ವಿಷಯಕ್ಕೆ ಹೋಗಿ

ಹೆದ್ದಾರಿ ಕಾಮಗಾರಿಗೆ ಒತ್ತಾಯಿಸಿ ಪ್ರತಿಭಟನೆ ಪಟ್ಟು ಬಿಡದ ಧರಣಿನಿರತರು : ಮುಂದುವರಿದೆ ಅಹೋರಾತ್ರಿ ಧರಣಿ : ಸ್ಥಳದಲ್ಲೇ ಅಡುಗೆ

ಹೊಯ್ಸಳಕಟ್ಟೆ ಮೂಲಕ ಹಾದುಹೋಗುವ ಹುಳಿಯಾರು- ಶಿರಾ ರಸ್ತೆ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಶೀಘ್ರ ಪ್ರಾರಂಭಿಸುವಂತೆ ಹಾಗೂ ಹದಗೆಟ್ಟಿರುವ ಈ ಮಾರ್ಗವನ್ನು ದುರಸ್ಥಿಗೊಳಿಸಿ ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಹೊಯ್ಸಳಕಟ್ಟೆಯಲ್ಲಿ ಬಸ್ ನಿಲ್ದಾಣದಲ್ಲಿ ಸೋಮವಾರ ಧರಣಿ ಪ್ರಾರಂಭಿಸಿದ ಗ್ರಾಮಸ್ಥರು ಕಾಮಗಾರಿ ಆರಂಭವಾಗುವವರೆಗೆ ಸ್ಥಳದಿಂದ ಕದಲುವುದಿಲ್ಲವೆಂಬ ತಮ್ಮ ಪಟ್ಟುಸಡಿಲಿಸದೆ ಸ್ಥಳದಲ್ಲೇ ಅಡುಗೆ ಮಾಡುವ ಮುಲಕ ಅಹೋರಾತ್ರಿಧರಣಿ ಮುಂದಾಗಿದ್ದಾರೆ.
ಹುಳಿಯಾರು-ಶಿರಾ ನಡುವಿನ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುವಂತೆ ಒತ್ತಾಯಿಸಿ ಹೊಯ್ಸಳಕಟ್ಟೆ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ರಾಷ್ಟ್ರೀಯ ಹೆದ್ದಾರಿಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಗೆ ಘೇರಾವ್ ಮಾಡಿದ ಪ್ರತಿಭಟನಾ ನಿರತರು ಅವರ ಯಾವುದೇ ಉತ್ತರಕ್ಕೂ ಕಿವಿಗೊಡದೆ ಮೇಲಾಧಿಕಾರಿಗಳನ್ನು ಕರೆತರೆದೆ ಅವರ ಗಮನಕ್ಕೂ ತಾರದೇ ತಾವೇ ಸ್ಥಳಕ್ಕೆ ಬಂದಿದ್ದರಿಂದ ರೊಚ್ಚಿಗೆದ್ದ ಧರಣಿನಿರತರು ಅವರೊಂದಿಗೆ ಮಾತಿನಚಕಮುಕಿ ನಡೆಸಿದರು.
ಸಮಸ್ಯೆ : ಹುಳಿಯಾರು-ಶಿರಾ ಮಾರ್ಗದ ರಸ್ತೆಯನ್ನು ಎನ್.ಹೆಚ್.೨೩೪ ಆಗಿ ಮೇಲ್ದರ್ಜೆಗೇರಿಸಿದ್ದು ಹೆದ್ದಾರಿ ಕಾಮಗಾರಿ ನಡೆಯದೆ ರಸ್ತೆಯೆಲ್ಲಾ ಹದಗೆಟ್ಟು ಆಳುದ್ದ ಗುಂಡಿಗಳು ಬಿದ್ದಿದ್ದು ಸಂಚಾರ ದುಸ್ಥರವಾಗಿದೆ. ಈ ಮಾರ್ಗದಲ್ಲಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ಈ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ. ರಸ್ತೆ ಕಾಮಗಾರಿ ಹೈದರಬಾದಿನ ಎ.ಎಸ್.ಐ.ಪಿ ಕಂಪನಿ ೨೦೧೨ರಲ್ಲಿ ಗುತ್ತಿಗೆ ಪಡೆದಿದ್ದು ರಸ್ತೆ ಬದಿಯ ಮರಗಳನ್ನು ತೆರವುಗೊಳಿಸಿದ್ದು ಬಿಟ್ಟರೆ ರಸ್ತೆ ಕೆಲಸ ಮಾಡಿಲ್ಲ. ಸಂಬಂಧಪಟ್ಟ ಇಲಾಖಾಧಿಕಾರಿಗಳನ್ನು ವಿಚಾರಿಸಿದರೆ ಈ ಕಾಮಗಾರಿಯ ಟೆಂಡರ್ ರದ್ದಾಗಿದ್ದು ಹೊಸದಾಗಿ ಟೆಂಡರ್ ಆಗಬೇಕಿದೆ ಎನ್ನುತ್ತಿದ್ದಾರೆ. ಈ ಹಿಂದೆ ಪ್ರತಿಭಟನೆ ಮಾಡಿದಾಗ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಶೀಘ್ರವೇ ಹೊಸದಾಗಿ ಟೆಂಡರ್ ಕರೆದು ಕೆಲಸ ಪ್ರಾರಂಭವಾಗುತ್ತದೆ.ಅಲ್ಲಿಯವರೆಗೆ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುವುದಾಗಿ ಹೇಳಿದ್ದರು ವಿನ: ಯಾವುದು ಕಾರ್ಯರೂಪಕ್ಕೆ ಬಂದಿಲ್ಲ. ಈಗಲೂ ಅದನ್ನೇ ಹೇಳುತ್ತೀರಾ ಎಂದು ಧರಣಿನಿರತರು ಎಂಜಿನಿಯರ್ ಮೇಲೆ ಹೌಹಾರಿದರು.
ಪೊಲೀಸ್ ಬಂದೋಬಸ್ತುನಲ್ಲಿ ಎಇಇ ಶಿವಕುಮಾರ್.
ಎನ್.ಹೆಚ್.೨೩೬ ಹೆದ್ದಾರಿ ಮಂಗಳೂರಿನಿಂದ- ಆಂಧ್ರ-ತಮಿಳುನಾಡಿನ ವಿಲ್ಲುಪುರಂಗೆ ಸಂಪರ್ಕ ಕಲ್ಪಿಸುವುದಿದ್ದು ಕೆಲವೆಡೆ ಈಗಾಗಲೇ ಕಾಮಗಾರಿ ನಡೆಯುತ್ತಿದೆ ಆದರೆ ಹುಳಿಯಾರು-ಶಿರಾ ನಡುವೆ ಮಾತ್ರ ಕೆಲಸ ನಡೆದಿಲ್ಲ. ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಬಸ್,ಆಟೋ,ಬೈಕ್ ಸೇರಿದಂತೆ ಇನ್ನಿತರ ವಾಹನ ಸವಾರರು ಪ್ರಯಾಸ ಪಡುವಂತಾಗಿದೆ. ಹೆದ್ದಾರಿ ಕಾಮಗಾರಿ ಯಾವಾಗಲಾದರೂ ಪ್ರಾರಂಭವಾಗಲಿ ಮೊದಲು ಸಂಚಾರಕ್ಕೆ ಯೋಗ್ಯವಾಗುವಂತೆ ರಸ್ತೆಯಲ್ಲಿನ ಗುಂಡಿಗಳನ್ನು ಟಾರು,ಜೆಲ್ಲಿ ಹಾಕಿ ಮುಚ್ಚುವ ಕಾರ್ಯವಾಗಬೇಕು, ಅಲ್ಲಿಯವರೆಗೂ ತಮ್ಮ ಧರಣಿ ನಿಲ್ಲುವುದಿಲ್ಲವೆಂದು ದಸೂಡಿ ಗ್ರಾ.ಪಂ. ಮಾಜಿಅಧ್ಯಕ್ಷ ಡಿ.ಬಿ.ರವಿಕುಮಾರ್ ತಿಳಿಸಿದ್ದಾರೆ.
ಧರಣಿನಿರತರ ಮಾತಿನಚಕಮುಕಿಗೆ ನಿರುತ್ತರರಾದ ಎಇಇ ಶಿವಕುಮಾರ್ ಧರಣಿನಿರತರ ಮನವೊಲಿಸಲು ತಿಣುಕಾಡಿದರು ಯಾವುದೇ ಪ್ರಯೋಜನವಾಗಲಿಲ್ಲ. ಸದ್ಯ ಈ ಹಿಂದೆ ಟೆಂಡರ್ ಪಡೆದವರು ನಿಗಧಿತ ಸಮಯದಲ್ಲಿ ರಸ್ತೆಕಾಮಗಾರಿ ಪ್ರಾರಂಭಿಸದ ಹಿನ್ನಲೆಯಲ್ಲಿ ಅವರ ಟೆಂಡರ್ ರದ್ದಾಗಿದೆ. ಈಗ ಹೊಸ ಟೆಂಡರ್ ಕರೆಯಲು ಪ್ರಕ್ರಿಯೆ ನಡೆದಿದ್ದು ದೆಹಲಿಯ ಹೆದ್ದಾರಿ ಪ್ರಾಧಿಕಾರಕ್ಕೂ ಕಳುಹಿಸಿದೆ. ಆದರೆ ಇದೀಗ ಮತ್ತೆ ಈ ಹಿಂದೆ ಟೆಂಡರ್ ಪಡೆದಿದ್ದ ಹೈದರಾಬಾದಿನ ಎಎಸೈಪಿ ಕಂಪನಿಯವರು ಪುನ: ತಮಗೆ ಟೆಂಡರ್ ಕೊಡಿ ಎನ್ನುತ್ತಿದ್ದಾರೆ ಈ ಹಿನ್ನಲೆಯಲ್ಲಿ ಕಾಮಗಾರಿ ಪ್ರಾರಂಭವಾಗಲು ತಡವಾಗುತ್ತಿದೆ ಎಂದು ಧರಣಿ ನಿರತರ ಪ್ರಶ್ನೆಗಳಿಗೆ ಉತ್ತರಿಸಿದರು.
ಶಿವಕುಮಾರ್ ಅವರನ್ನು ವಾಪಸ್ಸ್ ಹೊಗಲು ಬಿಡದ ಧರಣಿ ಕಳೆದ ಜನವರಿಯಲ್ಲಿ ಬುಕ್ಕಾಪಟ್ಟಣದಲ್ಲಿ ಪ್ರತಿಭಟನೆ ಮಾಡಿದ್ದಾಗ ಇದೇ ರೀತಿ ಹೇಳಿ ಹೋಗಿದ್ದಿರಿ ,ಆದರೆ ಈ ಬಾರಿ ಚೀಫ್ ಎಂಜಿನಿಯರ್ ಸ್ಥಳಕ್ಕಾಗಮಿಸಿ ಸಮಸ್ಯೆ ಬಗೆಹರಿಸುವವರೆಗೂ ಕದಲಲು ಬಿಡುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು. ಪಿಎಸೈ ಪ್ರವೀಣ್ ಕುಮಾರ್ ಸ್ಥಳಕ್ಕಾಗಮಿಸಿ ಧರಣಿನಿರತರೊಂದಿಗೆ ಮಾತನಾಡಿದರೂ ಸಹ ಯಾವುದೇ ಪ್ರಯೋಜನವಾಗದೆ ಸಂಜೆಯಾದರೂ ಧರಣಿ ಮುಂದುವರೆದಿತ್ತು.
ಹೆದ್ದಾರಿ ಪ್ರಾಧಿಕಾರದವರೋ, ಪಿಡಬ್ಯೂಡಿ ಅಧಿಕಾರಿಗಳೋ ಯಾರಾದರೂ ಸರಿ ಸ್ಥಳಕ್ಕೆ ಬಂದು ಈ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವ ಕಾರ್ಯ ಮಾಡಿಸುವವರೆಗೂ ಈ ಜಾಗದಿಂದ ಕದಲುವುದಿಲ್ಲ ಎಂದಿರುವ ದಬ್ಬಗುಂಟೆ ರವಿಕುಮಾರ್ ಧರಣಿ ನಿರತ ಸ್ಥಳದಲ್ಲೇ ಅಡುಗೆ ಮಾಡಿಸಿ ಪ್ರತಿಭಟನೆಗೆ ಕಾವೇರಿಸಿದ್ದಾರೆ.
ಧರಣಿಯಲ್ಲಿ ತಾ.ಪಂ.ಸದಸ್ಯೆ ಕವಿತಾಪ್ರಕಾಶ್, ವಕೀಲ ಮೋಹನ್ ಕುಮಾರ್, ರೈತಸಂಘದ ಸತೀಶ್, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ,ಸದಸ್ಯರಾದ ರಘು,ಚಿಕ್ಕಣ್ಣ,ಗಿರೀಶ್,ಕಲ್ಲೇನಹಳ್ಳಿ ಮಂಜಣ್ಣ,ದಬ್ಬಗುಂಟೆ ಜಯಣ್ಣ, ಹೊಯ್ಸಳಕಟ್ಟೆಯ ಕರವೇ , ಬುಕ್ಕಾಪಟ್ಟಣದ ಜಯಕರ್ನಾಟಕ ಸಂಘ, ಹೋಬಳಿಯ ರೈತಸಂಘದ ಪದಾಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
                                 -------------
ಹುಳಿಯಾರು-ಶಿರಾ ನಡುವಿನ ೪೬ ಕಿ.ಮೀ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು ಅಧೋಗತಿ ತಲುಪಿದ್ದು ಸಂಚಾರ ದುಸ್ಥರವಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಸ್ಥಳಕ್ಕಾಗಮಿಸಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸಲು ಮುಂದಾಗುವವರೆಗೂ ಎಇಇ ಅವರನ್ನು ಬಿಡುವುದಿಲ್ಲ ಹಾಗೂ ಇದಕ್ಕೆ ಸ್ಪಂದಿಸದಿದ್ದರೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ: ಡಿ.ಬಿ.ರವಿಕುಮಾರ್. ಗ್ರಾ.ಪಂ.ಮಾಜಿ ಅಧ್ಯಕ್ಷ.
------------

ಈ ರಸ್ತೆಯನ್ನು ಹೆದ್ದಾರಿಯಾಗಿ ಮೇಲ್ದರ್ಜೇಗೇರಿಸಿದ್ದು ಯಾರು ಟೆಂಡರ್ ಪಡೆದಿರುತ್ತಾರೋ ಅವರೇ ಈ ಕಾರ್ಯಗಳನ್ನು ಮಾಡಬೇಕು, ಆದರೆ ಟೆಂಡರ್ ರದ್ದಾಗಿರುವುದರಿಂದ ಈ ಸಮಸ್ಯೆಯಾಗಿದೆ. ಹೊಸ ಟೆಂಡರ್ ಗಾಗಿ ಸಂಬಂಧಪಟ್ಟ ಕಡತಗಳನ್ನು ದೆಹಲಿಗೆ ಕಳುಹಿಸಿದ್ದು ಟೆಂಡರ್ ಆಗುವುದು ಮಾತ್ರ ಬಾಕಿ ಇದೆ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಿಸುವ ಕಾಮಗಾರಿಗಾಗಿ ಪ್ರಾಧಿಕಾರಕ್ಕೆ ತಿಳಿಸಿದ್ದು ಅಲ್ಲಿಂದ ಅಪ್ರೋವಲ್ ಆಗಿ ಬರಬೇಕಿದೆ : ಶಿವಕುಮಾರ್ , ಎಇಇ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹುಳಿಯಾರು ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ 96.59 ಶೇಕಡವಾರು ಫಲಿತಾಂಶ

ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ-ವಾಣಿಜ್ಯ- ವಿಜ್ಞಾನ ವಿಭಾಗದಿಂದ ಒಟ್ಟು 272 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಆ ಪೈಕಿ 263 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿಗೆ ಶೇಕಡ 96.59 ಫಲಿತಾಂಶ ಲಭಿಸಿದೆ. ವಾಣಿಜ್ಯ ವಿಭಾಗದಲ್ಲಿ 98 ವಿದ್ಯಾರ್ಥಿಗಳ ಪೈಕಿ 97 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 99 % ಫಲಿತಾಂಶ ಲಭಿಸಿದೆ. ಕಲಾವಿಭಾಗದಲ್ಲಿ 92 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 88 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 95.65 % ಫಲಿತಾಂಶ ಲಭಿಸಿದರೆ, ವಿಜ್ಞಾನ ವಿಭಾಗದಲ್ಲಿ 82 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 78 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95.12 ಶೇಕಡವಾರು ಫಲಿತಾಂಶ ಲಭಿಸಿದೆ. Rakesh ದಿವ್ಯಶ್ರೀ ವಾಣಿಜ್ಯ ವಿಭಾಗದಲ್ಲಿ ದಿವ್ಯಶ್ರೀ ಹಾಗೂ ರಾಕೇಶ್ 577 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನಕ್ಕೆ ಭಾಜನರಾದರೆ, Dayana ಹಾಗೂ ವೆಂಕಟೇಶಮೂರ್ತಿ 574 ಅಂಕ ಗಳಿಸುವ ಮೂಲಕ ದ್ವಿತೀಯ ಸ್ಥಾನ ಮತ್ತು ದಿಲೀಪ್ ಹಾಗೂ ವೀಣಾ 572 ಅಂಕಗಳಿಸುವ ಮೂಲಕ ತೃತೀಯ ಸ್ಥಾನ ಪಡೆದಿದ್ದಾರೆ. ಮಹಾಲಕ್ಷ್ಮಿ ಕಲಾವಿಭಾಗದಲ್ಲಿ ವಿದ್ಯಾರ್ಥಿನಿಯರದ್ದೇ ಮೇಲುಗೈಯಾಗಿದ್ದು ಮಹಾಲಕ್ಷ್ಮಿ 575 ಅಂಕಗಳಿಸುವ ಮೂಲಕ ಪ್ರಥಮ ಸ್ಥಾನ ಪಡೆದರೆ, 570 ಅಂಕಗಳಿಸಿರುವ ಗೀತಾ ಹಾಗೂ ರೂಪ ದ್ವಿತೀಯ ಸ್ಥಾನ ಹಾಗೂ 564 ಅಂಕ ಗಳಿಸಿದ ಕಾವ್ಯ ತೃತೀಯ ಸ್

ಜೈಮಿನಿ ಭಾರತ ಕವಿ ಲಕ್ಷ್ಮೀಶನ ದೇವನೂರು

ಜೈಮಿನಿ ಭಾರತ ಕವಿ ಲಕ್ಷ್ಮಿಶನ ಜನ್ಮಸ್ಥಳ ಚಿಕ್ಕಮಗಲೂರು ಜಿಲ್ಲೆಯ ಕಡೂರು ತಾಲ್ಲೂಕಿನ ದೇವನೂರು.ಆದರೆ ಗುಲ್ಬರ್ಗ ಜಿಲ್ಲೆಯ ಸುರಪುರ? ಅನ್ನುವ ವಾದ ಕೂಡ ಇದೆ.ದೇವನೂರೆ ಜನ್ಮಸ್ಥಳ ಅನ್ನುವುದಕ್ಕೆ ಇಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತದೆ.ಕವಿ ಲಕ್ಷ್ಮಿಶನ ಕಾಲ: ಕ್ರಿ.ಶ. 1550 (ಹದಿನಾರನೆಯ ಶತಮಾನ).ದೇವನೂರಿಗೆ ಅರಸಿಕೆರೆ ಮಾರ್ಗದ ಬಾಣಾವರದಿಂದ ಹೋಗಬಹುದು.ದೂರ 16 ಕಿಮೀ ಆಗತ್ತೆ.ಇಲ್ಲದಿದ್ರೆ ಚಿಕ್ಕಮಗಳೂರುನಿಂದ ಸಖ್ರೆಪಟ್ಣ( ಸಖರಾಯಪಟ್ಟಣ)ದ ಮೂಲಕ ಬೇಕಾದರೂ ಬರಬಹುದು.ದೇವನೂರು ಗ್ರಾಮದಲ್ಲಿ ೧೭ನೇ ಶತಮಾನದ ಲಕ್ಷ್ಮಿಕಾಂತ ದೇವಸ್ಥಾನ ಹಾಗು ೧೩ ನೇ ಶತಮಾನದ ಸಿದ್ದೇಶ್ವರ ದೇವಾಲಯವಿದೆ. ಲಕ್ಷ್ಮಿಕಾಂತ ದೇವರ ಬಗ್ಗೆ ಪೌರಾಣಿಕ ಐತಿಹ್ಯವಿದ್ದು ಅದು ಹೀಗಿದೆ. ಸಹಸ್ರಾರು ವರ್ಷಗಳ ಹಿಂದೆ ಪಾಂದವರು ಅಷ್ವಮೇಧಯಾಗ ಮಾಡುವ ಸಂದರ್ಭದಲ್ಲಿ ಇಂದಿನ ಭದ್ರಾವತಿ ಅಂದಿನ ಭದ್ರನಗರಿಗೆ ಹೋಗುತ್ತಿದ್ದ ವೇಳೆಯಲ್ಲಿ ಹಸುವೋಂದು ಹುತ್ತಕ್ಕೆ ಹಾಲೆರೆಯುತ್ತಿದ್ದನ್ನು ಕಂಡು ಇದೊಂದು ಪುಣ್ಯಕ್ಷೇತ್ರವೆಂದು ಬಗೆದು ಧರ್ಮರಾಜನ ಮೂಲಕ ಶ್ರೀಕೃಷ್ಣನಿಂದ ಲಕ್ಷ್ಮಿಕಾಂತಸ್ವಾಮಿಯ ಸಾಲಿಗ್ರಾಮ ಶಿಲಾಮೂರ್ತಿಯನ್ನು ಸ್ಥಾಪಿಸಲಾಯಿತೆಂದು ಹೇಳಲಾಗುತ್ತದೆ.ಸದ್ಯ ದೇವಾಲಯ ಮುಜರಾಯಿ ಇಲಾಖೆ ಆಡಳಿತದಲ್ಲಿದೆ.ದೇವಾಲಯ ಅತ್ಯಂತ ವಿಸ್ತಾರವಾಗಿದ್ದು ಇಲ್ಲಿ ೧೨ ಜನ ಆಚಾರ್ಯರುಗಳ ಮೂರ್ತಿಗಳಿದೆ.ಗೋಡೆಯ ಮೇಲೆ ದಶಾವತಾರದ ಪೈಂಟಿಂಗ್ಸ್ ಇದೆ.ಇಲ್ಲಿನ ಅರ್ಚಕ ಜಯಸಿಂಹ ಹೇಳುವಂತೆ ಪ್ರತಿ ವರ್ಷ

ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಪಕ್ವಾಡ್ ಕಾರ್ಯಕ್ರಮ

ಚಿಕ್ಕನಾಯಕನಹಳ್ಳಿ ತಾಲೋಕ್ ಮತಿಘಟ್ಟ 01 ವೃತ್ತದ ಗೋಪಾಲಪುರ ಅಂಗನವಾಡಿ ಕೇಂದ್ರದಲ್ಲಿ  ಪೋಷಣ್ ಪಕ್ವಾಡ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಿಲ್ಲಾ ಪೋಷಣ್ ಅಧಿಕಾರಿಯಾದ ಶ್ರೀಮತಿ ರಂಜಿತಾ ಹಾಗೂ ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ವೃತ್ತದ ಮೇಲ್ವಿಚಾರಕರಾದ ಶ್ರೀ ಮತಿ ಶಾರದಮ್ಮನವರು ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀ ಮತಿ ಗೀತಾ ಮುಖ್ಯ ಶಿಕ್ಷಕರಾದ ನಾಗರತ್ನಮ್ಮ ಹಾಗೂ ಅರೋಗ್ಯಧಿಕಾರಿ ದಿಲೀಪ್ ರವರು  ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಸ್ವಾಗತ ಕೋರಿದರು. ಶ್ರೀಮತಿ ರಂಜಿತಾರವರು ಪೋಷಣ್ ಪಾಕ್ವಾಡ್ ದ ಮಹತ್ವವನ್ನು ತಿಳಿಸಿ ಸ್ಥಳೀಯವಾಗಿ ಸಿಗುವ ಆಹಾರಗಳಾದ ಸೊಪ್ಪು ತರಕಾರಿ ಸಿರಿಧಾನ್ಯಗಳ ಬಳಕೆ ಮಾಡುವುದರಿಂದ ಅಪೌಷ್ಠಿಕತೆ ಹೋಗಲಾಡಿಸಲು ಮಾರ್ಗಸೂಚಿ ನೀಡಿದರು. ತಾಲೋಕ್ ಪೋಷಣ್ ಸಂಯೋಜಕರಾದ ಸಂತೋಷರವರು ಮಕ್ಕಳ ತೂಕ- ಎತ್ತರ ಹಾಗೂ ಸಮುದಾಯದ ಫಲಾನುಭವಿಗಳಿಗೆ ಪೋಷಣ್ ಪಕ್ವಾಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಕಾರ್ಯಕರ್ತೆಯಾದ ಸುಮಲತಾ ವಂದಸಿದರು. ಕಾರ್ಯಕ್ರಮದಲ್ಲಿ ಮತಿಘಟ್ಟ ವೃತ್ತದ ಎಲ್ಲಾ ಕಾರ್ಯಕರ್ತೆಯರು ಭಾಗವಹಿಸಿದ್ದರು.