

ಭಕ್ತಾಧಿಗಳಲ್ಲಿ ಧಾರ್ಮಿಕ ಜಾಗೃತಗೊಳಿಸಲು ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಧಾರ್ಮಿಕತೆ ಮೂಲಕ ಮನುಷ್ಯನಲ್ಲಿ ಸದ್ಗುಣಗಳು ಬೆಳೆದು ಸ್ನೇಹ,ಸಹಕಾರ ಆತ್ಮೀಯತೆ ಮೂಡುತ್ತದೆ ಎಂದು ಶ್ರೀಗಳು ನುಡಿದರು

ಸ್ವಾಮಿಯವರ ಜೊತೆ ಪುರೋಹಿತರಾದ ಮಲ್ಲಿಕಾರ್ಜುನಯ್ಯ, ವೀರೇಶ್ ಮಠ್, ನಟರಾಜ್, ಶರಣ ಕೆ.ಎಂ.ಗಂಗಾಧರಯ್ಯ, ಗ್ರಾಮಸ್ಥರಾದ ಕೆ.ಆರ್.ಎಸ್.ಸ್ವಾಮಿ, ಮೆಡಿಕಲ್ ಚಂಬಣ್ಣ, ಲೋಕೇಶ್, ವಿಶ್ವನಾಥ್, ದೊಡ್ಡಬಿದರೆ ಡಿ.ಜಿ.ಕುಮಾರ್, ದಿಲೀಪ್ ಸೇರಿದಂತೆ ಇತರರಿದ್ದಾರೆ.
![]() |
ಹುಳಿಯಾರು ಹೋಬಳಿ ಕೆಂಕೆರೆ ಸಮೀಪದ ಪುರದಮಠದ ಪುರಾತನ ಗವಿಯಲ್ಲಿ ಪ್ರಾರಂಭವಾಗಿರುವ ಶಿವಪೂಜಾನುಷ್ಠಾನ ಕಾರ್ಯದಲ್ಲಿ ಲಿಂಗಪೂಜೆಯಲ್ಲಿ ತೊಡಗಿಕೊಂಡಿರುವ ಶ್ರೀಗಳು. |
ಪ್ರತಿದಿನ ಮುಂಜಾನೆ ೪.೩೦ರಿಂದ ಜಪ,ಧ್ಯಾನ, ೭.೩೦ ಕ್ಕೆ ರುದ್ರಾಭಿಷೇಕ, ಅಷ್ಟೋತ್ತರ, ಸಂಜೆ ಭಕ್ತಾಧಿಗಳಿಂದ ಭಜನೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿದೆ. ಪೂಜಾಕಾರ್ಯಕ್ಕೆ ಆಗಮಿಸುವ ಭಕ್ತಾಧಿಗಳಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ