(ಸುದ್ದಿ ಮಾಹಿತಿ:http://chikkanayakanahallinews.blogspot.in/ )
ತಾಲ್ಲೂಕು ಆಡಳಿತ, ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಹಾಗೂ ಇತರೆ ಎಲ್ಲಾ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಜಯಂತಿಯನ್ನು ಚಿಕ್ಕನಾಯಕನಹಳ್ಳಿಯಲ್ಲಿ ಇಂದು(೧೪ರಂದು) ಆಚರಿಸಲಾಗುತ್ತದೆ.
ಗುರುವಾರ ಬೆಳಗ್ಗೆ ೯-೩೦ಕ್ಕೆ ತಾಲ್ಲೂಕು ಕಚೇರಿಯ ಮುಂಭಾಗದಿಂದ ಡಾ| ಬಿ.ಆರ್.ಅಂಬೇಡ್ಕರ್ ಹಾಗೂ ಡಾ||ಬಾಬು ಜಗಜೀವನರಾಂ ರವರ ಭಾವಚಿತ್ರ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಲಿದ್ದು ವಿವಿಧ ಜಾನಪದ ಕಲಾತಂಡಗಳು ಭಾಗವಹಿಸಲಿವೆ.
ಮಧ್ಯಾಹ್ನ ೧೨-೦೦ಕ್ಕೆ ಕನ್ನಡ ಸಂಘದ ವೇದಿಕೆಯಲ್ಲಿ ನಡೆಯಲಿರುವ ಸಮಾರಂಭ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ.ಸುರೇಶ್‌ಬಾಬು ವಹಿಸಲಿದ್ದು ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್ ಉದ್ಘಾಟಿಸಲಿದ್ದಾರೆ.
ಜಿ.ಪಂ.ಸದಸ್ಯ ಎಸ್.ಟಿ.ಮಹಲಿಂಗಯ್ಯ ಡಾ||ಬಿ.ಆರ್.ಅಂಬೇಡ್ಕರ್‌ರವರ ಭಾವಚಿತ್ರವನ್ನು ಹಾಗೂ ಡಾ|ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಪುರಸಭಾ ಉಪಾದ್ಯಕ್ಷೆ ಬಿ.ಇಂದಿರಾ ಅನಾವರಣಗೊಳಿಸುವರು.
ಮೈಸೂರಿನ ಮಹಾರಾಜ ಕಾಲೇಜಿನ ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಡಾ|| ಆರ್ ತಿಮ್ಮರಾಯಪ್ಪ ಉಪನ್ಯಾಸ ನೀಡಲಿದ್ದಾರೆ.
ವಿದ್ಯಾರ್ಥಿನಿಯರಾದ ಎಂ.ಬಿ.ದಿವ್ಯ, ಎಲ್.ಹೇಮಾ, ದಸೂಡಿಯ ಪ್ರಗತಿಪರ ರೈತ ಮಹಿಳೆ ಅರ್ಚನಾ , ಹನುಮಂತಪುರದ ಅಂಗನವಾಡಿ ಕಾರ್ಯಕರ್ತೆ ಎನ್.ಭಾಗ್ಯಮ್ಮ, ಕಲಾವಿದ ಸಿ.ಎಸ್.ಚಂದ್ರಯ್ಯ, ಪತ್ರಿಕಾ ಪ್ರತಿನಿಧಿ ಸಿ.ಹೆಚ್.ಚಿದಾನಂದ್ ಇವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ