ಬೈಕ್ ಅಯತಪ್ಪಿದ್ದರ ಪರಿಣಾಮ ಬೈಕ್ ಹಿಂಬದಿಯ ಸವಾರ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಸಮೀಪದ ಹೊಸಹಳ್ಳಿ ಹ್ಯಾಂಡ್ ಪೋಸ್ಟ್ ಬಳಿ ಮಂಗಳವಾರ ತಡರಾತ್ರಿ ೧೧ರ ಸಮಯದಲ್ಲಿ ಘಟಿಸಿದೆ.
ಬೆಳುಗುಲಿಯ ವಿಶ್ವನಾಥ್(೨೮) ಮೃತ ದುರ್ದೈವಿಯಾಗಿದ್ದು, ವಿಶ್ವನಾಥ್ ಹಾಗೂ ಕೃಷ್ಣಮೂರ್ತಿ ಎಂಬಿಬ್ಬರು ಬೈಕ್ ನಲ್ಲಿ ಶ್ರೀರಾಂಪುರದ ನೆಂಟರ ಮನೆಯ ಬಾನಕ್ಕೆ ಹೋಗಿ, ಮುಗಿಸಿಕೊಂಡು ವಾಪಸ್ಸ್ ಊರಿಗೆ ಬರುವ ವೇಳೆ ಈ ಘಟನೆ ಸಂಭವಿಸಿದೆ. ಕೃಷ್ಣಮೂರ್ತಿ ಬೈಕ್ ಚಲಾಯಿಸುತ್ತಿದ್ದು ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಹೋಗಿ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಹಿಂಬದಿ ಕುಳಿತಿದ್ದ ವಿಶ್ವನಾಥ್ ಗೆ ತೀವ್ರ ಪೆಟ್ಟಾಗಿ, ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಮೃತಪಟ್ಟರೆ, ಕೃಷ್ಣಮೂರ್ತಿಗೂ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ