ಹುಳಿಯಾರು ಹೋಬಳಿಯ ಗೋಪಾಲಪುರದ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಅನ್ನಪೂರ್ಣಮ್ಮ(೫೩) ಗುರುವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.ಕಳೆದ ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ
ಇವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಶೆಟ್ಟಿಕೆರೆ ಹೋಬಳಿಯ ಸೋಮಲಾಪುರದವರಾಗಿದ್ದು ಹುಳಿಯಾರಿನ ವಸಂತನಗರ ಬಡಾವಣೆಯಲ್ಲಿ ನೆಲೆಸಿದ್ದವ ಇವರು ಈ ಮುಂಚೆ ಗಾಣಧಾಳು, ಕಂಪನಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿ ಕಾರ್ಯನಿರ್ವಹಿಸಿದ್ದರು.
ತಾಲ್ಲೂಕು ಪ್ರಾಥಮಿಕಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್, ಬಿಇಓ ಕೃಷ್ಣಮೂರ್ತಿ, ದೇವಾಂಗ ಸಂಘದ ಅಧ್ಯಕ್ಷ ಅನಂತ್ ಕುಮಾರ್, ದಾಸಪ್ಪ ,ವಿವಿಧ ಶಾಲೆಯ ಶಿಕ್ಷಕರು,ಎಸ್ಡಿಎಂಸಿಯವರು ಮೃತರ ಅಂತಿಮ ದರ್ಶನ ಪಡೆದರು. ಮೃತರ ಅಂತ್ಯ ಸಂಸ್ಕಾರಕ್ಕಾಗಿ ಶಿಕ್ಷಕರ ಸಂಘದಿಂದ ೫ಸಾವಿರ ಹಾಗೂ ಬಿಇಓ ಅವರು ೫ ಸಾವಿರ ರೂಗಳನ್ನು ನೀಡಿದರು. ಶುಕ್ರವಾರ ಪಟ್ಟಣದಲ್ಲಿ ಅಂತ್ಯಕ್ರಿಯೆ ನಡೆಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ