ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಶ್ರೀಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ಗಣಪತಿಹೋಮ ಚಂದ್ರಮೌಳೇಶ್ವರನಿಗೆ ಏಕದಶವಾರು ರುದ್ರಾಭಿಷೇಕ , ರುದ್ರಹೋಮ ಹಾಗೂ ಲಕ್ಷ್ಮಿನಾರಾಯಣ ಕಲ್ಯಾಣೋತ್ಸವ ಎರಡು ದಿನಗಳ ಕಾಲ ಶಾಸ್ತ್ರೋಕ್ತವಾಗಿ ನೆರವೇರಿತು.
ಹುಳಿಯಾರು ಹೋಬಳಿ ಜೋಡಿತಿರುಮಲಾಪುರದ ಶ್ರೀಚಂದ್ರಮೌಳೇಶ್ವರಸ್ವಾಮಿ ದೇವಾಲಯದಲ್ಲಿ ರುದ್ರಹೋಮಕಾರ್ಯ ಶಾಸ್ತ್ರೋಕ್ತವಾಗಿ ನೆರವೇರಿತು. |
ಶ್ರೀ ಜಗದ್ಗುರು ಶಂಕರಾನಂದ ಸರಸ್ವತಿ ಮಹಾಸಂಸ್ಥಾನಂ ಯಾದವಗಿರಿಯ ಶ್ರೀ ಸುಬ್ರಹ್ಮಣ್ಯಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಶ್ರದ್ದಾಭಕ್ತಿಯಿಂದ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಇದರ ಅಂಗವಾಗಿ ಶನಿವಾರ ಸಂಜೆ ಹುಳಿಯಾರು ಗ್ರಾಮದೇವತೆ ದುರ್ಗಮ್ಮ, ಹೊಸಳ್ಳಿಪಾಳ್ಯದ ಕೊಲ್ಲಾಪುರದಮ್ಮ,ಹೊಸಳ್ಳಿ ಅಂತರಘಟ್ಟೆಅಮ್ಮ, ತಿರುಮಲಾಪುರದ ಕೊಲ್ಲಾಪುರದಮ್ಮನವರನ್ನು ಕರೆದುಕೊಂಡು ಬಂದು ಭೇಟಿಕಾರ್ಯ ನಡೆಸಲಾಯಿತು. ಋತ್ವಿಕರಾದ ಮಂಜುನಾಥ ಶರ್ಮ ನೇತೃತ್ವದಲ್ಲಿ ಅವರ ಸಂಗಡಿಗರೊಂದಿಗೆ ವಿವಿಧ ಹೋಮ ಹವನಾದಿಗಳು ನಡೆದು ನಂತರ ಪೂರ್ಣಾಹುತಿ ಅರ್ಪಿಸಲಾಯಿತು. ಸ್ವಾಮಿಗೆ ಅಭಿಷೇಕ, ಅರ್ಚನೆ, ಗೋದಾನ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ಸಹ ನಡೆದವು. ಹೋಮಕ್ಕೆ ಆಗಮಿಸಿದ ಭಕ್ತಾಧಿಗಳಿಗಾಗಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.
ಈ ವೇಳೆ ಟಿ.ಕೆ.ಮಂಜುನಾಥ್, ನಾಗರಾಜು, ನಂಜುಂಡರಾವ್, ಲಕ್ಷ್ಮಿನರಸಿಂಹಯ್ಯ, ಹು.ಲ.ವೆಂಕಟೇಶ್ ತಾಲ್ಲೂಕ್ ವಿಪ್ರಸಂಘದ ಹು.ಕೃ.ವಿಶ್ವನಾಥ್, ಲೋಕೇಶಣ್ಣ, ರಂಗನಾಥಪ್ರಸಾದ್, ಸುಭ್ರಮಣ್ಯ, ಮಂಜುನಾಥ್, ಸ್ವಾಮಿ, ಸತ್ಯ, ಚಿ.ನಾ.ಹಳ್ಳಿಯ ಸಿ.ಡಿ.ರವಿ,ಗಣೇಶ್ ಇನ್ನಿತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ