ಬೆಂಗಳೂರಿನ ಫ್ರೋಟಿಸ್ ಸಂಸ್ಥೆವತಿಯಿಂದ " ಹೃದಯಾಘಾತ , ಆಧುನಿಕಯುಗದ ಮಾರಕ ರೋಗ " ಕುರಿತಂತೆ ಹುಳಿಯಾರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಇಂದು(ತಾ.೧೨) ಭಾನುವಾರ ಸಂಜೆ ೫ಕ್ಕೆ ಸಂವಾದ ಕಾರ್ಯಕ್ರಮ ನಡೆಯಲಿದೆ.
ಸಂವಾದದಲ್ಲಿ ಕೀಲು ಮತ್ತು ಮೂಳೆ ತಜ್ಞರಾದ ಡಾ.ಜಯಾತೀರ್ಥ್ ಕುಲಕರ್ಣಿ ಹಾಗೂ ಹೃದ್ರೋಗ ತಜ್ಞ ಡಾ. ಭಾನುಪ್ರಕಾಶ್ ಆಗಮಿಸಲಿದ್ದು ಹೃದಯ ಸಂಬಂಧಿ ಹಾಗೂ ಕೀಲು ಮೂಳೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ವಿಷಯಗಳನ್ನು ತಿಳಿಸಲಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ತಮ್ಮ ಹೆಸರು ನೋಂದಾಯಿಸಲು ೯೯೦೦೯೬೬೬೪೭ ಹಾಗೂ ೯೬೮೬೮೮೮೮೧೦ ಸಂಖ್ಯೆಯನ್ನು ಸಂಪರ್ಕಿಸ ಬಹುದಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ