ಎನ್.ಹೆಚ್.೨೩೪ ರಸ್ತೆ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸುವಂತೆ ಹಾಗೂ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಒತ್ತಾಯಿಸಿ ಹೋಬಳಿಯ ಹೊಯ್ಸಳಕಟ್ಟೆ ಗೇಟ್ ನಲ್ಲಿ ವಿವಿಧ ಸಂಘ ಸಂಸ್ಥೆಯವರು, ಜನಪ್ರತಿನಿಧಿಗಳು, ಸಾರ್ವಜನಿಕರು ಕಳೆದ ಸೋಮವಾರ ಪ್ರಾರಂಭಿಸಿದ ಅಹೋರಾತ್ರಿ ಧರಣಿ ೪ನೇ ದಿನವಾದ ಗುರುವಾರವೂ ಮುಂದುವರೆದಿದೆ.
ಹುಳಿಯಾರು-ಶಿರಾ ಮಾರ್ಗದ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವಂತೆ ಒತ್ತಾಯಿಸಿ ಹುಳಿಯಾರು ಹೋಬಳಿ ಹೊಯ್ಸಳಕಟ್ಟೆ ಗೇಟ್ ನಲ್ಲಿ ಗುರುವಾರವೂ ಮುಂದುವರಿದ ಅಹೋರಾತ್ರಿಧರಣಿ. |
ಪ್ರತಿದಿನ ಒಂದೊಂದು ಸಂಘಸಂಸ್ಥೆಯವರು ಪಾಲ್ಗೊಳ್ಳುತ್ತಿದ್ದು ಹೋರಾಟಕ್ಕೆ ಇಂಬುನೀಡುತ್ತಿದ್ದಾರೆ. ಗುರುವಾರದ ಧರಣಿಯಲ್ಲಿ ಜಯಚಂದ್ರನಗರದ ಬೋರನಕಣಿವೆ ಜಲಾಶಯದ ವಿನಾಯಕ ಮೀನುಗಾರರ ಸಂಘದ ಸದಸ್ಯರು ಪಾಲ್ಗೊಂಡು ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗಿದರು.ದಿನನಿತ್ಯ ಭಜನೆ, ಸಾಂಸ್ಕೃತಿಕಕಾರ್ಯಕ್ರಮ ನಡೆಸುವ ಮೂಲಕ ಧರಣಿ ಮುಂದುವರೆದಿದೆ. ಧರಣಿ ಪ್ರಾರಂಭದ ದಿನ ಎಇಇ ಬಂದು ಹೋಗಿದ್ದು ಬಿಟ್ಟರೆ ಮತ್ಯಾವುದೇ ಅಧಿಕಾರಿಗಳು ಬಾರದೆಯಿದ್ದು ಧರಣಿ ನಿರತರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದು ನಾಲ್ಕುದಿನವಾದರೂ ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕಾಗಮಿಸದೆ ಇರುವುದು ಧರಣಿನಿರತರನ್ನು ರೊಚ್ಚಿಗೇಳುವಂತೆ ಮಾಡಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ