ಹುಳಿಯಾರು ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಕಸಕಡ್ಡಿ ಬಿದ್ದು ಅನೈರ್ಮಲ್ಯತೆಯಿಂದ ಕೂಡಿತ್ತಲ್ಲದೆ ಆಸ್ಪತ್ರೆಯ ಮುಖ್ಯದ್ವಾರದಲ್ಲೇ ಕಸದ ರಾಶಿ ಬಿದ್ದು ತಿಪ್ಪೆಯಾಗಿದ್ದನ್ನು ಗಮನಿಸಿದ ಗ್ರಾ.ಪಂ.ಸದಸ್ಯ ಶಂಕರ್ ಹಾಗೂ ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಗವಿರಂಗನಾಥ್ (ಗೌಡಿ) , ಇತರ ಸದಸ್ಯರು ಸೇರಿ ಆಸ್ಪತ್ರೆ ಆವರಣದ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಹುಳಿಯಾರು ಸರ್ಕಾರಿ ಆಸ್ವತ್ರೆಯ ಮುಖ್ಯದ್ವಾರದಲ್ಲಿ ಸಸಿ ಹಾಕುವ ಮೂಲಕ ಗ್ರಾ.ಪಂ.ಸದಸ್ಯ ಶಂಕರ್ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದ್ದಾರೆ. |
ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ನೂರಾರು ರೋಗಿಗಳು ಬರುತ್ತಾರೆ. ಆದರೆ ಆಸ್ಪತ್ರೆಯ ಆವರಣದಲ್ಲಿ ಎಲ್ಲಿನೋಡಿದರು ಪ್ಲಾಸ್ಟಿಕ್ ಕಾಗದ, ಕಸಕಡ್ಡಿ ಸೇರಿದಂತೆ ತ್ಯಾಜ್ಯವಸ್ತುಗಳೇ ಬಿದ್ದು ಅನೈರ್ಮಲ್ಯದ ತಾಣವಾಗಿದ್ದರೂ ಸಹ ವೈದ್ಯರು ಯಾವುದೇ ಕ್ರಮ ಕೈಗೊಳ್ಳದ ಹಿನ್ನಲೆಯಲ್ಲಿ ಗ್ರಾ.ಪಂ.ಸದಸ್ಯ ಶಂಕರ್ ಇನ್ನಿತರ ಸದಸ್ಯರ ಸಹಕಾರದಲ್ಲಿ ತಾವೇ ಸ್ವಚ್ಚತಾ ಕಾರ್ಯಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲೂ ಸಹ ಆಸ್ಪತ್ರೆಯ ಸ್ವಚ್ಚತೆ ಬಗ್ಗೆ ಇದೇ ರೀತಿ ಗಮನಹರಿಸುವುದಾಗಿ ತಿಳಿಸಿದ್ದಾರೆ. ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಆಸ್ಪತೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಆಸ್ಪತ್ರೆ ಪ್ರವೇಶದ ಮುಖ್ಯದ್ವಾರದಲ್ಲಿ ಬಿದ್ದಿದ್ದ ಕಸದರಾಶಿಯಿಂದ ದುರ್ವಾಸನೆ ಬರುತ್ತಿದ್ದನ್ನು ಕಂಡ ಅವರು ಅದನ್ನು ತೆರವುಗೊಳಿಸಿದರಲ್ಲದೆ ಆ ಜಾಗದಲ್ಲಿ ಮತ್ತೆ ಯಾರು ಕಸ ಹಾಕದಂತೆ ಗಿಡಗಳನ್ನು ಹಾಕಿ ಆರೋಗ್ಯವೇ ಭಾಗ್ಯ ಸ್ವಚ್ಚತೆ ಕಾಪಾಡಿ ಎಂಬ ನಾಮಫಲಕವನ್ನು ಬರೆಸುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದ್ದಾರೆ. ವೈದ್ಯ ಶಿವಾನಂದ್, ಗ್ರಾ.ಪಂ.ಸದಸ್ಯ ಡಾಬಸೂರಪ್ಪ, ನಾಗಣ್ಣ, ರೈತಸಂಘದ ಹೊಸಳ್ಳಿ ಚಂದ್ರಪ್ಪ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ