ಹುಳಿಯಾರು ಹೋಬಳಿ ಮರಾಠಿಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ೨೦೧೫-೧೬ ನೇ ಸಾಲಿನ ಶಾಲಾಭಿವೃದ್ದಿ ಸಮಿತಿಯ ನೂತನ ಅಧ್ಯಕ್ಷರಾಗಿ ಎಂ.ಕೆ.ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಿದ್ದರಾಮಯ್ಯ ಮಾತನಾಡಿ, ಗ್ರಾಮೀಣ ಭಾಗದ ಶಾಲೆಗಳಿಗೆ ಸರ್ಕಾರದಿಂದ ಹೆಚ್ಚು ಸವಲತ್ತುಗಳು ದೊರೆಯಬೇಕಿದೆ ಎಂದರು. ವಿದ್ಯಾರ್ಥಿಗಳನ್ನು ಶಾಲೆಯತ್ತ ಆಕರ್ಷಿಸಲು ಬಿಸಿಊಟ,ಪುಸ್ತಕ, ಬಟ್ಟೆ ನೀಡುತ್ತಿದ್ದು ವಿದ್ಯಾರ್ಥಿಗಳು ಪ್ರತಿ ನಿತ್ಯ ತಪ್ಪದೆ ಶಾಲೆ ಬರಬೇಕು ಹಾಗೂ ಪೋಷಕರು ಹೊಲ,ತೋಟದ ಕಾರ್ಯಕ್ಕೆ ಮಕ್ಕಳನ್ನು ಬಳಸಿಕೊಳ್ಳಬೇಡಿ, ಅವರನ್ನು ಓದಲು ಬಿಡಿ ಎಂದರು.
ಉಪಾಧ್ಯಕ್ಷರಾಗಿ ರೇಣುಕಾದೇವಿ,ಸದಸ್ಯರಾಗಿ ಸಿದ್ದರಾಮಯ್ಯ,ರಾಮಯ್ಯ,ವಿಜಯಕುಮಾರ್,ವಿಜಯಣ್ಣ,ಜಯಣ್ಣ, ಜ್ಯೋತಿ,ಲಕ್ಷ್ಮಿದೇವಿ,ಮಲ್ಲಮ್ಮ,ಲಕ್ಷ್ಮಮ್ಮ,ಪುಷ್ಪಾವತಿ,ಅನುಸೂಯಮ್ಮ, ರೇಣುಕಮ್ಮ, ರಾಮಯ್ಯ,ಉಮಾದೇವಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗ್ರಾ.ಪಂ.ಸದಸ್ಯೆ ಭಾಗಮ್ಮ ಅಧ್ಯಕ್ಷತೆಯಲ್ಲಿ ಸದಸ್ಯರ ಆಯ್ಕೆ ನಡೆದಿದ್ದು, ಮುಖ್ಯಶಿಕ್ಷಕಿ ನಾಗರತ್ನಬಾಯಿ, ಶಿಕ್ಷಕರಾದ ರಮೇಶ್, ಜಯಲಕ್ಷ್ಮಮ್ಮ ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ