ನಗರ ಹಾಗೂ ಗ್ರಾಮೀಣ ಭಾಗದಲ್ಲಿ ನಡೆಯುವ ಕಾನೂನು ಬಾಹಿರ ಕೃತ್ಯಗಳನ್ನು ತಡೆಯಲು ಹಾಗೂ ಆಕ್ರಮಚಟುವಟಿಕೆಗಳನ್ನು ಪತ್ತೆ ಹಚ್ಚಲು, ದೂರುಗಳ ವಿಚಾರಣೆಗೆ ಪೋಲಿಸರಿಗೆ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ ಎಂದು ಚಿ.ನಾ.ಹಳ್ಳಿ ವೃತ್ತ ನಿರೀಕ್ಷಕ ಮಾರಪ್ಪ ತಿಳಿಸಿದರು.
ಹುಳಿಯಾರು ಹೋಬಳಿ ಯಳನಡು ಗ್ರಾ.ಪಂ.ಯ ಸಿಂಗಾಪುರದಲ್ಲಿ ಪೋಲಿಸ್ ಇಲಾಖೆವತಿಯಿಂದ ಅಯೋಜಿಸಿದ್ದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಹುಳಿಯಾರು ಹೋಬಳಿ ಯಳನಡು ಮಜುರೆ ಸಿಂಗಾಪುರದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ವೃತ್ತನಿರೀಕ್ಷಕ ಮಾರಪ್ಪ ಮಾತನಾಡಿದರು. |
ಗ್ರಾಮೀಣ ಭಾಗದಲ್ಲಿ ಕಾನೂನು ಬಾಹಿರ ಘಟನೆಗಳು ಕಣ್ಣಿಗೆ ಕಂಡಂತೆ ನಡೆಯುತ್ತಿದ್ದರೂ ಸಹ ಜನ ಪೋಲಿಸರಿಗೆ ತಿಳಿಸದೆ ಮೌನವಹಿಸುತ್ತಾರೆ. ಅದರ ಬದಲು ಪೋಲಿಸ್ ಗೆ ಮಾಹಿತಿ ನೀಡಿದಲ್ಲಿ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ ಎಂದರು. ಪೋಲಿಸ್ ನವರಿಗೆ ಯಾರು ಮಾಹಿತಿ ನೀಡುತ್ತಾರೆ ಎಂಬುದನ್ನು ಇಲಾಖೆ ಗೌಪ್ಯವಾಗಿಡುವುದರಿಂದ ಸಾರ್ವಜನಿಕರು ಯಾವುದೇ ಭಯಪಡದೆ ತಮಗೆ ತಿಳಿದ ವಿಷಯವನ್ನು ಪೋಲಿಸ್ ಗೆ ತಿಳಿಸಿ ಎಂದು ಮನವಿ ಮಾಡಿದರು.
ಹುಳಿಯಾರು ಪಿಎಸೈ ಬಿ.ಪ್ರವೀಣ್ ಕುಮಾರ್ ಮಾತನಾಡಿ , ಗ್ರಾಮೀಣ ಭಾಗದಲ್ಲಿ ಹೆಚ್ಚು ಮಂದಿ ಇಂದಿಗೂ ಲೈಸೆನ್ಸ್ ಪಡೆಯದೆ ಬೈಕ್, ಕಾರು ಚಲಾಯಿಸುತ್ತಿದ್ದಾರೆ ಹಾಗೂ ೧೮ಕ್ಕೂ ಕಡಿಮೆ ವಯೋಮಾನದವರು ಸಹ ವಾಹನ ಚಲಾಯಿಸುತ್ತಿದ್ದು ಇದು ಕಾನೂನು ಉಲ್ಲಂಘನೆ ಮಾಡಿದಂತೆ ಎಂದರು. ಚಾಲನಾ ಪರವಾನಿಗೆಯನ್ನು ಕಡ್ಡಾಯವಾಗಿ ಪಡೆದ ನಂತರ ವಾಹನ ಚಲಾಯಿಸಬೇಕು ಎಂದು ತಿಳಿಹೇಳಿದರು . ಗ್ರಾಮದಲ್ಲಿ ನಡೆಯುವ ಅಹಿತಕರ ಘಟನೆಗಳ ಬಗ್ಗೆ ಠಾಣೆಗೆ ಅಥವಾ ತಮ್ಮ ಗ್ರಾಮಕ್ಕೆ ಬರುವ ಬೀಟ್ ಪೋಲಿಸ್ ಪೇದೆಗಳಿಗೆ ತಿಳಿಸುವಂತೆ ಮನವಿ ಮಾಡಿದರು.
ಈ ವೇಳೆ ಗ್ರಾ.ಪಂ.ಅಧ್ಯಕ್ಷ ಬಸವರಾಜು,ಉಪಾಧ್ಯಕ್ಷೆ ಶ್ವೇತಾ,ಎ.ಎಸ್.ಐ ಶಿವಪ್ಪ,ಬೀಟ್ ಪೋಲಿಸ್ ಮಲ್ಲಿಕಾರ್ಜುನಯ್ಯ ಗ್ರಾ.ಪಂ.ಸದಸ್ಯರಾದ ದಯಾನಂದ್,ಸುರೇಶ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ