ಹುಳಿಯಾರು ಹೋಬಳಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಘಟಕದ ವತಿಯಿಂದ ಹೋಬಳಿಯ ವ್ಯಾಪ್ತಿಯಲ್ಲಿ ೧೦ ನೇತರಗತಿ ಹಾಗೂ ಪಿಯುಸಿಯಲ್ಲಿ ಅಧಿಕ ಅಂಗಳಿಸಿದ ವಿದ್ಯಾರ್ಥಿಗಳಿಗೆ ಬೋರನಕಣಿವೆ ಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ನೆರವೇರಿತು.
ಹುಳಿಯಾರು ಹೋಬಳಿ ಎಬಿವಿಪಿವತಿಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೋರನಕಣಿವೆ ಶಾಲೆಯಲ್ಲಿ ಪ್ರತಿಭಾಪುರಸ್ಕಾರ ವಿತರಿಸಲಾಯಿತು. |
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಉಪನ್ಯಾಸಕ ಕೆ.ಎನ್.ಶಿವಣ್ಣ ಮಾತನಾಡಿ, ವಿದ್ಯಾರ್ಥಿಗಳಿಗೆ ಪುರಸ್ಕರಿಸಿ ಬಹುಮಾನ ವಿತರಿಸುವುದರಿಂದ ಅವರನ್ನು ಶೈಕ್ಷಣಿಕವಾಗಿ ಉತ್ತೇಜಿಸಿದಂತಾಗುತ್ತದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಯೂ ನಾನು ಸಹ ಪ್ರತಿಭಾಪುರಸ್ಕಾರ ಪಡೆಯಬೇಕು ಎಂಬ ಛಲ ಹೊಂದಿದಾಗ ಮಾತ್ರ ಯಶಸ್ಸು ಸಿಗುತ್ತದೆ ಎಂದರು. ಎಬಿವಿಪಿವತಿಯಿಂದ ಈ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿರುವುದರ ಜೊತೆಗೆ ವಿದ್ಯಾರ್ಥಿಗಳಿಗಾಗುವ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಮುನ್ನೆಡೆಯಲಿ ಎಂದರು.
ಮುಖ್ಯಶಿಕ್ಷಕ ಮೈಲಾರಪ್ಪ, ಎಬಿವಿಪಿಯ ಹೊನ್ನಪ್ಪ ಮಾತನಾಡಿದರು. ಉಪನ್ಯಾಸಕಿ ವರಮಹಾಲಕ್ಷ್ಮಿ, ಪದಾಧಿಕಾರಿಗಳಾದ ರಾಕೇಶ್, ರಂಗನಾಥ್, ಗಿರೀಶ್ ಸೇರಿದಂತೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ