ಹಬ್ಬದ ಆಚರಣೆಯ ಹಿನ್ನಲೆಯಲ್ಲಿ ಶಾಂತಿಗೆ ಧಕ್ಕೆಯುಂಟಾಗದಂತೆ ಅಥವಾ ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಸಮುದಾಯದ ಮುಖಂಡರು ಗಮನಹರಿಸಿ ಹಬ್ಬದ ಆಚರಣೆಯನ್ನು ಶಾಂತಿಯುವಾಗಿ ಆಚರಿಸುವಂತೆ ಚಿ.ನಾ.ಹಳ್ಳಿ ವೃತ್ತನಿರೀಕ್ಷಕ ಮಾರಪ್ಪ ತಿಳಿಸಿದರು.
ರಂಜಾನ್ ಹಬ್ಬದ ಅಂಗವಾಗಿ ಹುಳಿಯಾರು ಪೋಲಿಸ್ ಠಾಣೆಯಲ್ಲಿ ಶುಕ್ರವಾರ ಅಯೋಜಿಸಿದ್ದ ಶಾಂತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹುಳಿಯಾರು ಪೋಲಿಸ್ ಠಾಣೆಯಲ್ಲಿ ರಂಜಾನ್ ಹಬ್ಬದ ಅಂಗವಾಗಿ ನಡೆದ ಶಾಂತಿಸಭೆಯಲ್ಲಿ ಸರ್ಕಲ್ ಇಸ್ಪೆಕ್ಟರ್ ಮಾರಪ್ಪ ಮಾತನಾಡಿದರು.
|
ಹುಳಿಯಾರು ಪಟ್ಟಣದಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರು ಒಬ್ಬರಿಗೊಬ್ಬರು ಅನ್ಯೂನತೆಯಿಂದ ಇದ್ದಾರೆ. ದುರಾದೃಷ್ಠವಶಾತ್ ಈ ಹಿಂದೆ ಇದೇ ಹಬ್ಬದ ಸಮಯದಲ್ಲಿ ಯಾವುದೋ ಒಂದು ಘಟನೆ ನಡೆದಿದ್ದು ಆ ಬಗ್ಗೆ ಯಾವುದೇ ಜಿದ್ದನ್ನು ಇಟ್ಟುಕೊಳ್ಳದೆ ಹಬ್ಬದ ಆಚರಣೆ ನಡೆಯಲಿ ಎಂದರು. ಹಬ್ಬದ ಮೆರವಣಿಗೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಬಗ್ಗೆ ಠಾಣೆಗೆ ಮಾಹಿತಿ ನೀಡಿ ಎಂದರು. ಪಟ್ಟಣದಲ್ಲಿ ಯಾರಾದರೂ ಅಪರಿಚಿತ ವ್ಯಕ್ತಿಗಳು ಕಂಡುಬಂದಲ್ಲಿ ತಕ್ಷಣ ಠಾಣೆಗೆ ತಿಳಿಸುವುದು ಹಾಗೂ ಯಾವುದೇ ಸಮಸ್ಯೆಗಳಿದ್ದರೂ ತಮ್ಮತಮ್ಮಲ್ಲೇ ಬಗೆ ಹರಿಸಿಕೊಳ್ಳಲು ಮುಂದಾಗಿ ವಿಕೋಪಕ್ಕೆ ತಿರುಗುವ ಬದಲು ಠಾಣೆಯಲ್ಲಿಗೆ ಬಂದು ತಮ್ಮ ಸಮಸ್ಯೆಯನ್ನು ತಿಳಿಸಿ ಪರಿಹರಿಸಿಕೊಳ್ಳಿ ಎಂದರು.
ಗ್ರಾ.ಪಂ.ಸದಸ್ಯ ಎಲ್.ಆರ್.ಚಂದ್ರಶೇಖರ್ ಮಾತನಾಡಿ ಪಟ್ಟಣದಲ್ಲಿ ಕೆಲ ಕುಡುಕರು ರಸ್ತೆಯಲ್ಲಿಯೇ ನಿಂತು ಅವಾಚ್ಯ ಮಾತುಗಳಾನುಡಿತ್ತಿದ್ದಾರೆ ಹಾಗೂ ಪಟ್ಟಣದ ರಾಜ್ ಕುಮಾರ್ ರಸ್ತೆ, ಬಸ್ ಸ್ಟಾಂಡ್ ನಲ್ಲಿ ಎಲ್ಲೆಂಡರಲ್ಲಿ ಬೈಕ್. ವಾಹನಗಳನ್ನು ನಿಲ್ಲಿಸುತ್ತಿದ್ದು ಸಂಚಾರಕ್ಕೆ ತೊಡಕಾಗಿದೆ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.
ಈ ವೇಳೆ ಪಿಎಸೈ ಬಿ.ಪ್ರವೀಣ್ ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಗಣೇಶ್, ಎ.ಎಸ್.ಈ ಶಿವಪ್ಪ, ಸದಸ್ಯರಾದ ಜಬೀಉಲ್ಲಾ, ರಾಘವೇಂದ್ರ,ಡಾಬಾಸೂರಪ್ಪ,ಡಿಶ್ ಬಾಬು, ಶಂಕರ್, ತಿರುಮಲಾಪುರ ಗ್ರಾ.ಪಂ. ಅಧ್ಯಕ್ಷ ದೇವರಾಜು, ಉಪಾಧ್ಯಕ್ಷ ಮೋಹನ್, ಮುಖಂಡರಾದ ಜಲಾಲ್ ಸಾಬ್, ಬಡಗಿರಾಮಣ್ಣ,,ಅಮಾನ್ ಇಸ್ಮಾಯಿಲ್, ಪೋಲಿಸ್ ಪೇದೆ ಪುಟ್ಟೇಗೌಡ, ಅನಿಲ್, ಮಂಜುನಾಥ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ