ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ ಹೊರತು, ಶಿಕ್ಷಣ ಮುಗಿದ ನಂತರ ಜೀವನದಲ್ಲಿ ಯಾವರೀತಿ ನಡೆದುಕೊಳ್ಳಬೇಕು, ಸಮಾಜದಲ್ಲಿ ಯಾವರೀತಿ ಒಡನಾಟದಿಂದಿರಬೇಕೆಂಬ ಮೌಲ್ಯಗಳನ್ನು ತಿಳಿಯದೆ ಹೋಗುತ್ತಿದ್ದಾರೆ ಎಂದು ತುಮಕೂರಿನ ಎಂಪ್ರೆಸ್ ಶಾಲೆಯ ಶಿಕ್ಷಕ ಹೊಸಕೆರೆ ರಿಜ್ವಾನ್ ಪಾಷ ತಿಳಿಸಿದರು.
ಹುಳಿಯಾರಿನ ಟಿ.ಆರ್.ಎಸ್.ಆರ್.ಶಾಲೆಯ ೨೦೧೫-೧೬ ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಇಕೋ ಕ್ಲಬ್ ನ ಉದ್ಘಾಟನೆಯನ್ನು ಎಂಪ್ರೆಸ್ ಶಾಲೆಯ ಶಿಕ್ಷಕ ಹೊಸಕೆರೆ ರಿಜ್ವಾನ್ ಪಾಷ ನೆರವೇರಿಸಿದರು. |
ಪಟ್ಟಣದ ವಾಸವಿ ವಿದ್ಯಾಸಂಸ್ಥೆಯ ಟಿ.ಆರ್.ಎಸ್.ಆರ್ ಶಾಲೆಯಲ್ಲಿ ಸೋಮವಾರ ನಡೆದ ೨೦೧೫-೧೬ನೇ ಸಾಲಿನ ವಿದ್ಯಾರ್ಥಿ ಸಂಘ ಹಾಗೂ ಇಕೋ ಕ್ಲಬ್ ನ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣ ಪಡೆದ ಹಲವರು ತಮ್ಮ ಹೆತ್ತವರನ್ನು ದೂರಮಾಡುತ್ತಿರುವುದಲ್ಲದೆ ಮಾನವ ಸಂಬಂಧಗಳನ್ನು ಪರಿಗಣಿಸದೆ ತಾನು, ತನ್ನ ಜೀವನ ಎಂದು ಸಾಗುತ್ತಿದ್ದು, ಕೂಲಿನಾಲಿ ಮಾಡಿ ಬೆಳೆಸಿದ ಪೋಷಕರನ್ನೇ ಮರೆಯುತ್ತಿದ್ದಾರೆ ಎಂದು ವಿಷಾದಿಸಿದರು. ಓದು,ಬರಹ ತಿಳಿಯದ ನಮ್ಮ ಜಾನಪದರು ತಮ್ಮ ಹಾಡುಗಳಲ್ಲಿ ಮಾನವರ ನಡುವಿನ ಸಂಬಂಧ ಎಂತಹದು ಎಂಬುದರ ಬಗ್ಗೆ ತಿಳಿಸಿದ್ದರೂ ಸಹ ನಾವು ಶಿಕ್ಷಿತರಾಗಿದ್ದರೂ ಅದನ್ನು ತಿಳಿಯದೆ ಜೀವನ ನಡೆಸುತ್ತಿದ್ದೇವೆ ಎಂದರು.
ವಿದ್ಯಾರ್ಥಿಗಳ ಪಾಲಿಗೆ ಮೊಬೈಲ್ ಹಾಗೂ ಟಿ.ವಿ ಮಾಧ್ಯಮ ಮಾರಕವಾಗಿದ್ದು ಶೈಕ್ಷಣಿಕ ಹಂತದಲ್ಲಿ ವಿದ್ಯಾರ್ಥಿಗಳನ್ನು ದಿಕ್ಕುತಪ್ಪುವಂತೆ ಮಾಡುತ್ತಿದ್ದು, ವಿದ್ಯಾರ್ಥಿಗಳು ತಮ್ಮ ಓದು ಮುಗಿಯುವ ತನಕ ಇವುಗಳ ಬಗ್ಗೆ ಹೆಚ್ಚುಗಮನ ಕೊಡಬೇಡಿ ಎಂದು ಕಿವಿಮಾತು ಹೇಳಿದರು. ಶಿಸ್ತು, ಸಂಯಮ, ವಿವೇಕ,ವಿವೇಚನೆ, ಧೈರ್ಯವನ್ನೊಳಗೊಂಡಾಗ ಮಾತ್ರ ವಿದ್ಯಾರ್ಥಿ ಯಶಸ್ಸು ಸಾಧಿಸುತ್ತಾನೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ರಾಮನಾಥ್ ಅಧ್ಯಕ್ಷತೆವಹಿಸಿದ್ದು, ಸಹಕಾರ್ಯದರ್ಶಿ ಎಲ್.ಆರ್.ಚಂದ್ರಶೇಖರ್, ನಿರ್ದೇಶಕರಾದ ಲಕ್ಷ್ಮಿರಾಜು, ಟಿ.ಆರ್,ಎಸ್.ಆರ್,ಶಾಲೆಯ ಮುಖ್ಯ ಶಿಕ್ಷಕ ಹೆಚ್.ವಿ.ರಮೇಶ್, ವಾಸವಿ ಆಂಗ್ಲಮಾಧ್ಯಮ ಶಾಲೆಯ ಮುಖ್ಯಶಿಕ್ಷಕ ಮಹೇಶ್, ಸ್ಕೌಟ್ ಗೈಡ್ ಶಿಕ್ಷಕ ಕೆ.ಎಂ.ಗಂಗಾಧರಯ್ಯ, ಮಂಜುನಾಥ್, ರೇಣುಕಪ್ರಸಾದ್ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದ ಸಮಾರಂಭದಲ್ಲಿ ವಿದ್ಯಾರ್ಥಿನಿ ಶಿಲ್ಪಾ ಪ್ರಾರ್ಥಿಸಿ, ಸಾಧಿಕ್ ಸ್ವಾಗತಿಸಿ, ಭಾವನ ನಿರೂಪಿಸಿ, ವಂದಿಸಿದರು. ಮಕ್ಕಳು ವಿವಿಧ ಸಾಂಸ್ಕೃತಿಕಕಾರ್ಯಕ್ರಮಗಳನ್ನು ಅಭಿನಯಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ