ಹುಳಿಯಾರಿನ ಆಂಜನೇಯಸ್ವಾಮಿ ದೇವಾಲಯದಲ್ಲಿ ಗುರುವಾರ ರಾತ್ರಿ ನಡೆದ ಹುಣ್ಣಿಮೆ ಪೂಜೆಯಲ್ಲಿ ಅಪಾರ ಸಂಖ್ಯೆಯ ಭಕ್ತಾಧಿಗಳು ಪಾಲ್ಗೊಂಡು ಶ್ರೀ ಸ್ವಾಮಿಯ ದರ್ಶನ ಪಡೆದರು.ಹತ್ತಿಯಲಂಕಾರದಿಂದ ಕಂಗೊಳಿಸುತ್ತಿದ್ದ ಸ್ವಾಮಿಗೆ ಮುಖ್ಯಪ್ರಾಣ ಭಜನಾಮಂಡಳಿ ಸದಸ್ಯರಿಂದ ಭಜನೆ ನಡೆದು ಮಹಾಮಂಗಳಾರತಿ ನಂತರ ಪ್ರಸಾದ ವಿನಿಯೋಗ ಮಾಡಲಾಯಿತು.ಇವತ್ತಿನ ಸೇವಾಕರ್ತರಾದ ವಕೀಲ ರಮೇಶ್ ಬಾಬು,ಹೆಚ್.ವಿ.ಧನಂಜಯ,ಮೆಡಿಕಲ್ ಚಂಬಣ್ಣ ಸಂಗಡಿಗರಿಂದ ಭಕ್ತಾಧಿಗಳಿಗೆ ಬಿಸಿಬಿಸಿ ಮುದ್ದೆ,ಹುಳ್ಸೊಪ್ಪಿನ ಸಾಂಬರ್ ಊಟದ ಸೇವೆ ನಡೆಯಿತು.ಕರೆಂಟ್ ಆಗಾಗ್ಗೆ ಕೈ ಕೊಡ್ತಿದ್ರು ಕೂಡ ಸ್ವಾಮಿಯ ಕೃಪೆಯಿಂದ ಎಲ್ಲಾ ಸುಗಮವಾಗಿ ನೆರೆವೇರಿತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ