಾವಣಗೆರೆಯಿಂದ ಬಂದಿದ್ದ ಉಡುದಾರದ ವ್ಯಾಪಾರಿ ಮಂಜಣ್ಣ .
------------------------
ಉಡುದಾರದ ವ್ಯಾಪಾರ ಚಿಲ್ಲರೆ ವ್ಯಾಪಾರವಾಗಿದ್ದು ಕಳೆದ ಹತ್ತು ವರ್ಷದಿಂದ ಉಡುದಾರದ ವ್ಯಾಪಾರ ಮಾಡುತ್ತಿದ್ದೇನೆ ಈ ಮೊದಲು ವ್ಯಾಪಾರ ಚೆನ್ನಾಗಿತ್ತು ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಕುಸಿದಿದೆ ಅದರೂ ಹಿಂದಿನಿಂದ ಮಾಡಿಕೊಂಡು ಬಂದಿರುವುದರಿಂದ ಬಿಡದೆ ಉಡುದಾರದ ವ್ಯಾಪಾರ ಮಾಡುತ್ತಿದ್ದೇನೆ: ಕಲ್ಲೇನಹಳ್ಳಿಯ ಗವಿರಂಗಯ್ಯ ಉಡುದಾರದ ವ್ಯಾಪಾರಿ.
------------------------
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ