ಪೋಲಿಸ್ ಸಿಬ್ಬಂದಿಗಳು ಸಾರ್ವಜನಿಕ ರಕ್ಷಣೆಯ ಜೊತೆಜೊತೆಗೆ ನಮ್ಮ ಸುತ್ತಮುತ್ತಲಿನ ಪರಿಸರ ಸಂರಕ್ಷಣೆ ಮಾಡುವುದನ್ನು ರೂಢಿಸಿಕೊಂಡು ಪರಿಸರ ರಕ್ಷಣೆಗೆ ಮುಂದಾಗಿ ಎಂದು ತುಮಕೂರು ಜಿಲ್ಲಾ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್ ತಿಳಿಸಿದರು.
ಹುಳಿಯಾರು ಪೋಲಿಸ್ ಠಾಣೆಗೆ ಆಗಮಿಸಿದ್ದ ಹೆಚ್ಚುವರಿ ಪೋಲಿಸ್ ವರಿಷ್ಠಾಧಿಕಾರಿ ಆರ್.ಲಕ್ಷ್ಮಣ್ ಸಸಿ ನೆಡುವ ಮೂಲಕ ಪರಿಸರ ರಕ್ಷಣೆ ಬಗ್ಗೆ ತಿಳಿಸಿದರು. |
ಹುಳಿಯಾರು ಫೋಲಿಸ್ ಠಾಣೆಗೆ ಭಾನುವಾರ ಆಗಮಿಸಿದ್ದ ಅವರು ಠಾಣೆ ಅವರಣದಲ್ಲಿ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆ ಕುರಿತು ಮಾತನಾಡಿದರು. ಪ್ರಸ್ತುತದಲ್ಲಿ ಪರಿಸರನಾಶದಿಂದ ಹೆಚ್ಚಿನ ದುಷ್ಪರಿಣಾಮ ಉಂಟಾಗುತ್ತಿದ್ದು, ಪ್ರಕೃತಿಯಲ್ಲಿ ಏರಿಳಿತ ಉಂಟಾಗುತ್ತಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದೆ ಎಂದರು. ಈ ತಿಂಗಳ ಅಂತ್ಯಕ್ಕೆ ತಾವು ನಿವೃತ್ತಿಯಾಗಲಿದ್ದು ಜಿಲ್ಲೆಯ ಪೋಲಿಸ್ ಠಾಣೆಗಳಿಗೆ ಭೇಟಿ ನೀಡುತ್ತಾ ಪ್ರತಿ ಠಾಣೆಯಲ್ಲಿ ಸಸಿ ನೆಡುತ್ತಿರುವುದಾಗಿ ತಿಳಿಸಿದರು. ಪರಿಸರ ಸಂರಕ್ಷಣೆಯ ನಿಟ್ಟಿನಲ್ಲಿ ತಾವು ಸಾಂಕೇತಿಕವಾಗಿ ಪ್ರತಿ ಠಾಣೆಯಲ್ಲಿ ಸಸಿ ನೆಡುತ್ತಿದ್ದು ಮುಂದಿನ ದಿನಗಳಲ್ಲಿ ಠಾಣೆಯ ಸಿಬ್ಬಂದಿಯವರು ಇದನ್ನು ಮುಂದುವರಿಸಿಕೊಂಡು ಹೋಗುವಂತೆ ತಿಳಿಸಿದರು. ಈ ವೇಳೆ ಡಿವೈಎಸ್ ಪಿ ಕೆ.ಆರ್.ರವಿಕುಮಾರ್, ಚಿ.ನಾ.ಹಳ್ಳಿ ವೃತ್ತನಿರೀಕ್ಷಕ ಮಾರಪ್ಪ, ಪಿಎಸೈ ಬಿ.ಪ್ರವೀಣ್ ಕುಮಾರ್, ಪೋಲಿಸ್ ಕಾನಸ್ಟೇಬಲ್ ಪುಟ್ಟೇಗೌಡ, ಅನಿಲ್,ಮಂಜಪ್ಪ,ಸ್ವಾಮಿ,ಮಲ್ಲಿಕಾರ್ಜುನ್,ರಂಗಸ್ವಾಮಿ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ