ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ೫ ನೇ ಬ್ಲಾಕ್ ನ ಜಯಮ್ಮ ಅವಿರೋಧವಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ೨ ನೇ ಬ್ಲಾಕ್ ನ ಪಂಚಾಕ್ಷರಿ(ಕೆಸಿಸಿ) ಚುನಾವಣೆ ಮೂಲಕ ಆಯ್ಕೆಯಾದರು.
ಹುಳಿಯಾರು ಹೋಬಳಿ ಕೆಂಕೆರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಜಯಮ್ಮ ಹಾಗೂ ಉಪಾಧ್ಯಕ್ಷರಾಗಿ ಪಂಚಾಕ್ಷರಿ(ಕೆಸಿಸಿ) ಆಯ್ಕೆಯಾಗಿದ್ದಾರೆ. |
ಕೆಂಕೆರೆಯ ಒಟ್ಟು ೧೭ ಸದಸ್ಯರ ಪೈಕಿ ಬಿಸಿಎಂ-ಬಿ ವರ್ಗಕ್ಕೆ ಅಧ್ಯಕ್ಷ ಸ್ಥಾನದ ಮೀಸಲಾತಿ ಬಂದಿದ್ದು ಬಿಜೆಪಿ ಬೆಂಬಲಿತ ಜಯಮ್ಮ ಅವರು ಮಾತ್ರ ನಾಮಪತ್ರಸಲ್ಲಿಸಿದ್ದರ ಹಿನ್ನಲೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ವರ್ಗಕ್ಕೆ ಉಪಾಧ್ಯಕ್ಷ ಸ್ಥಾನದ ಮೀಸಲು ಬಂದಿದ್ದು ಪಂಚಾಕ್ಷರಿ ಹಾಗೂ ನಾಗರಾಜು ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣೆ ನಡೆಯುವಂತಾಗಿತ್ತು.
ಚುನಾವಣೆಯಲ್ಲಿ ಪಂಚಾಕ್ಷರಿಗೆ ೧೬ ಮತ ಹಾಗೂ ನಾಗರಾಜುಗೆ ೧ ಮತ ಬಂದಿದ್ದು ಹೆಚ್ಚು ಮತ ಪಡೆದ ಪಂಚಾಕ್ಷರಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಸಹಾಯಕ ಕೃಷಿ ನಿರ್ದೇಶಕ ಹೊನ್ನದಾಸೇಗೌಡ ಹಾಗೂ ಕಿರಣ್ ಕಾರ್ಯನಿರ್ವಹಿಸಿದ್ದು, ಗ್ರಾ.ಪಂ.ಸದಸ್ಯರಾದ ರಾಮಲಿಂಗಯ್ಯ, ಅಶಾ, ಗಣೇಶ್,ಜಯಣ್ಣ,ಮಂಗಳಮ್ಮ, ಪಂಕಜ, ರೇಣುಕಮ್ಮ,ಬಸವರಾಜು,ತಾ.ಪಂ.ಸದಸ್ಯ ನವೀನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ