ಕಳೆದ ಕೆಲದಿನಗಳಿಂದ ಕುತೂಹಲ ಕೆರಳಿಸಿದ್ದ ಹುಳಿಯಾರು ಗ್ರಾಮ ಪಂಚಾಯ್ತಿ ಅಧ್ಯಕ್ಷರ ಆಯ್ಕೆಗೆ ಶುಕ್ರವಾರ ತೆರೆಬಿದಿದ್ದು, ಜೆಡಿಎಸ್ ಬೆಂಬಲಿತರಾದ ಗೀತಾಪ್ರದೀಪ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಎಂ.ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹುಳಿಯಾರು ಗ್ರಾ.ಪಂ.ನ ನೂತನ ಅಧ್ಯಕ್ಷರಾಗಿ ಗೀತಾಪ್ರದೀಪ್ ಹಾಗೂ ಉಪಾಧ್ಯಕ್ಷರಾಗಿ ಗಣೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. |
ಪಂಚಾಯ್ತಿಯ ಒಟ್ಟು ೩೯ ಸ್ಥಾನಗಳ ಪೈಕಿ ೨೮ ಮಂದಿ ಜೆಡಿಎಸ್ ಬೆಂಬಲಿತರು ಹಾಗೂ ಕಾಂಗ್ರೆಸ್ , ಬಿಜೆಪಿ ಸದಸ್ಯರುಗಳು ಇದ್ದಾರೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಸಮ್ಮಿಶ್ರದಿಂದಾಗಿ ಒಟ್ಟು ೩೨ ಮಂದಿ ಜೆಡಿಎಸ್ ಗೆ ಬೆಂಬಲ ನೀಡಿದ್ದಾರೆ. ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬಂದಿದ್ದು ಅಧ್ಯಕ್ಷ ಸ್ಥಾನಕ್ಕೆ ೫ ನೇ ಬ್ಲಾಕ್ ನ ಗೀತಾಪ್ರದೀಪ್ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟಜಾತಿಗೆ ಬಂದಿದ್ದು ೧ ನೇ ಬ್ಲಾಕ್ ನ ಗಣೇಶ್ ಮಾತ್ರವೇ ಉಮೇದುವಾರಿಕೆ ಸಲ್ಲಿಸಿದ್ದು, ಇತರ ಪಕ್ಷದ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನಲೆಯಲ್ಲಿ ಅವರುಗಳನ್ನೇ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನಾಗಿ ಘೋಷಿಸಲಾಯಿತು.
ಚುನಾವಣಾಧಿಕಾರಿಯಾಗಿ ಇಓ ಕೃಷ್ಣಮೂರ್ತಿ ಕಾರ್ಯ ನಿರ್ವಹಿಸಿದ್ದು, ಪಿಡಿಓ ಅಡವೀಶ್ ಕುಮಾರ್, ತಾಲ್ಲೂಕು ಯುವ ಜೆಡಿಎಸ್ ನ ಅಧ್ಯಕ್ಷ ರಂಗನಾಥ್(ಗೌಡಿ), ಗ್ರಾ.ಪಂ.ಸದಸ್ಯರಾದ ಚಂದ್ರಶೇಖರ್, ಅಶೋಕ್ ಬಾಬು, ರಾಘವೇಂದ್ರ,ಹೇಮಂತ್, ಶಂಕರ್, ದಯಾನಂದ್, ಕೋಳಿಶ್ರೀನಿವಾಸ್, ನಾಗರಾಜು, ಪಟಾಕಿಶಿವಣ್ಣ,ಸೈಯ್ಯದ್ ಜಬಿಉಲ್ಲಾ,ಗೀತಾ ಅಶೋಕ್ ಬಾಬು, ಸಿದ್ದಗಂಗಮ್ಮ, ಧನುಷ್ ರಂಗನಾಥ್, ಬಡ್ಡಿಪುಟ್ಟಣ್ಣ, ಡಿಶ್ ಬಾಬು, ಡಾಬಾಸೂರಪ್ಪ,ಅಹಮದ್ ಖಾನ್,ಕೆಂಪಮ್ಮ,ನೂರ್ ಜಾನ್ ಬೀ, ವೆಂಕಟೇಶ್ ಸೇರಿದಂತೆ ಇತರ ಸದಸ್ಯರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ