ಹುಳಿಯಾರು ಹೋಬಳಿಯಾದ್ಯಂತ ಶಾಲಾಕಾಲೇಜುಗಳಲ್ಲಿ , ಸರ್ಕಾರಿ ಕಛೇರಿಗಳಲ್ಲಿ ,ಸಂಘ ಸಂಸ್ಥೆಗಳು ಮಾಜಿ ರಾಷ್ಟ್ರಪತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದರು. ಹುಳಿಯಾರಿನ ಕರವೇ ಪದಾಧಿಕಾರಿಗಳು ಕರವೇ ವೃತ್ತದಲ್ಲಿ ಕಲಾಂ ಅವರ ನಿಧನಕ್ಕೆ ಮೌನಾಚರಣೆ ನಡೆಸಿ, ಸಂತಾಪ ಸೂಚಿಸಿದರು. ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯರ್ತರು ಕರವೇ ವೃತ್ತದಲ್ಲಿ ಅಬ್ದುಲ್ ಕಲಾಂ ಅವರ ಭಾವಚಿತ್ರವನ್ನಿಟ್ಟು ಮೌನಾಚರಣೆ ಮಾಡುವ ಮೂಲಕ ಕಲಾಂ ನಿಧನಕ್ಕೆ ಸಂತಾಪ ಸೂಚಿಸಿದರು. ಗ್ರಾ.ಪಂ.ಸದಸ್ಯ ಹಾಗೂ ಕರವೇ ಅಧ್ಯಕ್ಷರಾಗಿರುವ ಕೋಳಿ ಶ್ರೀನಿವಾಸ್ ಮಾತನಾಡಿ, ದೇಶಕಂಡ ಮಹಾನ್ ವ್ಯಕ್ತಿಗಳಲ್ಲಿ ಕಲಾಂ ಸಹ ಒಬ್ಬರಾಗಿದ್ದು, ಇಡಿ ಪ್ರಪಂಚಕ್ಕೆ ಪರಿಚಿತರಾದ ವ್ಯಕ್ತಿಯಾಗಿದ್ದವರು. ಬಡತನದಲ್ಲಿ ವಿದ್ಯಾಭ್ಯಾಸ ಕಲಿತ ಕಲಾಂ ಭಾರತದ ರಾಷ್ಟ್ರಪತಿಯಾಗುವ ಮೂಲಕ ಕಠಿಣ ಪರಿಶ್ರಮದಿಂದ ಯಾವ ಸ್ಥಾನವನ್ನಾದರೂ ಪಡೆಯಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದರು.ವಿಜ್ಞಾನಿಯಾಗಿ, ಕ್ಷಿಪಣಿ ತಂತ್ರಜ್ಞರಾಗಿ ಅವರ ಕೊಡುಗೆ ಅವಿಸ್ಮರಣೀಯ. ಅವರ ಅಕಾಲಿಕ ಮರಣ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು. ಈ ವೇಳೆ ಕರವೇ ಪದಾಧಿಕಾರಿಗಳಾದ ಚಂಬಣ್ಣ, ಮುರುಳಿ,ರಘು,ವಕೀಲ ಮೋಹನ್, ರಂಗಸ್ವಾಮಿ,ಗೌಡಿರಂಗನಾಥ್, ದಿವಾಕರ,ಮೋಹನ್,ಕುಮಾರ್ ಸೇರಿದಂತೆ ಇತರರಿದ್ದರು. ಪಟ್ಟಣದ ಎಂಪಿಎಸ್ ಶಾಲೆ,ವಾಸವಿ,ಟಿ.ಆರ್.ಎಸ್.ಆರ್,ಕನಕದಾಸ, ಜಿಪಿಯುಸಿ, ಉರ್ದುಶಾಲೆ,ಜ್ಞಾನಜ್ಯೋತಿ,ವಿದ್ಯಾವಾರಿಧಿ ಸ್ಕೂಲ್, ಬಿಎಂಎಸ...