ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಅಯೋಜಿಸಿದ್ದ ನೂತನ ಪಶುಚಿಕಿತ್ಸಾ ಕೇಂದ್ರದ ಉದ್ಘಾಟನೆಯನ್ನು ಪಶುಸಂಗೋಪನೆ ಸಚಿವ ಟಿ.ಬಿ.ಜಯಚಂದ್ರ ಶನಿವಾರ ನೆರವೇರಿಸಿದರು
ಹುಳಿಯಾರು ಹೋಬಳಿ ಹೊಯ್ಸಳಕಟ್ಟೆಯಲ್ಲಿನ ನೂತನ ಪಶುಚಿಕಿತ್ಸಾಲಯವನ್ನು ಸಚಿವ ಟಿ.ಬಿ.ಜಯಚಂದ್ರ ಉದ್ಘಾಟಿಸಿದರು. |
ನಂತರ ಅವರು ಮಾತನಾಡಿ ಹುಳಿಯಾರು ಹಾಗೂ ಹೊಯ್ಸಳಕಟ್ಟೆ ಭಾಗ ನನಗೆ ತವರು ಮನೆಯಂತಾಗಿದ್ದು ಈ ಭಾಗದ ಸಂಪೂರ್ಣ ವಿವರ ತಮಗೆ ತಿಳಿದಿದೆ ಎಂದರು. ಹೊಯ್ಸಳಕಟ್ಟೆ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಶು ಆಸ್ಪತ್ರೆ ತೆರೆದಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಕಟ್ಟಡದ ವ್ಯವಸ್ಥೆ ಮಾಡಿಸುವೆ ಎಂದರು. ರೈತರು ರಾಗಿ,ಜೋಳ,ಹೆಸರು ಸೇರಿದಂತೆ ಹೊಲದ ಕಾರ್ಯಗಳ ಜೊತೆಗೆ ಇದಕ್ಕೆ ಪೂರಕವಾಗಿ ಹೈನುಗಾರಿಕೆ, ಕುರಿ,ಕೋಳಿ ಸಾಕಣೆ ಮಾಡುವುದರಿಂದ ಆರ್ಥಿಕವಾಗಿ ಸಬಲರಾಗಬಹುದು ಎಂದರು. ರೈತರು ಯಾವುದೇ ಸಮಯದಲ್ಲೂ ತಮ್ಮ ಆತ್ಮಸ್ಥೈರ್ಯ ಕಳೆದುಕೊಳ್ಳದೆ ಎದುರಾಗುವ ಸಮಸ್ಯೆಗಳನ್ನು ಧೈರ್ಯದಿಂದ ಹೆದರಿಸಿ ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಬೇಡಿ ಎಂದರು.
ಈ ವೇಳೆ ಸಂಸದ ಮುದ್ದಹನುಮೇಗೌಡ, ಶಾಸಕ ಸುರೇಶ್ ಬಾಬು, ಗ್ರಾ.ಪಂ.ಅಧ್ಯಕ್ಷೆ ಮಂಜುಳಾ,ಪಶುಪಾಲನಾ ಉಪನಿರ್ದೇಶಕ ಡಾ|| ಎನ್.ರಾಜಶೇಖರ್,ಸಹಾಯಕ ನಿರ್ದೇಶಕ ಡಾ|| ಎಂ.ಪಿ.ಶಶಿಕುಮಾರ್,ತಹಸೀಲ್ದಾರ್ ಕಾಮಾಕ್ಷಮ್ಮ, ಇಓ ಕೃಷ್ಣಮೂರ್ತಿ, ಜಿ.ಪಂ.ಸದಸ್ಯೆ ನಿಂಗಮ್ಮ,ತಾ.ಪಂ. ಸದಸ್ಯೆ ಕವಿತಾಪ್ರಕಾಶ್,ಜಿಲ್ಲಾಕಾಂಗ್ರೆಸ್ ಕಾರ್ಯದರ್ಶಿ ಗೋವಿಂದರಾಜು, ಗ್ರಾ.ಪಂ.ಸದಸ್ಯರಾದ ಗಿರೀಶ್,ರತ್ನಮ್ಮ,ಪಶುವೈದ್ಯ ಗಂಗಾಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ