ಹುಳಿಯಾರು ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸುತ್ತಮುತ್ತ ಗಿಡಗಂಟೆಗಳು ಬೆಳೆದಿರುವುದಲ್ಲದೆ ಅನಗತ್ಯ ವಸ್ತುಗಳು ತುಂಬಿದ್ದು ಅನೈರ್ಮನ್ಯ ಹೆಚ್ಚಾಗಿದೆ. ಈ ಬಗ್ಗೆ ವೈದ್ಯರು ಗಮನಹರಿಸಿ ಆಸ್ಪತ್ರೆ ಆವರಣದಲ್ಲಿರುವ ಕಸಕಡ್ಡಿಯನ್ನು ತೆರವುಗೊಳಿಸಿ ಸ್ವಚ್ಚತೆ ಕಾಪಾಡುವಂತೆ ಪಂಚಾಯ್ತಿಯ ಕೆಲ ಸದಸ್ಯರು ಹಾಗೂ ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಗವಿರಂಗನಾಥ್(ಗೌಡಿ) ಆಸ್ಪತ್ರೆ ವೈದ್ಯರನ್ನು ಒತ್ತಾಯಿಸಿದ್ದಾರೆ.
ಹುಳಿಯಾರಿನ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಬಿದ್ದಿರುವ ತ್ಯಾಜ್ಯವನ್ನು ಸ್ವಚ್ಚಗೊಳಿಸುವಂತೆ ಅಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಯನ್ನು ಗ್ರಾ.ಪಂ.ಸದಸ್ಯರು ಒತ್ತಾಯಿಸಿದರು. |
ಪಟ್ಟಣದ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವಂತೆ ಇಲ್ಲಿನ ಸಂಘ ಸಂಸ್ಥೆಯವರು , ಸಾರ್ವಜನಿಕರು ಒತ್ತಾಯಿಸುತ್ತಿದ್ದರೂ ಸಹ ಈ ಬಗ್ಗೆ ಮೇಲಾಧಿಕಾರಿಗಳು ಗಮನಹರಿಸಿಲ್ಲ , ಸದ್ಯ ಮಾದರಿ ಆಸ್ಪತ್ರೆಯನ್ನಾಗಿಸಿದ್ದು ಹೊಸ ಕಟ್ಟಡ ಕಾಮಗಾರಿ ನಡೆಯುತ್ತಿದ್ದು ಆಸ್ಪತ್ರೆಯ ಸುತ್ತಮುತ್ತ ತ್ಯಾಜ್ಯ ಹೆಚ್ಚಾಗಿದೆ. ಹಂದಿಗಳು ಸಹ ಆಸ್ಪತ್ರೆ ಕಾಂಪೌಂಡ್ ಪಕ್ಕದಲ್ಲಿ ಬಿಡಾಕಹಾಕಿದ್ದು ಮತ್ತಷ್ಟು ಅನೈರ್ಮಲ್ಯ ಉಂಟುಮಾಡಿದೆ. ಆಸ್ಪತ್ರೆ ಆವರಣದಲ್ಲಿನ ಪೈಪ್ ಲೈನ್ ಹೊಡೆದು ಹತ್ತದಿನೈದು ದಿನಗಳಿಂದ ನೀರು ವ್ಯರ್ಥವಾಗಿ ಹರಿಯುತ್ತಿದ್ದರೂ ಇದನ್ನು ಸರಿಪಡಿಸಿಲ್ಲ. ಇದರಿಂದ ನೀರು ನಿಂತು ಸೊಳ್ಳೆ ಹೆಚ್ಚಳಕ್ಕೆ ಕಾರಣವಾಗುತ್ತಿರುವುದಲ್ಲದೆ, ಡೆಂಗ್ಯೂ,ಚಿಕನ್ ಗುನ್ಯಾದಂತಹ ರೋಗಗಳು ಉಂಟಾಗುವಂತಾಗಿದೆ ಎಂದು ತಾಲ್ಲೂಕು ಯುವ ಜೆಡಿಎಸ್ ಅಧ್ಯಕ್ಷ ಗವಿರಂಗನಾಥ್(ಗೌಡಿ) ದೂರಿದ್ದಾರೆ.
ಆಸ್ಪತ್ರೆಯ ಸ್ವಚ್ಚತೆಯ ಬಗ್ಗೆ ವೈದ್ಯರು ಪ್ರತಿನಿತ್ಯ ಗಮನಕೊಡಬೇಕು ಆದರೆ ಇಲ್ಲಿ ಖಾಯಂ ವೈದ್ಯರಿಲ್ಲದೆ ಹಾಲಿ ಇರುವ ಗುತ್ತಿಗೆ ವೈದ್ಯರು ತಮಗೂ ಇದಕ್ಕೂ ಸಂಬಂಧವಿಲ್ಲದಂತಿದ್ದಾರೆ. ಆಸ್ಪತ್ರೆಯವರು ಸ್ವಚ್ಚತಾ ಕಾರ್ಯ ಮಾಡಲು ಸಾಧ್ಯವಾಗದಿದ್ದರೆ ಪಂಚಾಯ್ತಿಯವರಿಗೆ ತಿಳಿಸಿದರೆ ಪಂಚಾಯ್ತಿಂದಲೇ ಆಸ್ಪತ್ರೆ ಆವರಣದ ಸ್ವಚ್ಚತೆ ಮಾಡಿಸುವುದಾಗಿ ಗ್ರಾ.ಪಂ.ಸದಸ್ಯ ಶಂಕರ್ ವೈದ್ಯರಿಗೆ ತಿಳಿಸಿದರು. ಆಸ್ಪತ್ರೆ ಆವರಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಬಾರದೆಂದು ಬೋರ್ಡ್ ಹಾಕಿದ್ದರೂ ಸಹ ವಾಹನದಾರರು ಈ ಬಗ್ಗೆ ಕಂಡರು ಕಾಣದಂತೆ ನಿರ್ಲಕ್ಷ ಹೊಂದಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ ಈ ಬಗ್ಗೆ ವೈದ್ಯರು ವಾಹನದಾರರಿಗೆ ಎಚ್ಚರಿಕೆ ನೀಡುವಂತೆ ತಿಳಿಸಿದರು. ಈ ವೇಳೆ ಗ್ರಾ.ಪಂ.ಸದಸ್ಯ ಡಾಬಾಸೂರಪ್ಪ, ನಾಗಣ್ಣ ಸೇರಿದಂತೆ ಇತರರಿದ್ದರು.
ವೈದ್ಯೆ ಚಂದನ ಮಾತನಾಡಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಆಸ್ಪತ್ರೆಯ ಹೊರಭಾಗದಲ್ಲಿ ಕಸಕಡ್ಡಿ ಹೆಚ್ಚಾಗಿದೆ. ಪಂಚಾಯ್ತಿಯ ಪೌರಕಾರ್ಮಿಕರನ್ನು ಕಳುಹಿಕೊಟ್ಟರೆ ಆಸ್ಪತ್ರೆಯ ಆವರಣ ಸ್ವಚ್ಚತೆ ಮಾಡಿಸುತ್ತೇವೆ ಇದಕ್ಕೆ ಪಂಚಾಯ್ತಿಯವರು ಸಹಕರಿಸಿ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ