ಮಕ್ಕಳ ನಾಟಕ ಹಬ್ಬ-೨೦೧೫ರ ಅಂಗವಾಗಿ ತಿಪಟೂರಿನ ಭೂಮಿ ಥಿಯೇಟರ್ ತಂಡದಿಂದ ಪಟ್ಟಣದಲ್ಲಿ ಎರಡುದಿನಗಳ ಕಾಲ ನಡೆಯಲಿರುವ ನಾಟಕ ಪ್ರದರ್ಶನಕ್ಕೆ ಮಕ್ಕಳಸಾಹಿತಿ ಕೃಷ್ಣಮೂರ್ತಿಬಿಳಿಗೆರೆ ಗುರುವಾರ ಚಾಲನೆ ನೀಡಿದರು.
ಹುಳಿಯಾರಿನ ಅಂಬೇಡ್ಕರ್ ಭವನದಲ್ಲಿ ನಡೆದ "ನೀಲಿ ಕುದುರೆ" ನಾಟಕ ಪ್ರದರ್ಶನಕ್ಕೆ ಮಕ್ಕಳಸಾಹಿತಿ ಕೃಷ್ಣಮೂರ್ತಿಬಿಳಿಗೆರೆ ಚಾಲನೆನೀಡಿ ಮಾತನಾಡಿದರು. |
ನಂತರ ಮಾತನಾಡಿದ ಅವರು ನೀಲಿ ಕುದುರೆ ಜಗತ್ ಪ್ರಸಿದ್ದ ಮಕ್ಕಳ ನಾಟಕವಾಗಿದ್ದು ಬ್ರೆಜಿಲ್ ನ ಖ್ಯಾತ ಲೇಖಕಿ ಮಾರಿಯಾ ಕ್ಲಾರಾ ಮಾಶಾಡೊ ಅವರು ರಚಿಸಿದ್ದಾರೆ. ಪೋರ್ಚಗೀಸ್ ಭಾಷೆಯಲ್ಲಿ ರಚನೆಯಾಗಿರುವ ಈ ನಾಟಕವನ್ನು ರಂಗಕರ್ಮಿ ಬಿ.ವಿ.ಕಾರಂತರು ಕನ್ನಡಕ್ಕೆ ಅನುವಾದಿಸಿದ್ದಾರೆ. ಭೂಮಿ ಥಿಯೇಟರ್ ನಿರ್ದೇಶಕರಾದ ಸತೀಶ್ ತಿಪಟೂರು ಅವರು ಭೂಮಿ ರಂಗ ಪ್ರಯೋಗಶಾಲೆಯ ಮೂಲಕ ಶಾಲಾಮಕ್ಕಳಿಗಾಗಿ ಇದನ್ನು ಪ್ರದರ್ಶಿಸುತ್ತಿದ್ದಾರೆ. ಇಂತಹ ನಾಟಕ ಪ್ರದರ್ಶನಗಳು ಮಕ್ಕಳಿಗೆ ರಂಜನೆ ಕೊಡುವುದರ ಜೊತೆಗೆ ಸಾಮಾಜಿಕ ಅರಿವು,ಜವಾಬ್ದಾರಿಯನ್ನು ಬೆಳೆಸಿ ಅವರ ಕಲ್ಪನಾ ಶಕ್ತಿಯು ವಿಸ್ತರಿಸಿ ಹೊಸದಿಕ್ಕಿನತ್ತ ಕೊಂಡೊಯ್ಯುತ್ತದೆ ಎಂದು ಶ್ಲಾಘಿಸಿದರು.
ತಿಪಟೂರಿನ ಸತೀಶ್ ಅವರ ನಿರ್ದೇಶನದಲ್ಲಿ ನಾಟಕಪ್ರದರ್ಶನ ನಡೆದಿದ್ದು, ಪಟ್ಟಣದ ಅಂಬೇಡ್ಕರ್ ಭವನದಲ್ಲಿ ನಡೆದ ನಾಟಕ ಪ್ರದರ್ಶನ ವೀಕ್ಷಿಸಲು ವಾಸವಿಶಾಲೆ,ಟಿ.ಆರ್.ಎಸ್.ಆರ್ ಶಾಲೆ,ಕನಕದಾಸ ಶಾಲೆಯ ವಿದ್ಯಾರ್ಥಿಗಳು ಆಗಮಿಸಿದ್ದರು. ನಾಟಕದಲ್ಲಿ ಬರುವ ಜೋಕರ್, ಲಿಲ್ಲೀ,ಪೀಟರ್ ಪಾತ್ರಗಳು ಮಕ್ಕಳ ಗಮನ ಕೇಂದ್ರಿಕರಿಸಿದ್ದು, ಹೊಟ್ಟೆ ಹುಣ್ಣಾಗುಂತೆ ನಗುವಂತೆ ಮಾಡಿತ್ತು. ಈ ವೇಳೆ ಸಾವಯವ ಕೃಷಿಕ ರಾಮಕೃಷ್ಣಪ್ಪ, ಗ್ರಾ.ಪಂ.ಅಧ್ಯಕ್ಷೆ ಗೀತಾಪ್ರದೀಪ್, ಸದಸ್ಯ ಎಲ್.ಆರ್.ಚಂದ್ರಶೇಖರ್, ಕನಕದಾಸ ಶಾಲೆಯ ಮುಖ್ಯಶಿಕ್ಷಕ ಚನ್ನಬಸಪ್ಪ,ಟಿ.ಆರ್.ಎಸ್.ಆರ್ ಶಾಲೆಯ ಮುಖ್ಯಶಿಕ್ಷಕ ಹೆಚ್.ವಿ.ರಮೇಶ್,ಸೃಜನಾ ಮಹಿಳಾ ಸಂಘದ ಜಯಲಕ್ಷ್ಮಿ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಸೇರಿದಂತೆ ಭೂಮಿ ಥಿಯೇಟರ್ ಬಳಗದ ಕಲಾವಿದರು ಉಪಸ್ಥಿತರಿದ್ದರು. ಶುಕ್ರವಾರವೂ ಸಹ ನಾಟಕ ಪ್ರದರ್ಶನ ನಡೆಯಲಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ