ಹುಳಿಯಾರು ಪಟ್ಟಣದ ಪುರಾಣಪ್ರಸಿದ್ದ ಶ್ರೀ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಸಂಜೆ ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ತುಳಿಸಿಯ ವಿಶೇಷ ಅಲಂಕಾರ ಹಾಗೂ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು.
ಹುಳಿಯಾರಿನ ಶ್ರೀರಂಗನಾಥಸ್ವಾಮಿಗೆ ಅಮವಾಸ್ಯೆ ಪೂಜೆ ಅಂಗವಾಗಿ ತುಳಸಿಯಿಂದ ಮಾಡಿರುವ ವಿಶೇಷ ಅಲಂಕಾರ. |
ಪಟ್ಟಣದ ವರುಣ್ ಕುಮಾರ್,ಹೆಚ್.ಆರ್.ದಿವಾಕರ್,ಬಿ.ಎನ್.ತಿಮ್ಮರಾಜ್, ಹೆಚ್.ವಿ.ದೇವರಾಜು ಅವರುಗಳ ಸೇವಾರ್ಥದಲ್ಲಿ ಅಲಂಕಾರ ಸೇವೆ ನಡೆಸಲಾಯಿತು. ನೀಲಾದ್ರಿ ಭಜನಾ ಮಂಡಳಿಯವರು ಭಜನಾಕಾರ್ಯಕ್ರಮ ನಡೆಸಿಕೊಟ್ಟರು. ಅಲಂಕೃತಸ್ವಾಮಿಯ ದರ್ಶನಕ್ಕಾಗಿ ಭಕ್ತಾಧಿಗಳು ಆಗಮಿಸಿದ್ದು ಸ್ವಾಮಿಯ ದರ್ಶನ ಪಡೆದು ಪೂಜೆಸಲ್ಲಿಸಿದರು.ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಶನೇಶ್ವರ ದೇವಾಲಯದಲ್ಲಿ ಅಮವಾಸ್ಯೆ ಅಂಗವಾಗಿ ಸ್ವಾಮಿಗೆ ಅಭಿಷೇಕ,ಅರ್ಚನೆ ಹಾಗೂ ಹೋಮ ನಡೆಯಿತು. ಆಗಮಿಸಿದ ಭಕ್ತಾಧಿಗಳಿಗೆ ಸಮಿತಿಯಿಂದ ಅನ್ನಸಂತರ್ಪಣೆ ನಡೆಸಲಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ